Advertisement

ದೋಸೆಯಿಂದ ಕೇಶದವರೆಗೂ ಪ್ರಚಾರ!: ನಾಳೆ ಛತ್ತೀಸ್‌ಗಢ‌, ಮಧ್ಯಪ್ರದೇಶದಲ್ಲಿ ಮತದಾನ

11:50 PM Nov 15, 2023 | Team Udayavani |

ಹೊಸದಿಲ್ಲಿ:ರಸ್ತೆಬದಿಯ ಡಾಬಾದಲ್ಲಿ ದೋಸೆ ಹುಯ್ಯುವುದರಿಂದ ಹಿಡಿದು ಸಲೂನ್‌ನಲ್ಲಿ ಕೇಶಕ್ಕೆ ಕತ್ತರಿ ಹಾಕುವವರೆಗೂ ವಿವಿಧ ರಾಜ ಕೀಯ ಪಕ್ಷಗಳ ನಾಯಕರು ಮತದಾರ ರನ್ನು ಸೆಳೆಯಲು ವಿನೂತನ ಕಸರತ್ತುಗಳನ್ನು ನಡೆಸಿ ರುವುದು ಈ ಬಾರಿಯ ಚುನಾವಣೆಯ ವಿಶೇಷ!

Advertisement

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ವ ರಿಂದ ಸ್ಥಳೀಯ ಅಭ್ಯರ್ಥಿಗಳವರೆಗೂ ಬಹುತೇಕ ಮಂದಿ ತಮ್ಮ ಪ್ರಚಾರದ ಭಾಗವಾಗಿ ಜನರ ಮನಸ್ಸು ಗೆಲ್ಲಲು ನಾನಾ ಪ್ರಯತ್ನಗಳನ್ನು ನಡೆಸಿದ್ದಾರೆ. ಕಳೆದ ತಿಂಗಳು ತೆಲಂಗಾಣದಲ್ಲಿ ರಾಹುಲ್‌ ರಸ್ತೆ ಬದಿಯ ಹೊಟೇಲ್‌ವೊಂದರಲ್ಲಿ ತಾವೂ ದೋಸೆ ಹುಯ್ದು ಅದರ ಫೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಬಿಆರ್‌ಎಸ್‌ ಅಭ್ಯರ್ಥಿ ಪುವ್ವಡ ಅಜಯ್‌ ಕುಮಾರ್‌ ಖಮ್ಮಾಮ್‌ನ ಸೆಲೂನ್‌ಗೆ ಪ್ರವೇಶಿಸಿ, ಗ್ರಾಹಕರೊಬ್ಬರ ಹೇರ್‌ ಕಟ್ಟಿಂಗ್‌ ಮಾಡಿದ್ದೂ ಸುದ್ದಿಯಾಗಿತ್ತು.

ಚಹಾ ತಯಾರಿಸುವುದು, ಮಕ್ಕಳಿಗೆ ಸ್ನಾನ ಮಾಡಿಸುವುದು, ಕೈತುತ್ತು ನೀಡುವುದು, ಹಾಡಿಗೆ ಹೆಜ್ಜೆ ಹಾಕುವುದು, ಭತ್ತ ಕೊಯ್ಲು ಮಾಡುವುದು ಇತ್ಯಾದಿಗಳೆಲ್ಲ ಈ ಬಾರಿಯ ಚುನಾವಣೆಯಲ್ಲಿ ಸರ್ವೇ ಸಾಮಾನ್ಯ ದೃಶ್ಯವಾಗಿತ್ತು. ಬೃಹತ್‌ ರ್ಯಾಲಿ ಗಳು, ಸಾರ್ವಜನಿಕ ಸಭೆಗಳ ಜತೆಗೆ ರಾಜ ಕೀಯ ನಾಯಕರು ಜನರೊಂದಿಗೆ ಬೆರೆಯಲು ಇಂತಹ ಮಾರ್ಗಗಳನ್ನು ಆಯ್ದುಕೊಂಡಿದ್ದು ವಿಶೇಷ.

