Advertisement

ಸಚಿವನ ಮಾಡಿ ಎಂದು ಮತ್ತೂಬ್ಬರ ಮನೆ ಬಾಗಿಲು ತಟ್ಟಲಾರೆ!

11:52 AM Jul 02, 2018 | Team Udayavani |

ಆನೇಕಲ್‌: “ನನಗೆ ಸಚಿವ ಸ್ಥಾನ ಕೊಡಿ ಎಂದು ಹಿಂದೆ ಯಾರನ್ನೂ ಕೇಳಿಲ್ಲ. ಈಗಲೂ ಕೇಳುತ್ತಿಲ್ಲ, ಮುಂದೆ ಕೂಡ ಕೇಳುವುದಿಲ್ಲ. ನಾನು ಮಂತ್ರಿ ಆದರೂ, ಆಗದಿದ್ದರೂ ಜನ ನನಗೆ ಕೊಡುವ ಗೌರವ ಕೊಟ್ಟೇ ಕೊಡುತ್ತಾರೆ. ಹೀಗಾಗಿ ಸಚಿವ ಸ್ಥಾನ ಬೇಕೆಂದು ಯಾರ ಮನೆ ಬಾಗಿಲನ್ನೂ ತಟ್ಟುವ ಅವಶ್ಯಕತೆ ನನಗಿಲ್ಲ,’ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

Advertisement

ಆನೇಕಲ್‌ ನಗರ ಮತ್ತು ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಸಮಿತಿಯಿಂದ ಅತ್ತಿಬೆಲೆಯಲ್ಲಿ ಹಮ್ಮಿಕೊಂಡಿದ್ದ ಶಾಸಕ ಬಿ.ಶಿವಣ್ಣ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುಗೆ ಶ್ರಮಿಸಿದ ಮುಖಂಡರು, ಕಾರ್ಯಕರ್ತರು ಮತ್ತು
ಅಭಿಮಾನಿಗಳ ಅಭಿನಂದನೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಅಗತ್ಯ ಇಲ್ಲದಿದ್ದರೆ ದೂರ ತಳ್ಳಲಿ: “ಸಮಾರಂಭದಲ್ಲಿ ಈ ಮೊದಲು ಸಂಸದ ಡಿ.ಕೆ.ಸುರೇಶ್‌ ಅವರು ಮಾತನಾಡುವಾಗ “ಸಚಿವ ಸ್ಥಾನ’ದ ವಿಷಯ ಪ್ರಸ್ತಾಪಿಸಿದ್ದಕ್ಕೆ ಆ ಬಗ್ಗೆ ಮಾತನಾಡುತ್ತಿದ್ದೇನೆ,’ ಎಂದು ರಾಮಲಿಂಗಾ ರೆಡ್ಡಿ, “ನಾನು ಮತ್ತು ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ ಪಕ್ಷದಿಂದ ಸತತ 7 ಬಾರಿ ವಿಧಾನಸಭೆಗೆ ಆಯ್ಕೆ
ಆಗಿದ್ದೆವೆ. ಬೇರೆ ಪಕ್ಷಗಳಿಂದ ವಲಸೆ ಬಂದು ಕಾಂಗ್ರೆಸ್‌ನಿಂದ ಗೆದ್ದವರು ಸಾಕಷ್ಟು ಮಂದಿಯಿದ್ದಾರೆ. ಆದರೆ ನಾವು ಮಾತ್ರ ಎಂದೂ ಕಾಂಗ್ರೆಸ್‌ನಿಂದ ಹೊರ ಹೋಗುವ ಆಲೋಚನೆ ಕೂಡ ಮಾಡಿಲ್ಲ. ನನಗೂ 65 ವರ್ಷ ವಯಸ್ಸಾಯಿತು. ಪಕ್ಷಕ್ಕೆ ಅಗತ್ಯವಿದ್ದರೆ ನಮ್ಮನ್ನು ಇಟ್ಟುಕೊಳ್ಳಲಿ. ಇಲ್ಲದಿದ್ದರೆ ದೂರ ತಳ್ಳಲಿ. ಆದರೆ ಸಚಿವ ಸ್ಥಾನಕ್ಕಾಗಿ ನಾನು ಮತ್ತೂಬ್ಬರ ಮನೆ ಬಾಗಿಲು ಬಡಿಯುವ ಪ್ರಶ್ನೆಯೇ ಇಲ್ಲ,’ ಎಂದು ಸ್ಪಷ್ಟಪಡಿಸಿದರು.

ಇದಕ್ಕೂ ಮೊದಲು ಮಾತನಾಡಿದ ಸಂಸದ ಡಿ.ಕೆ.ಸುರೇಶ್‌, ಕಾರ್ಯಕರ್ತರು, ಮುಖಂಡರ ಅವಿರತ ಶ್ರಮದ ಫ‌ಲವಾಗಿ ಆನೇಕಲ್‌ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಿವಣ್ಣ ಸತತ ಎರಡನೇ ಬಾರಿ ಗೆಲವು ಸಾಧಿಸಿದ್ದಾರೆ. ಆದರೆ ರಾಜ್ಯದಲ್ಲಿ ಪಕ್ಷ ನಿರೀಕ್ಷಿಸಿದಷ್ಟು ಸ್ಥಾನಗಳನ್ನು ಪಡೆಯಲಿಲ್ಲ. ಕಾರಣ, ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ, ಪಕ್ಷದ ರಾಷ್ಟ್ರೀಯ ನಾಯಕರ ತೀರ್ಮಾನದಂತೆ ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ ಎಂದು ಹೇಳಿದರು.

ನೀವು ಸುಮ್ಮನೆ ಕೂತರೆ ಚಪ್ಪಡಿ ಕಲ್ಲು ಎಳೀತಾರೆ!
“ರಾಮಲಿಂಗಾ ರೆಡ್ಡಿ ಅವರಿಗೆ ಮಂತ್ರಿ ಸ್ಥಾನ ಸಿಗಬೇಕಿತ್ತು. ಆದರೇ, ಏಕೆ ಸಿಗಲಿಲ್ಲ ಎಂಬುದು ನನಗೂ ಗೊತ್ತಿಲ್ಲ. ಯಾರು ಪ್ರಭಾವ ಹೊಂದಿರುತ್ತಾರೋ ಮತ್ತು ಯಾರು ಪಕ್ಷಕ್ಕೆ ನಿಷ್ಠರಾಗಿರುತ್ತಾರೋ, ಅಂಥವರನ್ನು ತುಳಿಯುವ ಕೆಲಸ ಪಕ್ಷದ ಒಳಗೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ವರಿಷ್ಠರು ಪ್ರಮುಖರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಹೀಗಾಗಿ ನೀವು (ರಾಮಲಿಂಗಾ ರೆಡ್ಡಿ) ಸುಮ್ಮನೆ ಕೂರಬೇಡಿ. ಬೆಂಗಳೂರಿನಲ್ಲಿ ಕಾಂಗ್ರೆಸ್‌ 15 ಸ್ಥಾನ ಗೆಲ್ಲಲು ನಿಮ್ಮ ಶ್ರಮ, ಕೊಡುಗೆ ಕೂಡ ಸಾಕಷ್ಟಿದೆ. ನೀವು ಸುಮ್ಮನೆ ಕುಳಿತರೆ ನಿಮ್ಮ ಮೇಲೆ ಚಪ್ಪಡಿ ಎಳೆಯವುದು ಗ್ಯಾರಂಟಿ,’ ಎಂದು ಡಿ.ಕೆ.ಸುರೇಶ್‌ ಮಾರ್ಮಿಕವಾಗಿ ನುಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next