Advertisement

ವ್ಯಕ್ತಿಗತ ಪ್ರಯತ್ನದಿಂದ ಕ್ಯಾಂಪಸ್‌ ಸೆಲೆಕ್ಷನ್‌

09:40 PM Dec 10, 2019 | mahesh |

ವಿದ್ಯಾರ್ಥಿಗಳಿಗೆ ಪದವಿ ಅಂತಿಮ ವರ್ಷದಲ್ಲಿ ಇರುವಾಗಲೇ ಭವಿಷ್ಯದ ಬಗ್ಗೆ ಯೋಚನೆ ಶುರುವಾಗುತ್ತದೆ. ಕೈಯಲ್ಲಿ ಒಂದು ನೌಕರಿ ಇಟ್ಟುಕೊಂಡೆ ಕಾಲೇಜಿನಿಂದ ಹೊರಬೀಳಬೇಕು ಎಂಬ ಕನಸು ಎಲ್ಲ ವಿದ್ಯಾರ್ಥಿಗಳಿಗಿರುತ್ತದೆ. ಈ ಹಿನ್ನೆಲೆಯಲ್ಲಿ ಕ್ಯಾಂಪಸ್‌ ಸೆಲೆಕ್ಷನ್‌ ವಿದ್ಯಾರ್ಥಿ ಜೀವನದ ಪ್ರಮುಖ ಹಂತವಾಗಿದ್ದು ಈ ಬಗ್ಗೆ ಪೂರ್ವ ತಯಾರಿ ಹೇಗಿರಬೇಕು ಮತ್ತು ಯಾವ ನಿಯಮಗಳನ್ನು ಪಾಲಿಸಬೇಕು ಎಂಬ ಕೆಲವು ಅಂಶಗಳು ಇಲ್ಲಿವೆ.

Advertisement

ಸಂದರ್ಶನಕ್ಕೆ ತಯಾರಿ
ಈ ಸ್ಪರ್ಧಾತ್ಮಕ ಸಂದರ್ಶನದಲ್ಲಿ ಪೈಪೋಟಿ ನೀಡಿ ಉದ್ಯೋಗ ಗಿಟ್ಟಿಸಿಕೊಳ್ಳಲು ರೆಸ್ಯೂಮ್‌ನಿಂದ ಸಂದರ್ಶನದವರೆಗೂ ಸೂಕ್ತ ತಯಾರಿ ಅಗತ್ಯ. ಸಾಮಾನ್ಯವಾಗಿ ಸಂದರ್ಶನವು ಪೂರ್ವನಿಯೋಜಿತ ಚರ್ಚೆ, ಆಪ್ಟಿಟ್ಯೂಡ್‌ ಟೆಸ್ಟ್‌, ಗುಂಪು ಚರ್ಚೆ ಹೀಗೆ ವಿವಿಧ ಹಂತಗಳನ್ನು ಸಂದರ್ಶನ ಒಳಗೊಂಡಿರುತ್ತದೆ.  ಈ ಹಂತದಲ್ಲಿ ವಿದ್ಯಾರ್ಥಿಯು ಸ್ವಯಂ ಆಸಕ್ತಿಯಿಂದ ತನ್ನ ನ್ಯೂನತೆ ಮತ್ತು ಸಾಧ್ಯತೆಗಳನ್ನು ಅರಿತುಕೊಂಡು ಹಿಂದಿರುವ ವಿಷಯಗಳ ಕುರಿತು ಹೆಚ್ಚಿನ ಅಭ್ಯಾಸ ನಡೆಸಿ.

