Advertisement
ಪರಿಚಾರಕಿಯರು ಮದ್ಯ ಪೂರೈಸಲು ಅವಕಾಶವಿರುವ ಬಾರ್ ಆಂಡ್ ರೆಸ್ಟೋರೆಂಟ್ ಹಾಗೂ ಪಬ್‌ಗಳಿಗೆ ನಾನಾ ರೀತಿಯ ನಿರ್ಬಂಧ ವಿಧಿಸಲಾಗಿದೆ. ಕಟ್ಟಡ ಸ್ವಾಧೀನ ಪ್ರಮಾಣ ಪತ್ರ ಸೇರಿದಂತೆ ಹಲವು ನಿರಾಕ್ಷೇಪಣಾ ಪತ್ರ ಹೊಂದಿರುವ ವಿಚಾರದಲ್ಲಿ ಪೊಲೀಸ್ ಇಲಾಖೆಯಿಂದ ಅನಗತ್ಯ ಕಿರಕುಳ ನೀಡಲಾಗುತ್ತಿದೆ ಎಂದು ಪಬ್ ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ ಮಾಲೀಕರು ನ್ಯಾಯಲಯದ ಮೊರೆ ಹೋಗಿದ್ದಾರೆ.
Related Articles
Advertisement
ಪೊಲೀಸ್ ಇಲಾಖೆಯ ಮಾರ್ಗಸೂಚಿಯನ್ನು 19 ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್‌ಗಳು ಪಾಲಿಸಲು ಸಾಧ್ಯವಾದ ಕಾರಣ ಅಷ್ಟಕ್ಕೆ ಮಾತ್ರ ಅನುಮತಿ ದೊರೆತಿತ್ತು. ಉಳಿದಂತೆ 64 ಹೆಚ್ಚು ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್‌ಗಳಲ್ಲಿ ಆನುಮತಿ ಇಲ್ಲದಿದ್ದರೂ ಅನಧಿಕೃತವಾಗಿ ಪರಿಚಾರಕಿಯರು ಮದ್ಯ ಪೂರೈಕೆ ಮಾಡುತ್ತಿದ್ದಾರೆ ಎಂಬ ದೂರುಗಳು ಇವೆ.
ಇವುಗಳ ನಿಯಂತ್ರಣಕ್ಕೆ ಆಯಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌ಗಳಿಗೆ ನಗರ ಪೊಲೀಸ್ ಆಯುಕ್ತರು ಮೌಖೀಕ ಸೂಚನೆ ಸಹ ನೀಡಿದ್ದಾರೆ. ಆದರೆ, ಇತ್ತೀಚೆಗೆ ಪರಿಚಾರಕಿಯರು ಮದ್ಯ ಪೂರೈಸಲು ಅನುಮತಿ ಇರುವ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್‌ಗಳಲ್ಲಿ ಕೆಲವೆಡೆ ನಿಯಮ ಉಲ್ಲಂ ಸಲಾಗಿದೆ ಎಂದು ನೋಟಿಸ್ ಜಾರಿ ಮಾಡಲಾಗಿತ್ತು. ಇಂತಹ ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್‌ಗಳಲ್ಲಿ ಲಘು ಸಂಗೀತಕ್ಕೆ ಅವಕಾಶ ಇದೆಯಾ?
ಡಿಜೆ ಇರಬಹುದಾ? ದೊಡ್ಡ ಪರದೆ ಟಿವಿ ಅಳವಡಿಸಬಹುದಾ? ದೊಡ್ಡ ದೊಡ್ಡ ಧ್ವನಿವರ್ಧಕ ಅಳವಡಿಸಬಹುದಾ? ಎಂಬಿತ್ಯಾದಿ ಪ್ರಶ್ನೆಗಳು ಇದ್ದು, ಈ ವಿಚಾರದಲ್ಲಿ ಸ್ಪಷ್ಟತೆ ಇಲ್ಲ ಎಂದು ಹೇಳಲಾಗಿದೆ. ಆದರೆ, ನಾವು ನಿಯಮ ಪಾಲಿಸಿದರೂ ಅನಗತ್ಯ ಕಿರುಕುಳ ನೀಡಲಾಗುತ್ತಿದೆ ಎಂಬುದು ಬಾರ್ ಮತ್ತು ಪಬ್ ಮಾಲೀಕರ ಆರೋಪ.
ನಿಷೇಧ: ಈ ಹಿಂದೆ ಬೆಂಗಳೂರಿನಲ್ಲಿ ಲೈವ್‌ಬ್ಯಾಂಡ್ ಹಾಗೂ ಡ್ಯಾನ್ಸ್‌ಬಾರ್‌ಗಳಿಗೆ ಅವಕಾಶವಿತ್ತು. ಆದರೆ, ಅವುಗಳಿಂದ ಕಾನೂನು ಸುವ್ಯವಸ್ಥೆ ಪಾಲನೆ ಕಷ್ಟವಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿ ಬಂದ್ ಮಾಡಿಸಿದ್ದರು. ಸಾಕಷ್ಟು ಒತ್ತಡ ಇದ್ದರೂ ಆಗಿನ ಸರ್ಕಾರವೂ ಮಣಿದಿರಲಿಲ್ಲ.