Advertisement

ಜೇನುನೊಣ ಮನುಷ್ಯರ ಚಹರೆಗಳನ್ನು ಗುರುತಿಟ್ಟುಕೊಳ್ಳಬಲ್ಲದು!

06:00 AM Aug 30, 2018 | |

ನೀವು ದಾರಿಯಲ್ಲಿ ನಡೆದು ಹೋಗುತ್ತಿರುತ್ತೀರಿ. ಯಾರೋ ನಿಮ್ಮನ್ನು ಗುರುತು ಹಿಡಿದು ಕರೆದಂತಾಗುತ್ತದೆ. ನೀವು ಸುತ್ತಲೂ ನೋಡುತ್ತೀರಿ. ಯಾರೂ ಕಾಣುವುದಿಲ್ಲ. ನಿಮಗೆ ದಿಗಿಲಾಗುವುದು ಖಂಡಿತ. ಯಾರು ಕರೆದಿರಬಹುದಪ್ಪಾ ಎಂದುಕೊಂಡು ದಿಗಿಲುಪಡುವಷ್ಟರಲ್ಲಿ ಜೇನುನೊಣ ನಿಮ್ಮ ಬಳಿ ಹಾರಾಡುವುದನ್ನು ಗಮನಿಸುತ್ತೀರಿ. ನಿಮ್ಮನ್ನು ಗುರುತಿಸಿದ್ದು ಜೇನುನೊಣವೇ ಎಂದು ಅನುಮಾನ ಬಂದರೂ ಇರಲಿಕ್ಕಿಲ್ಲ ಎಂದು ಸಾರಾಸಗಟಾಗಿ ತಳ್ಳಿ ಹಾಕಿಬಿಡುತ್ತೀರಿ. ಆದೇ ತಪ್ಪು. ಜೇನುನೊಣ ಮನುಷ್ಯರನ್ನು ಗುರುತಿಸುವುದಿಲ್ಲ ಅನ್ನೋದು ತಪ್ಪು. 

Advertisement

ನಾವು ನಮಗೆ ಬೇಕಾದವರ ಚಹರೆಗಳನ್ನು ನೆನಪಿಟ್ಟುಕೊಳ್ಳುವ ಹಾಗೆಯೇ ಜೇನುನೊಣವೂ ಮನುಷ್ಯರ ಮುಖಗಳನ್ನು ನೆನಪಿಟ್ಟುಕೊಳ್ಳಬಹುದಂತೆ. ಜೇನುನೊಣ ಎಷ್ಟು ಗಾತ್ರದ್ದು ಎನ್ನುವುದು ನಿಮಗೆ ಗೊತ್ತೇ ಇರುತ್ತೆ. ಅದರ ಮೆದುಳು ನಮ್ಮ ನಿಮ್ಮ ಮೆದುಳಿಗಿಂತ 20,000 ಪಟ್ಟು ಚಿಕ್ಕದು ಎಂಬ ಸಂಗತಿ ನಿಮಗೆ ಗೊತ್ತೆ. ಅಷ್ಟು ಚಿಕ್ಕ ಮೆದುಳನ್ನು ಹೊಂದಿರುವುದರ ಹೊರತಾಗಿಯೂ ಅದು ನೆನಪಿಟ್ಟುಕೊಳ್ಳುತ್ತದೆ ಎಂದರೆ ಅದು ಸೋಜಿಗವೇ ಸರಿ. ದೊಡ್ಡ ಗಾತ್ರದ ಮೆದುಳನ್ನು ಹೊಂದಿರುವ ಪ್ರಾಣಿಗಳು ಮಾತ್ರವೇ ಚಹರೆಗಳನ್ನು ಗುರುತಿಟ್ಟುಕೊಳ್ಳಬಲ್ಲವು ಎಂದೇ ಇಲ್ಲಿಯವರೆಗೂ ತಿಳಿಯಲಾಗಿತ್ತು. 

ಆದರೆ ಚಿಕ್ಕ ಮೆದುಳನ್ನು ಹೊಂದಿದ ಜೀವಿಗಳೂ ಚಹರೆಗಳನ್ನು ನೆನಪಿಟ್ಟುಕೊಳ್ಳಬಲ್ಲವು ಎಂಬುದು ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಆದರೆ, ಒನ್‌ ಸ್ಮಾಲ್‌ ಚೇಂಜ್‌ - ಜೇನುನೊಣದ ನೆನಪುಗಳು ಕಲರ್‌ ಕಲರ್‌ ಆಗಿರುವುದಿಲ್ಲ. ಬದಲಾಗಿ ಕಪ್ಪು ಬಿಳು ಚಿತ್ರಗಳ ಸಂಯೋಜನೆಯನ್ನು ಹೊಂದಿರುತ್ತವೆ. ನಾವು ಹೇಳುವುದಿಷ್ಟೆ - ಜೇನುನೊಣಗಳ ತಂಟೆಗೆ ಹೋಗದಿರುವುದೇ ಒಳಿತು. ಹೋದಿರೆಂದರೆ ಹೇಗೋ ಚಹರೆಯನ್ನು ಗುರುತಿಟ್ಟುಕೊಳ್ಳುವುದರಿಂದ ಮುಂದೊಂದು ದಿನ ಹುಡುಕಿಕೊಂಡು ಬಂದು ಕಚ್ಚಿಬಿಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next