Advertisement
“ಮುಂದಿನ ತಲೆಮಾರು ಮಾಂಸ ಮತ್ತು ರಕ್ತದಿಂದ ಕೂಡಿದ ಇಂತಹ ವ್ಯಕ್ತಿ ಈ ಭೂಮಿಯ ಮೇಲೆ ನಡೆದಾಡಿಕೊಂಡಿದ್ದ ಎಂದು ನಂಬುವುದೂ ಕಷ್ಟವಾಗಬಹುದು’- ಸಾಪೇಕ್ಷ ಸಿದ್ಧಾಂತವನ್ನು ಶೋಧಿಸಿದ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ (1879-1955) ಗಾಂಧೀಜಿ ಕುರಿತು ಆಡಿದ ಮಾತಿದು.
Related Articles
Advertisement
ಬೇಡ್ತಿ, ಅಘನಾಶಿನಿ ನದಿಗೆ ಅಣೆಕಟ್ಟು ನಿರ್ಮಿ ಸುವ ಪ್ರಸ್ತಾವವನ್ನು ಸರಕಾರ ಅಂಗೀಕರಿಸಿದ ಸಂದರ್ಭ ವಿಧಾನಸಭೆಯಲ್ಲಿ ಗರ್ಜಿಸಿ ಯೋಜನೆ ನಿಲ್ಲಿಸುವಂತೆ ಮಾಡಿದ ಅನಸೂಯ ಶರ್ಮರಿಗೆ “ಗಂಡು ಶಾಸಕಿ’ ಎಂಬ ಕೀರ್ತಿ ಇದೆ. 40 ವರ್ಷಗಳ ಬಳಿಕವೂ ಬೇಡ್ತಿ, ಅಘನಾಶಿನಿ ಕೊಳ್ಳ ಸಂರಕ್ಷಣ ಸಮಿತಿ ಸಕ್ರಿಯವಾಗಿದೆ.ಅನಸೂಯರನ್ನು ಭೇಟಿಯಾದವರು, ನಾಲ್ಕೂ ಷರತ್ತುಗಳು ಈಗಾಗಲೇ ನನ್ನಲ್ಲಿವೆ ಎಂದವರು ಕೆ.ರತ್ನಾಕರ ಶೆಣೈ. ದಿವಾನರಾಗುವ ಮೊದಲು ಸರ್ ಎಂ.ವಿಶ್ವೇಶ್ವರಯ್ಯ ಕುಳಿತಿದ್ದ ರಾಜ್ಯದ ಮುಖ್ಯ ಎಂಜಿನಿಯರ್ ಸ್ಥಾನವನ್ನು ಮುಂದೊಂದು ದಿನ ಶೆಣೈ ಅಲಂಕರಿಸಿದರು. “ನಾನು ಮಣಿಪಾಲ ಎಂಐಟಿಯಲ್ಲಿ ಓದು ಮುಗಿಸಿದ (ಎರಡನೆಯ ಬ್ಯಾಚ್ 1958-61) ತತ್‌ಕ್ಷಣ ಕೆಲಸಕ್ಕೆ ಸೇರುವಾಗ ಕಾಪು ಗೋವಿಂದ ಶೆಟ್ಟಿಯವರಂತಹ ಕರ್ಮಣ್ಯೇವಾಧಿಕಾರಾಸ್ಥೆ.. ಎಂಬಂತೆ ಬದುಕುತ್ತಿದ್ದ ಹಿರಿಯ ಅಧಿಕಾರಿ ಗಳು, ಸಂಸ್ಕಾರ ಕೊಟ್ಟ ತಂದೆ, ತಾಯಿ, ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಅವಕಾಶ ಕಲ್ಪಿಸಿದ ಡಾ| ಟಿಎಂಎ ಪೈ, ಎಂಜಿಎಂ ಕಾಲೇಜಿನಲ್ಲಿದ್ದ ಪ್ರೊ| ಬಿ.ವಿ.ಆಚಾರ್, ಪ್ರೊ| ಯು.ಎಲ್. ಆಚಾರ್‌ರಂತಹ ಶಿಕ್ಷಕರು ಈ ಪ್ರಾತಃಸ್ಮರಣೀಯರೇ ನನ್ನ ಜೀವನದ ಪಂಚಾಂಗ’ ಎನ್ನುತ್ತಾರೆ ಶೆಣೈ. 