Advertisement

ಕೋರ್ಟ್‌ಗೆ ಹೋಗುವಂತಿಲ್ಲ

06:25 AM May 17, 2018 | Team Udayavani |

ಹೊಸದಿಲ್ಲಿ: ಸಾರ್ವಜನಿಕ ವಲಯದ ಕಂಪನಿಗಳು ಮತ್ತು ಸರಕಾರದ ವಿವಿಧ ಇಲಾಖೆಗಳ ಮಧ್ಯೆ ಇರುವ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಕೋರ್ಟ್‌ಗೆ ಹೋಗುವಂತಿಲ್ಲ. ಇಂತಹ ಭಿನ್ನಾಭಿಪ್ರಾಯಗಳಿಗೆ ಸಂಪುಟ ಕಾರ್ಯದರ್ಶಿಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂಬ ಹೊಸ ನೀತಿ ಜಾರಿಗೆ ತರಲು ಕೇಂದ್ರ ನಿರ್ಧರಿಸಿದೆ. 

Advertisement

ರೈಲ್ವೇ  ಆದಾಯ ತೆರಿಗೆ,ಕಂದಾಯ,ಸೀಮಾ ಸುಂಕ ಇಲಾಖೆಗಳಿಗೆ ಈ ನೀತಿ ಅನ್ವಯ ಆಗುವುದಿಲ್ಲ. ಸರ್ಕಾರದ ಇಲಾಖೆಗಳ ಜತೆ ಹಾಗೂ ಇತರ ಸರ್ಕಾರಿ ಕಂಪನಿಗಳ ಜೊತೆಗೆ ವಿವಾದಗಳಿದ್ದರೂ ಈ ನೀತಿ ಅನ್ವಯವಾಗಲಿದೆ. ಹೊಸ ನೀತಿಯಿಂದ ಅನಗತ್ಯ ಸಂಘರ್ಷಗಳು ಹಾಗೂ ಯೋಜನೆಗಳ ಜಾರಿಯಲ್ಲಿ ವಿಳಂಬವನ್ನು ತಡೆಯಬಹುದು.

ಮೊದಲ ಹಂತದಲ್ಲಿ ಇಂತಹ ವಿವಾದಗಳನ್ನು, ಆಡಳಿತಾತ್ಮಕ ಇಲಾಖೆಗಳ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿಗೆ ವಹಿಸಲಾಗುತ್ತದೆ. ಈ ಸಮಿತಿಯಲ್ಲಿ ಸಮಸ್ಯೆ ಪರಿಹಾರವಾಗದಿದ್ದರೆ, ಇದನ್ನು ಸಂಪುಟ ಕಾರ್ಯದರ್ಶಿಗೆ ವಹಿಸಲಾಗುತ್ತದೆ. ಅವರ ನಿರ್ಧಾರವೇ ಅಂತಿಮವಾಗಿರುತ್ತದೆ. ಮೂರು ತಿಂಗಳೊಳಗಾಗಿ ಈ ಪ್ರಕ್ರಿಯೆ ಮುಗಿಯಬೇಕು ಎಂದು ನಿಗದಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next