ಬಹಿರಂಗ ಪ್ರಚಾರ ಅಂತ್ಯ: ಈ ನಡುವೆ, ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮತ್ತು ಛತ್ತೀಸ್‌ಗಢ‌ದಲ್ಲಿ 2ನೇ ಹಂತದ ಮತದಾನ ಶುಕ್ರವಾರ ನಡೆಯಲಿದ್ದು, ಬುಧವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಪ್ರಚಾರದ ಕೊನೆಯ ದಿನವಾದ ಬುಧವಾರ ಪ್ರಧಾನಿ ನರೇಂದ್ರ ಮೋದಿಯವರು ಮತದಾರರನ್ನು ಸೆಳೆ ಯಲು ಕೊನೇ ಕ್ಷಣದ ಕಸರತ್ತು ನಡೆಸಿದ್ದಾರೆ. ಎಕ್ಸ್‌ನಲ್ಲಿ ಎರಡೂ ರಾಜ್ಯಗಳ ಮತದಾರರಿಗೆ ಸಂದೇಶ ರವಾನಿಸಿದ್ದು, ಕಾಂಗ್ರೆಸ್‌ನ ವಂಶಾಡಳಿತ ಮತ್ತು ನೆಗೆಟಿವ್‌ ರಾಜಕಾರಣದಿಂದ ಜನ ಸಿಟ್ಟಿಗೆ ದ್ದಿ ದ್ದಾರೆ. ಬಿಜೆಪಿಯ ಉತ್ತಮ ಆಡಳಿತಕ್ಕೆ ಜನ ಮತ ಹಾಕುತ್ತಾರೆಂಬ ವಿಶ್ವಾಸವಿದೆ ಎಂದಿ ದ್ದಾರೆ. ರಾಜ ಸ್ಥಾನದ ಬರ್ಮಾರ್‌ನಲ್ಲಿ ಮಾತನಾ ಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸುಸ್ಥಿತಿ ಯಲ್ಲಿರಬೇಕೆಂದರೆ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ಕಿತ್ತೆಸೆಯಬೇಕಾದ್ದು ಅತ್ಯಗತ್ಯ ಎಂದಿದ್ದಾರೆ.

ಬಾಬರಿ ಮಸೀದಿ ಪ್ರಸ್ತಾವ‌: ನಿಜಾಮಾಬಾದ್‌ನಲ್ಲಿ ಮಾತ ನಾ ಡಿದ ಸಿಎಂ ಕೆ.ಚಂದ್ರಶೇಖರ್‌ ರಾವ್‌, ಕಾಂಗ್ರೆಸ್‌ ಮುಸ್ಲಿಮರನ್ನು ಓಟ್‌ ಬ್ಯಾಂಕ್‌ ಆಗಿ ಬಳಸಿಕೊಂಡಿದೆ. ಜಾತ್ಯತೀತತೆಯು ಕೆಲಸದಲ್ಲಿ ಗೋಚರಿಸಬೇಕು. ಬಾಬರಿ ಮಸೀದಿ ಧ್ವಂಸಗೊಂಡಿದ್ದು ಯಾರ ಅವಧಿಯಲ್ಲಿ ಎಂದು ನಿಮಗೆ ಗೊತ್ತಿರ ಬಹುದು ಎಂದಿದ್ದಾರೆ.

Advertisement

ಹಸಿರು-ಶ್ವೇತ ಕ್ರಾಂತಿ ಕಾಂಗ್ರೆಸ್‌ ಕೊಡುಗೆ: ದೇಶದಲ್ಲಿ ಬೃಹತ್‌ ಅಣೆಕಟ್ಟುಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಎಂಜಿನಿಯರಿಂಗ್‌-ವೈದ್ಯಕೀಯ ಕಾಲೇಜುಗಳು ಕಾಂಗ್ರೆಸ್‌ ಕೊಡುಗೆಯಾಗಿದ್ದು, ಹಸಿರು ಮತ್ತು ಶ್ವೇತ ಕ್ರಾಂತಿಯಲ್ಲೂ ಕಾಂಗ್ರೆಸ್‌ ಸರಕಾರಗಳು ಗಣನೀಯ ಪಾತ್ರ ವಹಿಸಿತ್ತು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಧ್ಯಪ್ರದೇಶದ ಬೆರಾಸಿಯಾದಲ್ಲಿ ಬುಧವಾರ ರ್ಯಾಲಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿ ಇಂದಿಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿದಿದೆಯೆಂದರೆ ಅದಕ್ಕೆ ಕಾರಣ ಕಾಂಗ್ರೆಸ್‌ ಎಂದೂ ಹೇಳಿದ್ದಾರೆ.