1980-81ರಲ್ಲಿ ಶ್ರವಣಬೆಳಗೊಳದ ಗೊಮ್ಮ ಟೇಶ್ವರನ ಸಹಸ್ರಮಾನ, 1992ರ ಮಹಾ ಮಸ್ತಕಾಭಿಷೇಕದ ಹೊಣೆಗಾರಿಕೆ ನಿರ್ವಹಿಸಿದ ಶೆಣೈಯವರು ರಾಜ್ಯದ ಮುಖ್ಯ ಎಂಜಿನಿಯರ್ ಆಗಿ 1998ರಲ್ಲಿ ನಿವೃತ್ತಿಯಾದ ಬಳಿಕ ಕೇಂದ್ರ ಸರಕಾರದ ಇಂಡಿಯನ್ ನ್ಯಾಶನಲ್ ಟ್ರಸ್ಟ್ ಆಫ್ ಆರ್ಟ್ ಆ್ಯಂಡ್ ಕಲ್ಚರ್ ಹೆರಿಟೇಜ್ (ಇಂಟೇಕ್) ಮೂಲಕ ಮೂಡಬಿದಿರೆ ಸಾವಿರಕಂಬದ ಬಸದಿ, ಉಳ್ಳಾಲದ ಜೈನಮಂದಿರ, ಬನವಾಸಿಯಲ್ಲಿ ಹೂತುಹೋಗಿದ್ದ ನಾಲ್ಕು ದೇವಸ್ಥಾನಗಳ ಉತVನನ, ಬಾರಕೂರಿನ ಪಂಚಲಿಂಗೇಶ್ವರ, ಮಣಿಗಾರ ಕೇರಿ, ಚೌಳಿಕೇರಿ, ಮೂಡುಕೇರಿ ದೇವಸ್ಥಾನಗಳಿಗೆ ಮರುಜೀವ ಕೊಟ್ಟರು. ಅನಸೂಯರಿದ್ದ 1980ರ ದಶಕವೆಂದರೆ ಬಹಳ ಹಿಂದಿನ ಕಾಲವಲ್ಲ. ಯಾವುದೇ ಅಧಿಕಾರಿ ಈಗೇನಾದರೂ ವರ್ಗಾವಣೆ ಕೋರಿದರೆ ಇಂತಹ ಷರತ್ತುಗಳನ್ನು ಕೇಳುವ ಸ್ಥಿತಿಯಲ್ಲಿ ಶಾಸಕರು ಇದ್ದಾರೆಯೋ? ಅಥವಾ ಇಂತಹ ಗುಣಗಳುಳ್ಳ ಅಧಿಕಾರಿಗಳು ಸಚಿವರು, ಮುಖ್ಯಮಂತ್ರಿಗಳಿಗೆ ಬೇಕೋ? ಆಳುವವರಿಗೆ ಇಂತಹವರು ಬೇಡವಾದರೆ ಆಡಳಿತದಿಂದ ಎಂತಹ ಆಡಳಿತ ನಿರೀಕ್ಷಿಸಲು ಸಾಧ್ಯ? ಅನಸೂಯರ ಷರತ್ತುಗಳನ್ನು ಸುಲಭದಲ್ಲಿ ಸ್ವೀಕರಿಸುವ ಧೈರ್ಯ ಶೆಣೈಯವರಿಗೆ ಇತ್ತು, ನಿವೃತ್ತಿಯಾಗುವವರೆಗೂ ಇತ್ತು. ನಿವೃತ್ತಿ ಅನಂತರ ಪುನರುತ್ಛರಿಸುವ ಧೈರ್ಯವೂ ಇದೆ. ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಹುದ್ದೆಯಿಂದ ಹಂತ ಹಂತವಾಗಿ ಮೇಲೇರಿ ಮುಖ್ಯ ಎಂಜಿನಿಯರ್ ಆದವರು ಕೆಲವು ಮಂದಿ ಇರಬಹುದು. ನಾಲ್ಕು ಷರತ್ತುಗಳಲ್ಲಿ ಕೊನೆಯ ಮೂರನ್ನಾದರೂ ಪಾಲಿಸುವವರಿರಬಹುದು, ಮೊದಲ ಷರತ್ತನ್ನು ಪಾಲಿಸುವವರಿದ್ದರೆ..? ಗಾಂಧೀಜಿ, ಐನ್‌ಸ್ಟೈನ್, ಅನಸೂಯ ಶರ್ಮ ಈಗಿಲ್ಲ. ಶೆಣೈಯವರಂತಹವರು ಈಗ ಅಧಿಕಾರದಲ್ಲಿದ್ದಾರೋ ಎಂಬ ಪ್ರಶ್ನೆ ಬರಬಹುದು. 81ರ ಶೆಣೈ ಉತ್ತಮ ಆರೋಗ್ಯ ದೊಂದಿಗೆ, ಅಮೆರಿಕದ ವೇತನ ಬೇಡ ಭಾರತದ ವೇತನ ಸಾಕೆಂದು ನೆಲೆಸಿದ ಪುತ್ರನ ಜತೆ ಉಡುಪಿ ಇಂದ್ರಾಳಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. -ಮಟಪಾಡಿ ಕುಮಾರಸ್ವಾಮಿ