ಕಂಪೆನಿಯ ಬಗ್ಗೆ ಒಂದಷ್ಟು ಮಾಹಿತಿ ಇರಲಿ
ಸಂದರ್ಶನಕ್ಕೆ ಹಾಜರಾಗುವ ಮುನ್ನ ಕಂಪೆನಿ ಬಗ್ಗೆ ಸಾಧ್ಯವಾದಷ್ಟು ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಪ್ರಯತ್ನ. ಕೆಲವೊಮ್ಮೆ ಸಂದರ್ಶಕರು ತಮ್ಮ ಸಂಸ್ಥೆಯ ಕುರಿತು ಪ್ರಶ್ನೆ ಕೇಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಂಪೆನಿ ಬಗ್ಗೆ ಸಂಶೋಧನೆ ನಡೆಸುವ ವೇಳೆ ಆ ಕಂಪೆನಿಯ ಸೇವೆ, ಉತ್ಪನ್ನಗಳ ಬಗ್ಗೆ, ನೀವು ಬಯಸುತ್ತಿರುವ ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಿಳಿದುಕೊಳ್ಳಿ. ಜತೆಗೆ ಆ ಉದ್ಯೋಗಕ್ಕೆ ಬೇಕಾದ ಅಗತ್ಯ ಅರ್ಹತೆಗಳು, ಕೌಶಲಗಳನ್ನು ನೀವು ಹೊಂದಿದ್ದೀರಾ ಎಂಬುದನ್ನು ತಿಳಿದುಕೊಳ್ಳಿ.

ಹಾವಭಾವ ಬಗ್ಗೆ ಗಮನವಿರಲಿ
ಕೆಲವೊಮ್ಮೆ ನಿಮ್ಮ ಭಾಷಾ ಕೌಶಲ, ದೇಹ ಭಾಷೆ (ಬಾರ್ಡಿ ಲಾಗ್ವೆಜ್‌) ಮತ್ತು ಡ್ರೆಸ್‌ ಕೋಡ್‌ ನಿಮ್ಮ ವ್ಯಕ್ತಿತ್ವವನ್ನು ನಿರ್ಧಾರಿಸು ವಂತೆ ಮಾಡುತ್ತದೆ. ಹಾಗಾಗಿ ನಿಮ್ಮ ಕುರಿತು ಸಂದರ್ಶಕರಲ್ಲಿ ಸಕರಾತ್ಮಕ ಭಾವನೆ ಮತ್ತು ನಂಬಿಕೆ ಮೂಡುವಂತೆ ನಡೆದುಕೊಳ್ಳಿ. ನಿಮ್ಮ ನಡೆಯಲಿ ಆತ್ಮ ವಿಶ್ವಾಸ ಇರಲಿ ಜತೆಗೆ ಮಾತನಾಡುವಾಗ ಧೈರ್ಯದಿಂದ ಮತ್ತು ವಿಶ್ವಾಸಯುತ, ಸಷ್ಟವಾಗಿ ಮಾತನಾಡುವುದು ಉತ್ತಮ. ಆದ್ದರಿಂದ ನಿಮ್ಮ ಧ್ವನಿ, ಸ್ವಾಭಾವಿಕ ನಗು, ದೇಹ ಭಾಷೆಯ ಕುರಿತು ಉತ್ತಮವಾಗಿ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ

ನಿಮ್ಮತನವನ್ನು ತೋರಿಸುವಂತಿರಲಿ ರೆಸ್ಯೂಮ್‌
ಉದ್ಯೋಗ ಪಡೆಯಲು ಪ್ರಮುಖ ಪಾತ್ರ ವಹಿಸುವುದು ನಮ್ಮ ರೆಸ್ಯೂಮ್‌. ಇದು ನಿಮ್ಮಲ್ಲಿನ ಕೌಶಲವನ್ನು ಪ್ರತಿಬಿಂಬಿಸುವ ಸಾಧನವಾಗಿದ್ದು, ಅದರ ತಯಾರಿಕೆಯಲ್ಲಿ ಬಹಳ ಎಚ್ಚರ ವಹಿಸುವುದು ಅತ್ಯಗತ್ಯ. ಹಾಗಾಗಿ ಇದರಲ್ಲಿ ನಮೂದಿಸಿರುವ ನಿಮ್ಮ ಮಾಹಿತಿಗಳು ಸರಿಯಾಗಿದಿಯೇ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಿ. ಸರಳವಾಗಿ ನಿಮ್ಮ ಸಾಧನೆ ಮತ್ತು ಪಠ್ಯೇತರ ಚಟುವಟಿಕೆಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಿ. ಪುಟ್ಟಗಟ್ಟಲೆ ರೆಸ್ಯೂಮ್‌ ನೀಡುವ ಬದಲು ಬಹಳ ಪ್ರಮುಖವೆನ್ನಿಸುವ ವಿಷಯಗಳನ್ನು ಮಾತ್ರ ಹಾಕಿ.

Advertisement

- ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next