Advertisement
ಬ್ಯಾಂಕ್ ಅಸ್ತಿತ್ವಕ್ಕಾಗಿ ಕೇಂದ್ರಕ್ಕೆ ಪತ್ರ
ಸಿಂಡಿಕೇಟ್ ಬ್ಯಾಂಕ್ ದೇಶದ ಅತಿ ಹಳೆಯ ಮತ್ತು ಸುಭದ್ರವಾಗಿರುವ ಬ್ಯಾಂಕುಗಳಲ್ಲಿ ಅಗ್ರಮಾನ್ಯ ಸ್ಥಾನ ಪಡೆದಿದೆ. ನಾವು ಸಂಚಾರ ಮಾಡುವಾಗ ದೇಶದ ಯಾವುದೇ ಮೂಲೆಗೆ ಹೋದರೂ, ಹರಿದ್ವಾರ, ಹೃಷಿಕೇಶದಂತಹ ತೀರ್ಥಕ್ಷೇತ್ರಗಳಿಗೆ ಹೋದರೂ ಅಲ್ಲಿ ಸಿಂಡಿಕೇಟ್ ಬ್ಯಾಂಕ್ ಕಾಣ ಸಿಗುತ್ತದೆ. ಬ್ಯಾಂಕ್‌ನ ಅಸ್ತಿತ್ವ ಮಾತ್ರವಲ್ಲದೆ ಉತ್ತಮ ಸೇವೆಯನ್ನೂ ಬ್ಯಾಂಕ್‌ನ ಸಿಬಂದಿ ನೀಡುತ್ತಿದ್ದರು.
Related Articles
Advertisement
ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಪಲಿಮಾರು ಮಠ, ಉಡುಪಿ
ಬ್ಯಾಂಕಿನ ಮೂಲ ವ್ಯಕ್ತಿತ್ವ ಉಳಿಸಿ
ಕರಾವಳಿಯ ಗ್ರಾಮಾಂತರ ಪ್ರದೇಶದಲ್ಲಿ ಹುಟ್ಟಿ ಬೆಳೆದ ಸಿಂಡಿಕೇಟ್ ಬ್ಯಾಂಕ್ ಇಂದು ರಾಷ್ಟ್ರಮಟ್ಟದಲ್ಲಿ ಬೆಳೆದು ನಿಂತಿರುವ ಈ ಸಂದರ್ಭದಲ್ಲಿ ಬೇರೆ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿ ಅದರ ಹೆಸರನ್ನು ಅಳಿಸುವಂತ ವಿಚಾರ ಸರಿಯಾದ ನಿರ್ಧಾರವೆಂದು ಕಾಣುತ್ತಿಲ್ಲ.
ಗ್ರಾಮೀಣ ಪ್ರದೇಶದಲ್ಲಿ ಕೃಷಿಕರೊಂದಿಗೆ ಬೆಳೆದು ವ್ಯವಹರಿಸಿ ಕೃಷಿಕರಿಗೆ ಅತ್ಯುತ್ತಮವಾದ ಸೇವೆ ಸಲ್ಲಿಸಿದ ಈ ಸಂಸ್ಥೆಯ ಪ್ರಧಾನ ಕಚೇರಿ ಬೆಂಗಳೂರಿಗೆ ವರ್ಗಾವಣೆ ಆಗುವ ಸಂದರ್ಭದಲ್ಲಿಯೂ ಊರಿನ ಜನರು ಆಕ್ಷೇಪ ವ್ಯಕ್ತಪಡಿಸಿರುವುದನ್ನು ಇಲ್ಲಿ ಗಮನಿಸಬಹುದು. ಕರಾವಳಿಯ ಆರ್ಥಿಕ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದ ಈ ಸಂಸ್ಥೆಯ ಹೆಸರು ಹಾಗೂ ತನ್ನ ತವರೂರಿನ ಸಂಬಂಧವನ್ನು ಕಡಿದುಕೊಳ್ಳುವುದು ಸೂಕ್ತವಲ್ಲ. ಬ್ಯಾಂಕಿನ ಮೂಲ ವ್ಯಕ್ತಿತ್ವವನ್ನು ಉಳಿಸಿ ಕಾಪಾಡಬೇಕೆಂದು ಸಂಬಂಧಪಟ್ಟವರಿಗೆ ಮನವಿ ಮಾಡುತ್ತೇನೆ
ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ
ಉಳಿತಾಯಕ್ಕೆ ಪ್ರೇರಕ
ಕರ್ನಾಟಕ ಕರಾವಳಿಯ ಸಹಿತ ಸಮಗ್ರ ಭಾರತ ದೇಶದ ಆರ್ಥಿಕ ಸಹಿತ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಜನಸಾ ಮಾನ್ಯರ ಬ್ಯಾಂಕ್ ಎಂದೇ ಜನಜನಿ ತವಾಗಿರುವ ಸಿಂಡಿಕೇಟ್ ಬ್ಯಾಂಕ್ ಮುಂಚೂಣಿಯ ವಿತ್ತ ಸಂಸ್ಥೆಯಾಗಿ ಜನತೆಯ ಆರ್ಥಿಕ ಸೇವೆ ನಿರ್ವಹಿಸಿದೆ.
