ಮಣಿಪಾಲ: ಕೋವಿಡ್-19 ಹೊಡೆತಕ್ಕೆ ಸಿಲುಕಿ ನೆಲಕಚ್ಚಿರುವ ದೇಶದ ಆರ್ಥಿಕತೆಯನ್ನು ಮೇಲಕ್ಕೆತ್ತಲು ಪ್ರಧಾನಿ ಮೋದಿ ಘೋಷಿಸಿರುವ ‘ಆತ್ಮ ನಿರ್ಭರ” ಆರ್ಥಿಕ ಪ್ಯಾಕೇಜ್ ದೇಶದ ಆರ್ಥಿಕತೆಗೆ ಬಲ ತುಂಬುವಲ್ಲಿ ಯಶಸ್ವಿಯಾಗಬಹುದೇ – ನಿಮ್ಮ ಅಭಿಪ್ರಾಯವೇನು
ಮನೋಜ ಪೂಜಾರ್: ರಾಜಕೀಯ ನಾಯಕರು ಮತ್ತು ಜನ ಅದನ್ನು ಹೇಗೆ ಉಪಯೋಗಿಸಿ ಕೊಳ್ಳಿತ್ತಾರೆಂಬುವುದರ ಮೇಲೆ ಇದರ ಯಶಸ್ಸು ಅವಲಂಭಿಸಿದೆ
ಸಣ್ಣಮಾರಪ್ಪ. ಚಂಗಾವರ: ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಸಾಗಿದರೆ ಜನರಿಗೆ ಯಾವ ರೀತಿಯ ಆರ್ಥಿಕ ನೆರವು ಸಹಾಯವಾಗುವುದಿಲ್ಲ. ದೇಶದ ಆರ್ಥಿಕತೆ ಸುಧರಿಸುವುದು ಕಷ್ಟ. ಆರ್ಥಿಕತೆ ಸುಧಾರಣೆಗೆ ಬರಬೇಕಾದರೆ ಕೋವಿಡ್ ನಿಯಂತ್ರಣಕ್ಕೆ ದೇಶದ ಎಲ್ಲರೂ ಸಹಾಕರಿಸಬೇಕು. ಯಾಕೆಂದರೆ ದೇಶದ ಪ್ರತಿಯೊಂದು ಚಟುವಟಿಕೆಯು ಕಾರ್ಯನಿರ್ವಾಹಿಸಿದರೆ ಮಾತ್ರ ಆರ್ಥಿಕತೆಯ ಚಕ್ರ ತಿರುಗುತ್ತದೆ.
ಕೃಷ್ಣ ಜೋಶಿ: ಬಿಟ್ಟಿ ಸಹಾಯ ಮಾಡುವದನ್ನು ಬಿಟ್ಟು ಎಲ್ಲರಿಗೂ ಉದ್ಯೋಗ ಕಲ್ಪಿಸಲಿ. ರಿಕಾಮಿ ಇದ್ದವರಲ್ಲಿ ಕೆಟ್ಟ ಯೋಚನೆ ಬಂದು ದೇಶಕ್ಕೆ ಮಾರಕವಾಗುತ್ತದೆ. ದೇಶಾದ್ಯಂತ ತುಂಬಿರುವ ದ್ರೋಹಿಗಳನ್ನು ನಿಯಂತ್ರಣ ದಲ್ಲಿಡಲು ಕ್ರಮ ಕೈಕೊಳ್ಳಲಿ
ಸಂಧ್ಯಾ ಎ ಗುಡಿಗಾರ್: ಕೊಟ್ಟ ಮೇಲೆ ಅಲ್ವೇ ಹೇಳೋದು. ಇದೂ 15 ಲಕ್ಷದ ಸುಳ್ಳಿನ ಕಥೆಯಾದರೆ ಏನು ಮಾಡೋದು ?
ದಾವೂದ್ ಕೂರ್ಗ್: ಅದು ಬಡವರಿಗೆ ಹೇಗೆ ಪ್ರಯೋಜನಕ್ಕೆ ಬರುತ್ತೆ ಅಂತ ವಿವರಿಸಿ