ರಾಹುಲ್‌ “ಮೂರ್ಖರ ನಾಯಕ’: ಮೋದಿ
“ಚೀನ ಸರಕುಗಳು ಈಗಲೂ ಭಾರತದ ಮಾರುಕಟ್ಟೆಯನ್ನು ಆಳುತ್ತಿದ್ದು, ಭಾರತದ ಜನರು ಮೇಡ್‌ ಇನ್‌ ಚೀನ ಮೊಬೈಲ್‌ಗ‌ಳನ್ನು ಬಳಸುತ್ತಿದ್ದಾರೆ’ ಎಂಬ ಹೇಳಿಕೆ ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಿ ಮೋದಿ “ಮೂರ್ಖರ ನಾಯಕ’ ಎಂದು ಹಳಿದಿದ್ದಾರೆ. ಮಂಗಳವಾರ ಮಧ್ಯಪ್ರದೇಶದ ರ್ಯಾಲಿಯಲ್ಲಿ ರಾಹುಲ್‌ ವಿರುದ್ಧ ಹರಿಹಾಯ್ದ ಪ್ರಧಾನಿ, “ಕಾಂಗ್ರೆಸ್‌ನ ಒಬ್ಬ ಮಹಾಜ್ಞಾನಿ ಭಾರತೀಯರು ಕೇವಲ ಮೇಡ್‌ ಇನ್‌ ಚೀನ ಮೊಬೈಲ್‌ಗ‌ಳನ್ನು ಹೊಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂರ್ಖರ ನಾಯಕ ಯಾವ ಲೋಕದಲ್ಲಿದ್ದಾರೆ? ದೇಶದ ಸಾಧನೆಯನ್ನೂ ನೋಡಲಾಗದಂಥ ಯಾವ ವಿದೇಶಿ ಕನ್ನಡಕವನ್ನು ಇವರೆಲ್ಲ ಧರಿಸಿದ್ದಾರೆ ಎಂಬುದೇ ಆಶ್ಚರ್ಯದ ಸಂಗತಿ’ ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಬುಧವಾರ ಪ್ರತಿಕ್ರಿಯಿಸಿರುವ ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಕಿಡಿಕಾರಿದ್ದಾರೆ. ಮೋದಿಯವರು ಇಂಥ ಹೇಳಿಕೆಯು ಪ್ರಧಾನಿ ಹುದ್ದೆಯಲ್ಲಿರುವವರ ಘನತೆಗೆ ತಕ್ಕುದಲ್ಲ. ಇಂಥ ಉನ್ನತ ಹುದ್ದೆಯಲ್ಲಿರುವವರು ಸಣ್ಣತನದ ಹೇಳಿಕೆ ನೀಡಿದರೆ, ಅಂಥವರಿಂದ ಬೇರೇನು ನಿರೀಕ್ಷಿಸಲು ಸಾಧ್ಯ ಎಂದು ಗೆಹೊÉàಟ್‌ ಪ್ರಶ್ನಿಸಿದ್ದಾರೆ.

ಪಂಚರಾಜ್ಯ ಚುನಾವಣೆಗಳ ಪೈಕಿ ಕನಿಷ್ಠ 4 ರಾಜ್ಯಗಳಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೇರಲಿದೆ. ಈ ರಾಜ್ಯಗಳ ಫ‌ಲಿತಾಂಶವು 2024ರ ಲೋಕಸಭೆ ಚುನಾವಣೆಗೆ ದಿಕ್ಸೂಚಿಯಾಗಲಿದೆ.
ಸಚಿನ್‌ ಪೈಲಟ್‌, ರಾಜಸ್ಥಾನ ಕಾಂಗ್ರೆಸ್‌ ನಾಯಕ

ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ರಾಜ್ಯದ ಜನರಿಗೆ ಅಯೋಧ್ಯೆಯ ರಾಮಲಲ್ಲಾನ ಉಚಿತ ದರ್ಶನದ ಸೌಭಾಗ್ಯವನ್ನು ಒದಗಿಸಲಿದ್ದೇವೆ. ನಿಮಗೆ ರಾಮಲ ಲ್ಲಾನ ದರ್ಶನ ಬೇಕೇ, ಬೇಡವೇ?
ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಕಾಂಗ್ರೆಸ್‌ ಅಭ್ಯರ್ಥಿ ಸಾವು
ರಾಜಸ್ಥಾನದ ಕರಣ್‌ಪುರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗುರ್ಮೀತ್‌ ಸಿಂಗ್‌ ಕೂನಾರ್‌(75) ಬುಧವಾರ ನಿಧನ ಹೊಂದಿದ್ದಾರೆ. ಹಾಲಿ ಶಾಸಕರಾಗಿದ್ದ ಸಿಂಗ್‌ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ನ.12ರಂದು ಅವರನ್ನು ದಿಲ್ಲಿ ಏಮ್ಸ್‌ಗೆ ದಾಖಲಿಸಲಾಗಿತ್ತು. ಬುಧವಾರ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next