Advertisement
ಮೊದಲಿಂದಲೂ ಚೀನ ಪಾರಮ್ಯ
2010ರಲ್ಲಿ ಚೀನಾ ಅಮೆರಿಕವನ್ನು ಹಿಂದಿಕ್ಕಿ ಜಗತ್ತಿನ ಅತಿದೊಡ್ಡ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿತು. ಆದಾಗ್ಯೂ, 1980ರಿಂದಲೇ ಚೀನ “ಲೋ ಎಂಡ್’ ಪ್ರಾಡಕ್ಟ್ ಗಳ ಪ್ರಮುಖ ಉತ್ಪಾದನಾ ರಾಷ್ಟ್ರವಾಗಿತ್ತಾದರೂ ಮುಂದಿನ ಮೂರು ದಶಕಗಳಲ್ಲಿ ಔಷಧದಿಂದ ಹಿಡಿದು ಎಲೆಕ್ಟ್ರಾನಿಕ್ ಉತ್ಪನ್ನಗಳ ತಯ್ನಾರಿಯವರೆಗೂ ಅದರ ಉತ್ಪಾದನಾ ಸಾಮರ್ಥ್ಯ ವಿಸ್ತರಿಸಿತು. ಅಷ್ಟೇಕೆ, ಭಾರತಕ್ಕೆ ಅದು ಎಲೆಕ್ಟ್ರಾನಿಕ್, ವೈದ್ಯಕೀಯ ಪರಿಕರಗಳು, ಔಷಧಗಳ ಜತೆಗೆ, ಕುಂಕುಮ, ಗಣಪತಿ ಮೂರ್ತಿಗಳು, ಪ್ಲಾಸ್ಟಿಕ್ ಆಟಿಕೆಗಳಂಥ ಚಿಕ್ಕ ಪುಟ್ಟ ವಸ್ತುಗಳನ್ನೂ ಭಾರೀ ಪ್ರಮಾಣದಲ್ಲಿ ರಫ್ತು ಮಾಡುತ್ತದೆ! ವಿಶ್ವಸಂಸ್ಥೆಯ ಸಾಂಖೀÂಕ ವಿಭಾಗದ ಅಂದಾಜಿನ ಪ್ರಕಾರ 2018ರ ವೇಳೆಗೆ ಜಾಗತಿಕ ಉತ್ಪಾದನೆಯಲ್ಲಿ ಕೇವಲ ಚೀನಾವೊಂದರ ಪಾಲು 28 ಪ್ರತಿಶತದಷ್ಟಿತ್ತು!
ಮಾತುಕತೆ
ಭಾರತದಲ್ಲಿ ಉತ್ಪಾದನೆಯನ್ನು ಆರಂಭಿಸಲು ಯೋಚಿಸುತ್ತಿರುವ ಸಾವಿರಕ್ಕೂ ಅಧಿಕ ಕಂಪೆನಿಗಳು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ಸ್ತರದ ಅಧಿಕಾರ ವರ್ಗದೊಂದಿಗೆ ಮಾತುಕತೆಯಲ್ಲಿ ತೊಡಗಿವೆ. ಅಲ್ಲದೇ, ಈ ಕಂಪನಿಗಳ ಅವಶ್ಯಕತೆಗಳನ್ನು ಅರಿಯಲು ಹಾಗೂ ಅವುಗಳಿಗೆ ನಿಯಮಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ವಿಶೇಷ ಟಾಸ್ಕ್ ಫೋರ್ಸ್ ಸ್ಥಾಪಿಸಿದ್ದು, ಈ ತಂಡ ಅಮೆರಿಕ, ಜಪಾನ್, ಬ್ರಿಟನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಮತ್ತು