Advertisement

ಇನ್ನು ಪ್ರೊಫೈಲ್ ಫೋಟೋ ಡೌನ್‌ಲೋಡ್‌ ಸಾಧ್ಯವಿಲ್ಲ

12:55 AM May 18, 2019 | Team Udayavani |

ನವದೆಹಲಿ: ಒಬ್ಬ ವಾಟ್ಸ್‌ಆ್ಯಪ್‌ ಬಳಕೆದಾರರ ಪ್ರೊಫೈಲ್ ಫೋಟೋಗಳನ್ನು ಮತ್ತೂಬ್ಬರು ಡೌನ್‌ಲೋಡ್‌ ಮಾಡಿಕೊಳ್ಳುವ ಸೌಲಭ್ಯವನ್ನು ವಾಟ್ಸ್‌ಆ್ಯಪ್‌ ಸಂಸ್ಥೆ ರದ್ದುಗೊಳಿಸಿದೆ. ಆ್ಯಂಡ್ರಾಯ್ಡ ಆಪರೇಟಿಂಗ್‌ ಸಿಸ್ಟಂ ಆಧಾರಿತ ಎಲ್ಲಾ ಫೋನ್‌ಗಳಿಗಾಗಿ ಬಿಡುಗಡೆ ಮಾಡಲಾಗಿರುವ ವಾಟ್ಸ್‌ಆ್ಯಪ್‌ನ ನೂತನ 2.19.60.5ನೇ ಆವೃತ್ತಿಯಲ್ಲಿ ಡೌನ್‌ಲೋಡ್‌ ಆಯ್ಕೆ ಸಿಗದು. ಮತ್ತೂಂದೆಡೆ, ಆ್ಯಪಲ್ ಫೋನ್‌ಗಳಿಗಾಗಿ ಬಿಡುಗಡೆ ಮಾಡಲಾಗಿರುವ ವಾಟ್ಸ್‌ಆ್ಯಪ್‌ನ ಹೊಸ ಆವೃತ್ತಿಯಲ್ಲಿ ನೋಟಿಫಿಕೇಷನ್‌ ಸೆಂಟರ್‌ನಲ್ಲಿ ಯಾವುದೋ ಒಂದು ಸಂದೇಶದೊಂದಿಗೆ ಬಂದಿರಬಹುದಾದ ಸ್ಟಿಕರ್‌ಗಳನ್ನು ಪೂರ್ವಭಾವಿಯಾಗಿ ನೋಡುವ ಅವಕಾಶ ಕಲ್ಪಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next