Advertisement

ಸಾಹಸಿ ಮಕ್ಕಳ ವೇದಿಕೆಯಿಂದ ಶಿಬಿರ

11:58 AM May 14, 2019 | Team Udayavani |

ಧಾರವಾಡ: ಸಾಹಸಿ ಮಕ್ಕಳ ವೇದಿಕೆಯಿಂದ ನಗರದ ಟಿಸಿಡಬ್ಲ್ಯೂ ಆವರಣದಲ್ಲಿ ಎರಡು ದಿನಗಳ ಮಕ್ಕಳ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ನಗರದ ವಿವಿಧ ಕೊಳಗೇರಿ ಹಾಗೂ ಬಡಾವಣೆ ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.

Advertisement

ನಿವೃತ್ತ ಶಿಕ್ಷಕಿ ಹಾಗೂ ಮಕ್ಕಳ ಸಾಹಿತಿ ದಮಯಂತಿ ನರೇಗಲ್ ಶಿಬಿರ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಕಲಿಸಿಕೊಡಲು ಇಂತಹ ಶಿಬಿರಗಳು ಸಹಕಾರಿಯಾಗಲಿವೆ. ಹಿಂದಿನ ದಿನಗಳಲ್ಲಿ ಇಂತಹ ಶಿಬಿರಗಳು ನಡೆಯುತ್ತಿರಲಿಲ್ಲ. ನಮಗೆ ಅವಕಾಶಗಳು ಸಿಗುತ್ತಿರಲಿಲ್ಲ. ಇಂದು ಹಲವಾರು ಅವಕಾಶಗಳು ದೊರೆಯುತ್ತಿದ್ದು, ಮಕ್ಕಳು ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಬ್ರೆಕ್‌ಥ್ರೂ ಸೈನ್ಸ್‌ ಸೊಸೈಟಿ ಜಿಲ್ಲಾ ಸಂಚಾಲಕರಾದ ದೀಪಾ ವಿ. ಮಾತನಾಡಿ, ಮಕ್ಕಳು ಸಮಾಜದ ಭವಿಷ್ಯವೆನ್ನುತ್ತಾರೆ. ಅವರಲ್ಲಿ ಉನ್ನತ ವ್ಯಕ್ತಿತ್ವವನ್ನು ರೂಪುಗೊಳಿಸುವುದು ಇಂದಿನ ಅವಶ್ಯಕತೆಯಾಗಿದೆ. ಅದರಲ್ಲೂ ಕೊಳಗೇರಿಗಳ ಮಕ್ಕಳತ್ತ ಹೆಚ್ಚಿನ ಗಮನ ಕೊಡುವ ಅಗತ್ಯವಿದೆ. ಅವಳಿ ನಗರದ ಹಲವಾರು ಕೊಳಗೇರಿಗಳಲ್ಲಿ ನಮ್ಮ ಸಂಘಟನೆಗಳಿಂದ ಪ್ರತಿ ರವಿವಾರ ಮಕ್ಕಳಿಗೆ ಆಟ, ಹಾಡು, ಮೌಲ್ಯಗಳನ್ನು ಬೆಳೆಸುವ ನೀತಿ ಕಥೆಗಳನ್ನು ಹೇಳುತ್ತ ಬಂದಿದ್ದು, ಅದರ ಭಾಗವಾಗಿ ಈ ಶಿಬಿರ್ನ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಸಾಹಸಿ ಮಕ್ಕಳ ವೇದಿಕೆಯ ರಮೇಶ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಗಂಗಾ ಕೋಕರೆ ಉಪಸ್ಥಿತರಿದ್ದರು. ಎರಡು ದಿನಗಳ ಶಿಬಿರದಲ್ಲಿ ಮಹಾನ್‌ ವ್ಯಕ್ತಿಗಳ ಪರಿಚಯ, ಪವಾಡ ರಹಸ್ಯ ಬಯಲು ಕಾರ್ಯಕ್ರಮ, ಕುಶಲ ಕಲೆಯ ಅನಾವರಣ, ಹಾಡು, ನಾಟಕ, ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಇಂದಿನಿಂದ ಮಕ್ಕಳ ಬೇಸಿಗೆ ಶಿಬಿರ

ಧಾರವಾಡ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತಾಲೂಕು ಬಾಲಭವನ ಸೊಸೈಟಿ ಸಹಯೋಗದಲ್ಲಿ ಮೇ 13ರಿಂದ 25ರ ವರೆಗೆ ಗರಗ ಗ್ರಾಮದ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಆವರಣದಲ್ಲಿ ಮಕ್ಕಳ ಬೇಸಿಗೆ ಶಿಬಿರ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ದೂ: 0836-2444838 ಸಂಪರ್ಕಿಸಬಹುದು.
Advertisement

Udayavani is now on Telegram. Click here to join our channel and stay updated with the latest news.

Next