ಸಿಂಗಾಪುರದ ಬಹುರಾಷ್ಟ್ರೀಯ ಕಂಪೆನಿಗಳ ಸಂಪರ್ಕದಲ್ಲಿ ಇದೆ. ಭಾರತದ ಜತೆಗೆ ಮಾತುಕತೆ ನಡೆಸಿರುವ ಸಾವಿರಕ್ಕೂ ಅಧಿಕ ಕಂಪೆನಿಗಳಲ್ಲಿ ಸುಮಾರು ಮುನ್ನೂರು ಕಂಪೆನಿಗಳು ಮೊಬೈಲ್ ,ಎಲೆಕ್ಟ್ರಾನಿಕ್ ವೈದ್ಯಕೀಯ ಪರಿಕರಗಳು, ಟೆಕ್ಸ್‌ಟೈಲ್ಸ್ ಮತ್ತು ಸಿಂಥೆಟಿಕ್ ಫ್ಯಾಬ್ರಿಕ್ ಕ್ಷೇತ್ರದಲ್ಲಿ ಹೆಸರುವಾಸಿಯಾಗಿವೆ. ನೆಲೆ ಬದಲಿಸಲು ಜಪಾನ್,
ಅಮೆರಿಕ ತಯ್ಯಾರಿ
ಏಪ್ರಿಲ್ 13ರಂದು ಅಮೆರಿಕನ್ ಸಂಸದ ಮಾರ್ಕ್ ಗ್ರೀನ್ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ಹೊಸ ಬಿಲ್ ಎದುರಿಟ್ಟಿದ್ದಾರೆ. ಚೀನದಿಂದ ನೆಲೆ ಬದಲಿಸಲು ಸಿದ್ಧವಿರುವ ಅಮೆರಿಕನ್ ಕಂಪನಿಗಳಿಗೆ ಆರ್ಥಿಕ ಸಹಾಯ ಮಾಡಬೇಕು ಎನ್ನುವ ಪ್ರಸ್ತಾವ ಇದರಲ್ಲಿದೆ. ಇನ್ನೊಂದೆಡೆ, ಜಪಾನ್ ಈಗಾಗಲೇ ಈ ನಿಟ್ಟಿನಲ್ಲಿ ಹೆಜ್ಜೆಯನ್ನೂ ಇಟ್ಟಿದೆ. ಮಾರ್ಚ್ ತಿಂಗಳಿಂದಲೇ ಆ ದೇಶವು ಚೀನದಿಂದ ನೆಲೆ ಬದಲಿಸುವಂತೆ ತನ್ನ ಕಂಪನಿಗಳ ಮನವೊಲಿಸುತ್ತಿದ್ದು, ಈ ನಿಟ್ಟಿನಲ್ಲಿ 2.2 ಶತಕೋಟಿ ಡಾಲರ್‌ಗಳಷ್ಟು ಸಹಾಯವನ್ನೂ ಘೋಷಿಸಿದೆ.
Related Articles
ಭಾರತದಲ್ಲಿ ವಸ್ತುವೊಂದರ ಉತ್ಪಾದನಾ ವೆಚ್ಚ ಚೀನಕ್ಕಿಂತಲೂ 10-12 ಪ್ರತಿಶತ ಅಧಿಕವಾಗುತ್ತದೆ ಎನ್ನುತ್ತಾರೆ ಉದ್ಯಮ ಪರಿಣತರು. ಚೀನ ಎಂದಷ್ಟೇ ಅಲ್ಲ, ಬಾಂಗ್ಲಾದೇಶ, ವಿಯೆಟ್ನಾಂ ಸೇರಿದಂತೆ ಅನೇಕ ಏಷ್ಯನ್ ರಾಷ್ಟ್ರಗಳಲ್ಲೂ ಉತ್ಪಾದನಾ ವೆಚ್ಚ ಭಾರತಕ್ಕಿಂತ ಕಡಿಮೆ ಇದೆ. ಆದರೆ, ಭಾರತ ಮತ್ತು ಚೀನದಲ್ಲಿ ಜನಸಂಖ್ಯೆ ಅತ್ಯಧಿಕವಿರುವುದರಿಂದಾಗಿ, ಉತ್ಪಾದಕ ಕಂಪೆನಿಗಳಿಗೆ ದೇಶೀಯ ಸ್ತರದಲ್ಲೇ ಭಾರೀ ಪ್ರಮಾಣದಲ್ಲಿ ಗ್ರಾಹಕರು ಲಭ್ಯವಾಗುತ್ತಾರೆ ಎನ್ನುವುದನ್ನೂ ಮರೆಯುವಂತಿಲ್ಲ. ಆದಾಗ್ಯೂ ಕೇಂದ್ರ ಸರ್ಕಾರವು ಉತ್ಪಾದನಾ ಘಟಕಗಳಿಗಾಗಿಯೇ ಬೃಹತ್ ಪ್ರಮಾಣದಲ್ಲಿ ಲ್ಯಾಂಡ್ ಬ್ಯಾಂಕ್(ಭೂಪ್ರದೇಶವನ್ನು ಮೀಸಲಿಡುವ) ಸ್ಥಾಪನೆಗೆ ಮುಂದಾಗಿದೆಯಾದರೂ, ಇದೊಂದರಿಂದಲೇ ಎಲ್ಲವೂ ಸಾಧ್ಯವಾಗದು ಎನ್ನುತ್ತಾರೆ ಹಾಂಕಾಂಗ್‌ನಲ್ಲಿನ ಫೈನಾನ್ಶಿಯಲ್ ಟೈಮ್ಸ್ ಬ್ಯೂರೋ ಮುಖ್ಯಸ್ಥ ರಾಹುಲ್ ಜಾಕೋಬ್. “ಚೀನ ಇಂಟಿಗ್ರೇಟೆಡ್ ಇನ್‌ಫ್ರಾಸ್ಟ್ರಕ್ಚರ್ ಅಂದರೆ, ಬಂದರುಗಳು, ಹೈವೇಗಳು, ಕೌಶಲ್ಯಭರಿತ ಕೆಲಸಗಾರರು, ಅತ್ಯಾಧುನಿಕ ಸಾರಿಗೆ ವ್ಯವಸ್ಥೆಯನ್ನು ಹೊಂದಿದೆ. ಈ ಕಾರಣದಿಂದಾಗಿ ಅದರ ಪೂರೈಕೆ ಸರಪಳಿಯು ಅತ್ಯಂತ ಸುಗಮವಾಗಿ ಸಾಗುತ್ತದೆ. ಈ ಹಾದಿಯಲ್ಲಿ ಭಾರತ ಸಾಗಬೇಕಾದ ದಾರಿಯಿನ್ನೂ ದೊಡ್ಡದಿದೆ. ಬರೀ ಜಾಗ ಕೊಟ್ಟಾಕ್ಷಣ ದೊಡ್ಡ ಕಂಪನಿಗಳು ರಾತ್ರೋರಾತ್ರಿ ಬರುತ್ತವೆ ಎಂದಲ್ಲ. ಮುಖ್ಯವಾಗಿ ಚೀನಾ ದಶಕಗಳಿಂದ ಜಾಗತಿಕ ಪೂರೈಕೆ ಜಾಲದಲ್ಲಿ ತನ್ನ ಬಲಿಷ್ಠ ಅಸ್ತಿತ್ವ ರೂಪಿಸಿಕೊಂಡಿದೆ” ಎನ್ನುತ್ತಾರೆ ರಾಹುಲ್…
Advertisement
ಕಾರ್ಪೊರೇಟ್ ತೆರಿಗೆಯಲ್ಲಿ ಇಳಿಕೆಭಾರತ ಸರ್ಕಾರವು ವಿದೇಶಿ ಹೂಡಿಕೆದಾರರನ್ನು ಆಕರ್ಷಿಸಲು ಹಲವಾರು ಸುಧಾರಣೆಗಳನ್ನು ಜಾರಿಗೆ ತಂದಿದೆ. ಉದಾಹರಣೆಗೆ, ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆಯನ್ನು 25.27 ಪ್ರತಿಶತಕ್ಕೆ ಇಳಿಸಿದ್ದಷ್ಟೇ ಅಲ್ಲದೇ, ಹೊಸ ಉತ್ಪಾದಕರಿಗೆ ಈ ಪ್ರಮಾಣವನ್ನು 17 ಪ್ರತಿಶತಕ್ಕೆ ತಗ್ಗಿಸಿದೆ! 