ಏನಿದು ಕ್ಯಾಂಪಿಂಗ್ ಟ್ರೇಲರ್
ವಾಹನದ ಟ್ರೇಲರ್‌ನಲ್ಲೇ ವಿಶ್ರಾಂತಿಗೆ ಅನುಕೂಲವಾದ ರೀತಿಯ ವ್ಯವಸ್ಥೆ ಕ್ಯಾಂಪಿಂಗ್ ಟ್ರೇಲರ್. ಇದನ್ನು ರಸ್ತೆ ಮೂಲಕ ಎಲ್ಲಿ ಬೇಕಾದಲ್ಲಿ ಸಾಗಿಸಬಹುದು. ಇದೇ ಟ್ರೇಲರನ್ನು ಬೋಟ್ ಮೇಲೆ ಸ್ಥಾಪನೆ ಮಾಡಲಾಗಿದೆ. ಕ್ಯಾಂಪಿಂಗ್ ಟ್ರೇಲರ್‌ಗಳು ಅಮೆರಿಕದಲ್ಲಿ ಪ್ರಸಿದ್ಧಿ ಪಡೆದಿವೆ. ಒಂದು ಬೆಡ್‌ರೂಂ, ಹೊರಾಂಗಣ ಕೊಠಡಿ, ಶೌಚಾಲಯದ ವ್ಯವಸ್ಥೆ ಇದೆ. ಟ್ರೇಲರನ್ನು 50 ಅಡಿ ಉದ್ದದ ದೋಣಿ ಮೇಲೆ ಕೂಡಿಸಲಾಗಿದೆ. ಅಮೆರಿಕದಿಂದ ಇದನ್ನು ತರಲಾಗಿದ್ದು 60 ಲಕ್ಷ ರೂ. ವೆಚ್ಚವಾಗಿದೆ. ಮೊದಲು ಆರು ತಿಂಗಳು ಮೈಸೂರು, ಮಡಿಕೇರಿಯಲ್ಲಿದ್ದು, ಸದ್ಯ ಬೈಂದೂರಿನ ನದಿ ಪರಿಸರದಲ್ಲಿ ಇದರ ಓಡಾಟ ನಡೆಯಲಿದೆ.
Advertisement
ದರ ಎಷ್ಟು? ಈ ವರೆಗೂ ಪ್ರವಾಸಿಗರಿಗೆ ದರ ನಿಗದಿಯಾಗಿಲ್ಲ. ಇದಕ್ಕಾಗಿ ದಿನವೊಂದಕ್ಕೆ ಕನಿಷ್ಠ 20 ಸಾವಿರ ರೂ. ವೆಚ್ಚವಾಗುತ್ತದೆ ಎನ್ನುವುದು ಸಂಸ್ಥೆಯ ಅಭಿಪ್ರಾಯ. ಟ್ರೇಲರ್ ಇಡಲು ಶಿರೂರಿನ ಓಂ ದುರ್ಗಾಂಬಿಕಾ ಫೈಬರ್ ಬೋಟ್ ಬಿಲ್ಡರ್ ಬೋಟ್ ಹಾಗೂ ತಳಭಾಗವನ್ನು ನಿರ್ಮಿಸಿದೆ. ತೇಲಾಡುವ ಬೋಟ್‌ಹೌಸ್ ಮಾದರಿ ಕ್ಯಾಂಪಿಂಗ್ ಟ್ರೇಲರ್ ಇರಲಿದ್ದು, ಪ್ರವಾಸೋದ್ಯಮಕ್ಕೆ ಪೂರಕವಾಗಿರಲಿದೆ.