ಡಾ| ಟಿಎಂಎ ಪೈ, ಸಹೋದರ ಅನಂತ ಪೈ ಸಹಿತ ಪೈ ಬಂಧುಗಳು ಸ್ಥಾಪಿಸಿ, ಪೋಷಿಸಿ, ಸಾಧನೆಯ ಉತ್ತುಂಗ ತಲುಪಿಸಿದ ಸಿಂಡಿಕೇಟ್ ಬ್ಯಾಂಕ್ ಈ ನಾಡಿನ ಹೆಮ್ಮೆಯೂ ಹೌದು. ಈ ಕಾರಣಕ್ಕೆ ಕೂಡಾ ಪೈ ಬಂಧುಗಳು ಸದಾ ಸ್ಮರಣೀಯರು. ಪಿಗ್ಮಿ ಮುಂತಾದ ಜನಪರ ಯೋಜನೆಗಳ ಮೂಲಕ ಅವರು ಜನತೆಯಲ್ಲಿ ಉಳಿತಾಯದ ಮನೋ ಭಾವ ಬೆಳೆಸಿದರು. ಈ ಮೂಲಕ ಲಕ್ಷಾಂತರ ಕುಟುಂಬಗಳು ಸ್ವಾವಲಂಬಿಗಳಾಗಲು ಸಾಧ್ಯವಾಯಿತು. ನಾನು ಕೇಂದ್ರದ ವಿತ್ತ ಖಾತೆಯಲ್ಲಿ ಸಚಿವನಾಗಿದ್ದಾಗ, ದೇಶದ ಬಡ ಕುಟುಂಬಗಳ ಆರ್ಥಿಕ ಸ್ಥಿತಿಗತಿ ಯನ್ನು ಅತ್ಯಂತ ಸಮೀಪದಿಂದ ತಿಳಿದುಕೊಳ್ಳಲು ನನಗೆ ಸಾಧ್ಯವಾಗಿತ್ತು. ಸಾಲಮೇಳವನ್ನು ಏರ್ಪಡಿಸಿ, ಲಕ್ಷಾಂತರ ಮಂದಿಗೆ ಸ್ಥಳದಲ್ಲೇ ಆರ್ಥಿಕ ನೆರವನ್ನು ಒದಗಿಸಿದವನು. ಈ ಕಾರ್ಯದಲ್ಲಿ ಕೂಡಾ ಸಿಂಡಿಕೇಟ್ ಬ್ಯಾಂಕ್ ಮುಂಚೂಣಿಯಲ್ಲಿತ್ತು.ಆದ್ದರಿಂದ, ದೇಶದ ಆರ್ಥಿಕ ಪರಂಪರೆಯಲ್ಲಿ ಸಿಂಡಿಕೇಟ್ ಬ್ಯಾಂಕಿಗೆ ಅನನ್ಯವಾದ ಸ್ಥಾನವಿದೆ. ಈಗ ಸಿಂಡಿಕೇಟ್ ಸಹಿತ ಇಲ್ಲಿನ ಬ್ಯಾಂಕ್‌ಗಳನ್ನು ಇತರ ಬ್ಯಾಂಕ್‌ಗಳ ಜತೆ ವಿಲೀನಗೊಳಿಸುವ ಕಾರ್ಯ ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ. ಇದು ಸಮಗ್ರ ವಿತ್ತೀಯ ವ್ಯವಸ್ಥೆಯ ಮೇಲಿನ ಅತಾರ್ಕಿಕ ಪ್ರಹಾರ. ಇದು ಕೇವಲ ಹೆಸರಿನ ಪ್ರಶ್ನೆಯಲ್ಲ; ಇದು ಪರಂಪರೆಯ ಮತ್ತು ಆರ್ಥಿಕ ಸಂಸ್ಕೃತಿಯ ಸಂಗತಿ. ಆರ್ಥಿಕ ಭವಿಷ್ಯದ ಪ್ರಶ್ನೆ.
ಸಿಂಡಿಕೇಟ್ ಬ್ಯಾಂಕ್ ಈ ಪರಂಪರೆಯಲ್ಲಿ- ಸಂಸ್ಥಾಪಕರ ದೂರದೃಷ್ಟಿಯಿಂದ ಅರಳಿ ಬೆಳೆದಿರುವ ಬ್ಯಾಂಕ್. ನಾನು ಈ ಬಗ್ಗೆ ಭಾರತ ಸರಕಾರದ ಗಮನವನ್ನು ಸೆಳೆದಿದ್ದೇನೆ. ಬಿ. ಜನಾರ್ದನ ಪೂಜಾರಿ, ಕೇಂದ್ರದ ಮಾಜಿ ಹಣಕಾಸು ಸಚಿವರು