Advertisement
ಅರ್ಜುನನಂತಹ ಮಹಾಪರಾಕ್ರಮಿಯೇ ಯುದ್ಧ ಬೇಡವೆಂದು ಹಿಮ್ಮೆಟ್ಟುವಾಗ ಸಾಮಾನ್ಯರಾದ ನಾವು ನಿತ್ಯ ಸಂಸಾರದ ಸೆಣೆಸಾಟಕೆ ಅಂಜುವುದರಲ್ಲಿ ಆಶ್ಚರ್ಯ ಏನಿಲ್ಲ. ಆದರೆ ಸಂಸಾರದಲ್ಲಿ ಹೆಜ್ಜೆ ಇಟ್ಟಾದ ಮೇಲೆ ಹೆಜ್ಜೆ ಹೆಜ್ಜೆಯಲ್ಲೂ ನಾವು ಕಾದಾಡಲೇಬೇಕಿದೆ. ಒಮ್ಮೆ ಹೊರಗಿನ ಶತ್ರುಗಳ ಜೊತೆಗೆ, ಒಮ್ಮೆ ಒಳಗಿನ ಶತ್ರುಗಳ ಜೊತೆಗೆ. ಅಂತರಂಗದ ಯುದ್ಧ ಬಹಳ ದೀರ್ಘಕಾಲ¨ªಾಗಿದ್ದು, ಅಂತ್ಯವೇ ಇಲ್ಲದಂತೆ ಗೋಚರಿಸುತ್ತದೆ ಮತ್ತು ಅದು ನಮ್ಮನ್ನು ಒಳಗಿನಿಂದ ಛಿದ್ರಛಿದ್ರವಾಗಿಸುತ್ತದೆ. ನಿನ್ನೆಯ ದಿನ ನಾ ಏನು ಮಾಡಿದೆ? ನಾನೇಕೆ ತಪ್ಪಾದ ಆಯ್ಕೆಯನ್ನು ಮಾಡಿದೆ? ನಾನು ಇದರ ಬದಲು ಅದನ್ನು ಮಾಡಿದ್ದರೆ ಚೆನ್ನಾಗಿತ್ತೋ ಏನೋ? ನಾನು ಚಿಕ್ಕಂದಿನಲ್ಲಿ ವಿದ್ಯಾಭ್ಯಾಸಕ್ಕೆ ಚೆನ್ನಾಗಿ ಗಮನ ಕೊಟ್ಟಿದ್ದಿದ್ದರೆ, ಇಂದು ಬದುಕಿನಲ್ಲಿ ಹೋರಾಟ ಕಡಿಮೆಯಾಗುತ್ತಿತ್ತೋ ಏನೋ? ನಾನು ಇವಳ(ನ)ನಲ್ಲದೆ ಮತ್ಯಾರನ್ನಾದರೂ ವಿವಾಹವಾಗಿದ್ದಿದ್ದರೆ ಚೆನ್ನಾಗಿತ್ತೋ ಏನೋ? ನನಗೆ ಇನ್ನೂ ಒಂದೆರಡು ಮಕ್ಕಳಾಗಿದ್ದಿದ್ದರೆ ಚೆನ್ನಾಗಿತ್ತೋ ಏನೋ? ನಾನು ಅಂದು ಧೈರ್ಯವಾಗಿ ಎದ್ದು ನಿಂತು ಮಾತನಾಡಿದ್ದರೆ ಒಳಿತಾಗುತ್ತಿತ್ತೋ ಏನೋ? ನಾನಂದು ಅಲ್ಲಿಗೆ ಹೋಗಿರದಿದ್ದರೆ ಚೆನ್ನಾಗಿರುತ್ತಿತ್ತೋ ಏನೋ? ಅಯ್ಯೋ, ಕೆಲಸ ಕೆಟ್ಟರೆ ಏನು ಮಾಡುವುದು? ಖಾಯಿಲೆ ಬಂದು ನರಳುವಂತಾದರೆ? ಕೆಲಸ ಕಳೆದುಕೊಂಡರೆ? ಬದುಕಿನುದ್ದಕ್ಕೂ ಬೇಕಾಗುವಷ್ಟು ಹಣ ನನ್ನ ಬಳಿ ಇದೆಯೇ? ಅನ್ಯರು ನನ್ನನ್ನು ಏಕೆ ಸರಿಯಾಗಿ ಅರ್ಥಮಾಡಿಕೊಳ್ಳುವುದಿಲ್ಲ? ಹೀಗೆ ಇನ್ನೂ ನೂರಾರು ಅಥವಾ ಸಾವಿರಾರು ಪ್ರಶ್ನೆಗಳು ನಮ್ಮ ಮನಸ್ಸಿನಲ್ಲಿ ಸದಾಕಾಲ ಮೇಲೇಳುತ್ತಲೇ ಇರುತ್ತವೆ.
