Advertisement
ವಿದ್ಯಾರ್ಥಿ ಗುರು ಚಾಪೀ ಬೆಳಗಾವಿಯ ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿಯ ಎಲೆಕ್ಟ್ರಾನಿಕ್ ಆಂಡ್ ಕಮ್ಯುನಿಕೇಶನ್ ವಿಭಾಗದ ವಿದ್ಯಾರ್ಥಿಯಾಗಿದ್ದು, ಕಳೆದ 43 ವರ್ಷಗಳಲ್ಲಿ ಕಾಲೇಜಿನ ಜಿಐಟಿಯ ವಿದ್ಯಾರ್ಥಿ ಪಡೆದ ಅತ್ಯಧಿಕ ಕ್ಯಾಂಪಸ್ ಉದ್ಯೋಗ ಕೊಡುಗೆಯಾಗಿದೆ.
Related Articles
ಕಿತ್ತು ತಿನ್ನುವ ಬಡತನದಲ್ಲಿ ಗುರಿಯನ್ನು ಸಾಧಿಸಲು ಹಾಗು ಹಿಡಿದ ಛಲಕ್ಕೆ ಸರ್ಕಾರದ ಸ್ಕಾಲರ್‌ಷಿಪ್ ಹಾಗು ಶಿಕ್ಷಣ ಸಾಲವೇ ಸಹಕಾರಿಯಾಗಿ ಈ ಮಟ್ಟಕ್ಕೆ ಬೆಳೆಯುವಲ್ಲಿ ಕಾರಣವಾಗಿದೆ ಎಂದು ಸಾಧಕ ವಿದ್ಯಾರ್ಥಿ ಗುರು ಚಾಪೀ ತಿಳಿಸಿದರು.
Advertisement
ಮಾಲಿಕ ನೆರವುಬಿ.ಇ. ಪ್ರವೇಶಾತಿ ಪಡೆಯುವ ಸಂದರ್ಭ ಒಟ್ಟು ನಾಲ್ಕೈದು ಲಕ್ಷ ರೂ.ಗಳ ವೆಚ್ಚವಾಗುವದರಿಂದ ಕೂಲಿ ನೇಕಾರ ಮಾಡುತ್ತಿದ್ದ ವಿದ್ಯಾರ್ಥಿ ತಂದೆ ಅಣ್ಣಪ್ಪ ಚಾಪೀಗೆ ಜವಳಿ ಉದ್ಯಮಿ ಚಿದಾನಂದ ಬೆಳಗಲಿ ಆರ್ಥಿಕ ನೆರವು ನೀಡಿದರೆಂದು ವಿದ್ಯಾರ್ಥಿ ಮನದಾಳದಿಂದ ಹೇಳಿದ್ದಾನೆ. ನೇಕಾರ ಸಮುದಾಯದಲ್ಲಿ ಅದರಲ್ಲೂ ಜೋಡಣೆದಾರರ ಕುಟುಂಬದಲ್ಲಿ ಶಿಕ್ಷಣ ಹಾಗು ಆಸ್ಪತ್ರೆಗೆಂದು ಹಣಕಾಸು ನೆರವು ನೀಡುವಲ್ಲಿ ಸಹಕಾರಿಯಾಗುವುದು ಮಾನವೀಯ ಧರ್ಮ ಎಂದು ಚಿದಾನಂದ ಬೆಳಗಲಿ ಅವರು ಹೇಳಿದ್ದಾರೆ.