17 ಪ್ರತಿಶತ ಕಾರ್ಪೊರೇಟ್ ತೆರಿಗೆ ಆಗ್ನೇಯ ಏಷ್ಯಾದಲ್ಲೇ ಅತ್ಯಂತ ಕಡಿಮೆ ಎನ್ನುವುದು ಉಲ್ಲೇಖನೀಯ. ತೆರಿಗೆ ದರಗಳಲ್ಲಿ ಇಳಿಕೆ ಹಾಗೂ ಜಿಎಸ್ಟಿಯ ರೂಪದಲ್ಲಿ ಏಕ ತೆರಿಗೆಯ ಮೂಲಕ ಉತ್ಪಾದನಾ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶ ಬಂಡವಾಳವನ್ನು ಆಕರ್ಷಿಸುವ ಗುರಿ ಭಾರತಕ್ಕಿದೆ. ಈ ಹಿನ್ನೆಲೆಯಲ್ಲಿ ವಿದೇಶಗಳಲ್ಲಿರುವ ರಾಜತಾಂತ್ರಿಕರು ಕೂಡ ಆ ದೇಶದಲ್ಲಿನ ಎಂಎನ್‌ಸಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಭಾರತಕ್ಕೆ ಪೈಪೋಟಿ
ನೀಡುತ್ತಿರುವ ರಾಷ್ಟ್ರಗಳು
ಸದ್ಯಕ್ಕೆ ಭಾರತಕ್ಕೆ ವಿಯೆಟ್ನಾಂ, ಬಾಂಗ್ಲಾದೇಶ, ದಕ್ಷಿಣ ಕೊರಿಯಾ ಮತ್ತು ತೈವಾನ್ ಪ್ರಮುಖ ಪ್ರತಿಸ್ಪರ್ಧಿಗಳಾಗಿ ಬದಲಾಗಿವೆ. ಅದರಲ್ಲೂ ವಿಯೆಟ್ನಾಂ ಮತ್ತು ಬಾಂಗ್ಲಾದೇಶ ಉತ್ಪಾದನಾ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ತೋರಿಸುತ್ತಿದ್ದು, ಅವುಗಳೇ ಎಂಎನ್ಸಿಗಳಿಗೆ ನೆಚ್ಚಿನ ಪ್ರದೇಶಗಳು ಎನ್ನುತ್ತಾರೆ ಪರಿಣತರು. ಗಮನಾರ್ಹ ಸಂಗತಿಯೆಂದರೆ, ಬಾಂಗ್ಲಾದೇಶ, ತೈವಾನ್ ಮತ್ತು ವಿಯೆಟ್ನಾಂನಲ್ಲಿ ಕಾರ್ಮಿಕ ಕಾನೂನುಗಳು ದುರ್ಬಲವಾಗಿವೆ. ಹೀಗಾಗಿ, ಕಂಪನಿಗಳಿಗೆ ಆ ರಾಷ್ಟ್ರಗಳು ನೆಚ್ಚಿನ ತಾಣಗಳೂ ಹೌದು! ಅಮೆರಿಕದ ಚಿತ್ತ ವಿಯೆಟ್ನಾಂನತ್ತ
ಜೂನ್ 2018ರಿಂದ ಅಮೆರಿಕ-ಚೀನಾ ನಡುವೆ ವ್ಯಾಪಾರ ಸಮರ ಆರಂಭವಾದಾಗಿನಿಂದಲೂ ಅಮೆರಿಕ ವಿಯೆಟ್ನಾಂನೊಂದಿಗೆ ವ್ಯಾಪಾರ ಹೆಚ್ಚಿಸಿದೆ. ಈ ಎರಡು ವರ್ಷದಲ್ಲಿ ವಿಯೆಟ್ನಾಂನಿಂದ ಅಮೆರಿಕದ ಆಮದು ಪ್ರಮಾಣ 50 ಪ್ರತಿಶತದಷ್ಟು ಏರಿಕೆಯಾದರೆ, ತೈವಾನ್‌ನಿಂದ ಅದರ ಆಮದು ಪ್ರಮಾಣದಲ್ಲಿ 30 ಪ್ರತಿಶತ ಏರಿಕೆಯಾಗಿದೆ.