Advertisement

ಜು.15ರಿಂದ ಇಲಾಖೆ ನಡಿಗೆ ರೈತರ ಮನೆ ಬಾಗಿಲಿಗೆ ಅಭಿಯಾನ

11:26 PM Jun 25, 2019 | mahesh |

ಬೆಳ್ತಂಗಡಿ: ಕೃಷಿ ಅಭಿಯಾನದ ಪೂರ್ವಭಾವಿ ಮತ್ತು ಕೃಷಿ ಇಲಾಖೆಗಳ ವಿವಿಧ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆ ಶಾಸಕ ಹರೀಶ ಪೂಂಜ ಅವರ ಅಧ್ಯಕ್ಷತೆಯಲ್ಲಿ ತಾಲೂಕಿನ ಕೃಷಿ ಇಲಾಖೆಯ ರೃತ ಸಂಪರ್ಕ ಕೇಂದ್ರದಲ್ಲಿ ನಡೆಯಿತು. ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಜು.15 ರಿಂದ ಕಳೆದ ವರ್ಷದಂತೆ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಎಂಬ ಧ್ಯೇಯ ವಾಕ್ಯದಡಿ ರೈತ ಸಂಪರ್ಕ ಮತ್ತು ಕೃಷಿ ಅಭಿಯಾನವನ್ನು ನಡೆಸುವುದೆಂದು ತೀರ್ಮಾನಿಸಲಾಯಿತು.

Advertisement

48 ಗ್ರಾ.ಪಂ. ಮಟ್ಟದಲ್ಲಿ
ಅಭಿಯಾನವನ್ನು 48 ಗ್ರಾ.ಪಂ. ಮಟ್ಟದಲ್ಲಿ ನಡೆಸಲಾಗುತ್ತಿದ್ದು, ದಿನದಲ್ಲಿ 4-5 ಗ್ರಾ.ಪಂ.ಗಳಲ್ಲಿ ರೈತ ಸಂಪರ್ಕ ಮತ್ತು ಕೃಷಿ ಅಭಿಯಾನವನ್ನು ನಡೆಸು ವಂತೆ ಅಕಾರಿಗಳಿಂದ ಮಾಹಿತಿ ಪಡೆದು ಶಾಸಕರು ಸೂಚಿಸಿದರು.

ಅಭಿಯಾನದಲ್ಲಿ ಎಲ್ಲ ವಿಭಾಗ ದವರೂ ಸಂಪೂರ್ಣ ತೊಡಗಿಸಿ ಕೊಂಡು ರೈತರಿಗೆ ಅತೀ ಹೆಚ್ಚಿನ ಪ್ರಯೋಜನ ಸಿಗುವಂತೆ ನೋಡಿಕೊಳ್ಳಬೇಕು. ಎಲ್ಲಾ ಪಂಚಾಯತ್‌ಗಳಿಗೆ ಮಾಹಿತಿ ನೀಡಬೇಕು. ಮುಂದಿನ ದಿನಗಳಲ್ಲಿ ನಡೆಯುವ ಪಿಡಿಒ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಗುವುದು. ಮುಂದೆ ಕೃಷಿ ಮೇಳ ಮಾಡುವುದಿದ್ದಲ್ಲಿ ಅದರ ಕುರಿತು ವಿಚಾರ ವಿಮರ್ಶೆ ನಡೆಸಲಾ ಗುವುದು ಎಂದು ಶಾಸಕರು ತಿಳಿಸಿದರು.ರೇಷ್ಮೆ, ಮೀನುಗಾರಿಕೆಗಳಿಗೆ ಬರುವ ವಿವಿಧ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯ ಆಗಬೇಕು. ಮುದ್ರಾ ಯೋಜನೆಯಲ್ಲಿ ಸಾಲ ಕೊಡಲು ಬ್ಯಾಂಕ್‌ಗಳು ಹಿಂದೇಟು ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಬಾರದು ಎಂದು ಬ್ಯಾಂಕ್‌ ಅಧಿಕಾರಿಗೆ ಸೂಚಿಸಿದರು.

ಕೃಷಿ ಇಲಾಖೆಯ ಪ್ರಭಾರ ಸಹಾಯಕ ಕೃಷಿ ನಿರ್ದೇಶಕಿ ಪ್ರೇಮಾ ಡಿ. ಕಾಂಭೆ, ಕೃಷಿ ಅಧಿಕಾರಿಗಳಾದ ಚಿದಾನಂದ ಎಸ್‌. ಹೂಗಾರ್‌, ಹುಮೇರ ಜಬೀನ್‌ ಕೃಷಿ ಅಭಿಯಾನಕ್ಕೆ ಸಂಬಂಧಪಟ್ಟ ಮಾಹಿತಿ ಗಳನ್ನು ನೀಡಿದರು.ತಾಲೂಕಿನ ವಿವಿಧ ಇಲಾಖೆಗಳಾದ ತಾ.ಪಂ., ತೋಟಗಾರಿಕೆ, ಶಿಕ್ಷಣ, ಪಶುಸಂಗೋಪನೆ, ಅರಣ್ಯ, ಶಿಶು ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಹಿತ13 ಇಲಾಖೆಗಳ ಅಧಿಕಾರಿಗಳು ಭಾಗವಹಿಸಿ ಸಲಹೆ, ಸೂಚನೆ ನೀಡಿದರು.

ಸರ್ವರ್‌ ತೊಂದರೆಯಿಂದಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಕೃಷಿ ಸಂಭಂದಿತ ಕೆಲ ಯೋಜನೆಗಳಿಗೆ ಅರ್ಜಿ ತುಂಬಿಸುವುದು ಕಷ್ಟವಾಗುತ್ತಿದೆ ಎಂದು ಸಭೆಯಲ್ಲಿ ಗಮನಕ್ಕೆ ತರಲಾಯಿತು. ಆದಾಗ್ಯೂ ಬೆಳಗ್ಗೆ ಬೇಗ ಮತ್ತು ತಡ ಸಂಜೆ ಅರ್ಜಿಗಳನ್ನು ಅಂತರ್ಜಾಲದ ಮೂಲಕ ಅಪ್‌ಲೋಡ್‌ ಮಾಡಲಾಗುತ್ತಿದೆ. ಹೀಗಾಗಿ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ, ಹವಾಮಾನ ಆಧಾರಿತ ಫಸಲ್ ಬೀಮಾ ಯೋಜನೆಯಲ್ಲಿ ನಮ್ಮ ತಾಲೂಕಿನಲ್ಲಿ ಅತೀ ಹೆಚ್ಚು ಜನರು ತೊಡಗಿಸಿಕೊಂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ನಮ್ಮ ತಾಲೂಕು ಮೊದಲ ಸ್ಥಾನದಲ್ಲಿದೆ ಎಂದು ಶಾಸಕರಿಗೆ ಮಾಹಿತಿ ನೀಡಲಾಯಿತು.

Advertisement

ಸರ್ವರ್‌ ಸಮಸ್ಯೆ

Udayavani is now on Telegram. Click here to join our channel and stay updated with the latest news.

Next