Related Articles
ಅವುಗಳನ್ನು ನಿವಾರಿಸಲು ಪ್ರಯತ್ನಿಸಬಾರದು; ಪ್ರೀತಿ, ದಯೆ ಮತ್ತು ನಮ್ರತೆಯಿಂದ ಅವುಗಳನ್ನು ತಿದ್ದಿ, ರೂಪಿಸಿ, ಸರಿಪಡಿಸಲು ಸಮಯ ನೀಡಬೇಕು. ಆ ಸಮಯದಲ್ಲಿ ನಮ್ಮ ಜೀವನದಲ್ಲಿ ಬೇರೆಯೇ ಒಂದು ಶಕ್ತಿಯು ಹರಿಯುತ್ತದೆ. ಅಂತಹ ಶಕ್ತಿಗಳಲ್ಲಿ ಎರಡು ವಿಧಗಳಿವೆ – ಒಂದು, ತನ್ನ ಅಸ್ತಿತ್ವಕ್ಕೆ ಕಾರಣಗಳನ್ನು ಮತ್ತು ಗುರಿಗಳನ್ನಿಟ್ಟುಕೊಂಡಂತಹ, ನಮ್ಮ ಅಹಂಕಾರವನ್ನು ಬೆಂಬಲಿಸುವ ಒಂದು ಸಾಮಾನ್ಯ ಶಕ್ತಿ ಹಾಗೂ ಮತ್ತೂಂದು ನಮ್ಮ ಅಹಂಕಾರವನ್ನು ಕರಗಿಸಿ ನಾಶಮಾಡುವ ದೈವೀ ಶಕ್ತಿ. ಈ ಶಕ್ತಿ ನಮ್ಮ ಬದುಕಿಗೆ ಒಂದು ಹೊಸ ಆಯಾಮ ನೀಡುತ್ತದೆ. ಅಂತಹ ಶಕ್ತಿಯ ಒಳಹರಿವಿಗೆ ನಮ್ಮನ್ನು ನಾವು ತೆರೆದುಕೊಳ್ಳಬೇಕು, ಸಕಾರಾತ್ಮಕವಾಗಿ ಮುನ್ನಡೆಯಬೇಕು ಮತ್ತು ಅದರ ಹಾದಿಯಲ್ಲಿ ನಿರಂತರವಾಗಿರಬೇಕು. ನಮ್ಮಲ್ಲಿ ಮೂರು ಕೇಂದ್ರಗಳುಂಟು. ಅವುಗಳೇ ದೇಹ, ಭಾವನೆ ಮತ್ತು ಬುದ್ಧಿಶಕ್ತಿ. ಈ ಮೂರೂ ಕೇಂದ್ರಗಳು ನಮ್ಮ ನಿತ್ಯದ ಜೀವನದಲ್ಲಿ ಸಮನ್ವಯಗೊಂಡಾಗ ನಮ್ಮೊಳಗೇ ಒಂದು ದೈವೀ ಶಕ್ತಿಯು ಪ್ರವಹಿಸಿ ಅದ್ಭುತ ರೀತಿಯ ಬದಲಾವಣೆಗಳು ಕಂಡುಬರುತ್ತವೆ. ಆಗ ಜಗತ್ತೆಲ್ಲಾ ನಮಗೆ ಸುಂದರವಾಗಿ ಕಾಣಲಾರಂಭವಾಗುತ್ತದೆ.
Advertisement
ಮನಸ್ಸನ್ನು ನಿರಾಳವಾಗಿಸಿದರೆ ದೇಹ ಶಾಂತವಾಗುತ್ತದೆ. ದೇಹ ಶಾಂತವಾದರೆ ದೇಹಕ್ಕನುಕೂಲವಾದ ರಸಗಳ ಉತ್ಪತ್ತಿಯಾಗಿ ಆರೋಗ್ಯ ಉಂಟಾಗುತ್ತದೆ. ಹಾಗಲ್ಲದೆ, ಸದಾ ಚಿಂತೆಯಲ್ಲಿ ಮುಳುಗಿರುವ ಮನಸ್ಸು ದೇಹವನ್ನು ದಣಿಸುತ್ತಾ ಅನಾರೋಗ್ಯದ ಆಗರವಾಗುತ್ತದೆ. ಹಾಗಾಗಿ ಮನಸ್ಸನ್ನು ನಿರಾತಂಕಗೊಳಿಸುವುದು ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ಅತೀ ಅವಶ್ಯಕ.
