Advertisement
ಅಡಿಕೆ, ಕೊಕ್ಕೊ, ರಬ್ಬರ್, ಗೇರು, ತೆಂಗಿನಕಾಯಿಯ ಜತೆಗೆ ಸಂಬಾರ ಪದಾರ್ಥ, ಕಾಫಿ, ಔಷಧೀಯ ಉತ್ಪನ್ನ, ಅರೊಮ್ಯಾಟಿಕ್ ಪ್ಲಾಂಟ್ಸ್ ಹಾಗೂ ತಾಳೆ ಬೆಳೆ ಖರೀದಿಗೆ ಸಮ್ಮತಿಸಿದೆ. ಹಳದಿ ಎಲೆ ರೋಗಕ್ಕೂ ಸಂಶೋಧನೆಗೆ ಅನುದಾನ ನೀಡಲು ಅನುಮತಿಸಲಾಗಿದೆ. ಆಡಳಿತ ಮಂಡಳಿಗೆ ನಿರ್ದೇಶಕರ ಸಂಖ್ಯೆಯನ್ನು 19ಕ್ಕೆ ಏರಿಕೆ ಮಾಡಲಾಗಿದೆ. ಇದರಲ್ಲಿ ಇಬ್ಬರು ಮಹಿಳಾ ನಿರ್ದೇಶಕರ ನೇಮಕಕ್ಕೂ ನಿರ್ಧರಿಸಿದೆ ಎಂದು ಸಂಘನಿಕೇತನದಲ್ಲಿ ಬುಧವಾರ ನಡೆದ ಕ್ಯಾಂಪ್ಕೋ ವಾರ್ಷಿಕ ಮಹಾಸಭೆಯಲ್ಲಿ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ತಿಳಿಸಿದರು.
ಅಡಿಕೆ ಮಾರಾಟದ ಮೇಲೆ ಕೇಂದ್ರ ಸರಕಾರ ಜಿಎಸ್‌ಟಿ ತೆರಿಗೆ ವಿಧಿಸುತ್ತಿದ್ದು, ಇದು ಅ. 7ರ ಜಿಎಸ್‌ಟಿ ಕೌನ್ಸಿಲ್ ಸಭೆಗೆ ಮುನ್ನ ಇತ್ಯರ್ಥವಾಗಬೇಕಾಗಿದೆ. ಅದ ಕ್ಕಾಗಿ ಅಡಿಕೆ ಟಾಸ್ಕ್ಫೋರ್ಸ್ ಸಮಿತಿ ಅಧ್ಯಕ್ಷ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ದಿಲ್ಲಿಗೆ ಕ್ಯಾಂಪ್ಕೋ ಸೇರಿದಂತೆ ಬೆಳೆಗಾರ ಸಂಘಟನೆಗಳ ನಿಯೋಗ ತೆರಳಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರಿಗೆ ಮನವರಿಕೆ ಮಾಡಬೇಕಾಗಿದೆ ಎಂದರು.
Related Articles
Advertisement
ಸುವರ್ಣ ಮಹೋತ್ಸವ ಸ್ಮರಣ ಸಂಚಿಕೆ ” ಪೂಗಸಿರಿ’ಯನ್ನು ಆರ್‌ಎಸ್‌ಎಸ್ ಮುಖಂಡ ಡಾ| ಪ್ರಭಾಕರ ಭಟ್ ಕಲ್ಲಡ್ಕ ಬಿಡುಗಡೆಗೊಳಿಸಿದರು.
ಕ್ಯಾಂಪ್ಕೋ ಪೌಷ್ಟಿಕ ಮತ್ತು ಆಯುಷ್ ಗೊಬ್ಬರವನ್ನು ಅಡಿಕೆ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಅರಗ ಜ್ಞಾನೇಂದ್ರ ಬಿಡುಗಡೆಗೊಳಿಸಿದರು.
ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗ, ಎಸ್.ಆರ್. ಸತೀಶ್ಚಂದ್ರ, ದಯಾನಂದ್ ಹೆಗ್ಡೆ, ಕೃಷ್ಣ ಪ್ರಸಾದ್ ಮಡ್ತಿಲ ಮೊದಲಾದವರು ಉಪಸ್ಥಿತರಿದ್ದರು.