Advertisement

ಮಂಗಳನಲ್ಲಿ ಅನ್ಯಗ್ರಹ ಜೀವಿಗಳಿರಲು ಸಾಧ್ಯವಿಲ್ಲ?

08:49 AM Jul 08, 2017 | |

ಲಂಡನ್‌: ಮಂಗಳನಲ್ಲಿ ಜೀವಿಗಳಿವೆಯೇ? ಮನುಷ್ಯ ವಾಸಯೋಗ್ಯವಾಗಿದೆಯೇ ಎಂಬ ಪ್ರಶ್ನೆಗಳ ನಡುವೆ, ಅಲ್ಲಿ ವಿಷಕಾರಿ ರಾಸಾಯನಿಕಗಳಿದ್ದು, ಆದ್ದರಿಂದ ಅನ್ಯಗ್ರಹ ಜೀವಿಗಳಿರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ವೊಂದು ಹೇಳಿದೆ. ಎಡಿನ್‌ಬರ್ಗ್‌ ವಿವಿ ಸಂಶೋಧಕರು, ಮಂಗಳನ ಮೇಲ್ಮೆ„ನಲ್ಲಿರುವ ರಾಸಾಯನಿಕ ಸಂರಚನೆಗಳ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಅಲ್ಲಿ ಪೇರ್ಶಲೋಟ್ರೇಟ್ಸ್‌ ಹೆಸರಿನ ರಾಸಾಯನಿಕವಿದ್ದು, ಆಲ್ಟ್ರಾವಾಯ್ಲೆಟ್‌ ಕಿರಣಗಳು ಮೇಲ್ಮೆ„ ಮೇಲೆ ಬಿದ್ದಾಗ, ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿವೆ. ಗಗನಯಾತ್ರೆ ವೇಳೆ ಬಾಹ್ಯಾಕಾಶ ನೌಕೆಯಲ್ಲಿನ ಬ್ಯಾಕ್ಟೀರಿಯಾಗಳನ್ನೂ ಇದು ಕೊಲ್ಲಬಹುದು. ಆದ್ದರಿಂದ ಈ ಅಧ್ಯಯನವನ್ನು ಮಂಗಳ ಯಾತ್ರೆ ವೇಳೆ ಪರಿಗಣಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next