ಆತಂಕದಿಂದ ಕೂಡಿದ ಮನಸ್ಸು ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತದೆ. ಯಾವುದೇ ಕೆಲಸವನ್ನು ಮಾಡುವಾಗಲೂ ನಿರಾತಂಕವಾಗಿರುವುದು ಬಹಳ ಅವಶ್ಯಕ. ಸಂತೋಷವಾಗಿರಬೇಕಾದರೆ, ಸಂತೋಷವಾಗಿರಬೇಕು ಅಷ್ಟೇ. ವಸ್ತು ವಿಷಯ ಅಥವಾ ವ್ಯಕ್ತಿಗಳಿಂದ ಸಂತೋಷ ಸಿಗುತ್ತದೆ, ಆಗ ನಾನು ಸಂತೋಷವಾಗಿರುತ್ತೇನೆ ಎಂದೋ ಅಥವಾ ಇಂತಿಂತಹದ್ದು ಸಿಕ್ಕರೆ ನನಗೆ ಸಂತೋಷ ಸಿಗುತ್ತದೆ ಎಂದೋ ಭಾವಿಸಿದರೆ, ಅದು ಕೇವಲ ಭ್ರಮೆ ಅಷ್ಟೇ! ಹಾಗೆ ಅವುಗಳು ಸಿಗದಿದ್ದರೆ ನಮಗೆ ಕೋಪಬರುತ್ತದೆ. ಆ ಕೋಪ, ಅವುಗಳನ್ನು ಪಡೆಯಲಾಗದ ನಮ್ಮ ಮೇಲೆಯೇ ಆಗಿರಬಹುದು/ ನಾವು ದೂಷಿಸುವ ಅನ್ಯರ ಮೇಲಾ ಗಿರಬಹುದು. ಆದರೆ ಕೋಪ ಯಾವ ಕಾರಣಕ್ಕೆ ಬಂದರೂ, ಯಾರ ಮೇಲೆ ಬಂದರೂ, ಅದು ಮೊದಲು ಭಾದಿಸುವುದು ಕೇವಲ ನಮ್ಮ ಮನಸ್ಸನ್ನು ಮತ್ತು ತತ್ಕಾರಣವಾಗಿ ನಮ್ಮ ದೇಹದ ಆರೋಗ್ಯವನ್ನು. ಹಾಗಾಗಿ ಸಂತೋಷವಾಗಿರಬೇಕು. ನಗುನಗುತ್ತಾ ಸಂತೋಷವಾಗಿರಬೇಕು. ಅದೇ ಆನಂದಕ್ಕೆ ಸಿದ್ಧ ಔಷಧಿ.
ನಾವು ಸದಾಕಾಲ ನಮ್ಮ ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳ ಬಗ್ಗೆ ಜಾಗ ರೂಕರಾಗಿರಬೇಕು. ಪ್ರಯತ್ನಪೂರ್ವಕವಾಗಿ ನಮ್ಮೊಳಗೇ ಉಂಟಾಗುವ ಋಣಾತ್ಮಕ ಆಲೋಚನೆಗಳನ್ನು ಹತ್ತಿಕ್ಕಿ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಬೇಕು. ಎಲ್ಲರಲ್ಲೂ ಪ್ರೀತಿಯಿಂದ ಇಡೀ ಜಗತ್ತನ್ನೇ ಅಪ್ಪಿಕೊಳ್ಳುವಂತಹ ಮನೋಭಾವ ನಮ್ಮದಾಗಬೇಕು. ಈ ಧನಾತ್ಮಕ ಆಲೋಚನೆಗಳನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವುದೇ ಸಮಸ್ಯೆ. ಇದಕ್ಕೆ ನಮ್ಮ ಪೂರ್ವಜರು ನಮಗೆ ಮಾರ್ಗಗಳನ್ನು ತೋರಿ¨ªಾರೆ. ಭಕ್ತಿ, ಧ್ಯಾನ, ಸೇವೆ, ಅಧ್ಯಯನ, ಶ್ರದ್ಧೆ, ತ್ಯಾಗ ಮುಂತಾದ ಗುಣಗಳನ್ನು ನಮ್ಮಲ್ಲಿ ಬೆಳೆಸಿಕೊಂಡರೆ ಆಗ ಋಣಾತ್ಮಕ ಗುಣಗಳಾದ ದ್ವೇಷ, ಅಸೂಯೆ, ಕೋಪ ಮುಂತಾದವುಗಳು ನಮ್ಮನ್ನು ತೊರೆದು ಹೋಗುತ್ತವೆ. ನಮ್ಮ ಬದುಕಿನಲ್ಲಿ ನಡೆಯುವ ವಿದ್ಯಮಾನಗಳೇ ನಮಗೆ ಪಾಠ ಕಲಿಸುತ್ತವೆ.
ರವಿ ತಿರುಮಲೈ