Advertisement
ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಉಜಿರೆ ಹಳೆಪೇಟೆ ಸೀತಾರಾಮ ಕಲಾಮಂದಿರದಲ್ಲಿ ಮಂಗಳವಾರ ಜರಗಿದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಅವರು ಮಾತನಾಡಿದರು.
ಗುರುಗಳ ಸ್ಥೂಲ ದೇಹ ಅಂದರೆ ವ್ಯಷ್ಟಿ ರೂಪ ಹಾಗೂ ಸಂಪೂರ್ಣ ರಾಷ್ಟ್ರವೆಂದರೆ ಗುರುಗಳ ಸಮಷ್ಟಿ ರೂಪವಾಗಿದೆ. ಗುರುಕಾರ್ಯದ ಕಕ್ಷೆಯು ವ್ಯಕ್ತಿಯ ಆಧ್ಯಾತ್ಮಿಕ ಉದ್ಧಾರದಿಂದ ಸಮಾಜ, ರಾಷ್ಟ್ರ ಹಾಗೂ ಧರ್ಮದ ಉತ್ಥಾನದ ತನಕ ವ್ಯಾಪಿಸಿ ರುತ್ತದೆ. ಧರ್ಮ ಸಂಸ್ಥಾಪನೆ ಅಂದರೆ ಹಿಂದೂ ರಾಷ್ಟ್ರ-ಸ್ಥಾಪನೆ ಕಾರ್ಯವು ವ್ಯಕ್ತಿ, ಸಮಾಜ, ರಾಷ್ಟ್ರ ಹಾಗೂ ಧರ್ಮ ಇವೆಲ್ಲದರ ಉತ್ಕರ್ಷವನ್ನು ಸಾಧಿಸುವ ಹಾಗೂ ಕಾಲಾನುಸಾರ ಆವಶ್ಯಕ ಗುರುಕಾರ್ಯವೇ ಆಗಿದೆ. ಈ ಕಾರ್ಯಕ್ಕಾಗಿ ಸ್ವಕ್ಷಮತೆಯಂತೆ ತನು-ಮನ-ಧನದಿಂದ ಸಹಭಾಗಿಯಾಗುವುದೇ ಕಾಲಾನುಸಾರ ನಿಜವಾದ ಗುರುದಕ್ಷಿಣೆ ಎಂದರು. ಸನಾತನ ಸಂಸ್ಥೆಯ ಸೌ. ರಾಧಿಕಾ ಪ್ರಭು ಮಾತನಾಡಿ, ಪರಾತ್ಪರ ಗುರು ಡಾ| ಜಯಂತ ಆಠವಲೆ ಅವರ ಗುಣಗಳ ಪರಿಚಯ ಮಾಡಿ, ಗುರುಗಳ ಕುರಿತು ಅಗಾಧ ಕೃತಜ್ಞತೆ ವ್ಯಕ್ತಪಡಿಸುವ ದಿನವೇ ಗುರು ಪೂರ್ಣಿಮೆ. ಪರಾತ್ಪರ ಗುರು ಪ.ಪೂ. ಡಾ| ಜಯಂತ ಆಠವಲೆಯವರಲ್ಲಿನ ಅದ್ವಿತೀಯ ಗುಣಗಳ ಎಲ್ಲೆಡೆ ಪರಿಚಯಿಸಬೇಕಿದೆ. ಆಧ್ಯಾತ್ಮಿಕ ಉನ್ನತಿ ಶೀಘ್ರವಾಗಿ ಆಗಲು ಪ್ರಯತ್ನಿಸುವುದು, ಇದೇ ಅವರ ಬಗ್ಗೆ ನಿಜವಾದ ಕೃತಜ್ಞತೆಯಾಗಿರಲಿದೆ ಎಂದರು.
Related Articles
Advertisement
ವ್ಯಾಸಪೂಜೆ ಹಾಗೂ ಸನಾತನ ಸಂಸ್ಥೆಯ ಗುರುಪರಂಪರೆಯಲ್ಲಿನ ಶ್ರೀಮತ್ಪರಮಹಂಸ ಚಂದ್ರಶೇಖ ರಾನಂದ, ಶ್ರೀ ಅನಂತಾನಂದ ಸಾಯಿಶ, ಸನಾತನ ಸಂಸ್ಥೆಯ ಶ್ರದ್ಧಾಸ್ಥಾನವಾಗಿರುವ ಸಂತ ಭಕ್ತರಾಜ ಮಹಾರಾಜ, ಪ.ಪೂ. ರಾಮಾನಂದ ಮಹಾರಾಜ, ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ| ಜಯಂತ ಬಾಳಾಜಿ ಆಠವಲೆಯವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದೂ ಸಂಘಟನೆಯ ಅದ್ವಿತೀಯ ಕಾರ್ಯ’ ಹಾಗೂ “ಪರಾತ್ಪರ ಗುರು (ಡಾ|) ಜಯಂತ ಬಾಳಾಜಿ ಆಠವಲೆ ಇವರ ಅಲೌಕಿಕ ಕಾರ್ಯ’ ಈ ವಿಷಯದಲ್ಲಿ ಚಿತ್ರ ಪ್ರದರ್ಶಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಸಮ್ಮಾನಿಸಲಾಯಿತು. ಹಿಂದೂ ರಾಷ್ಟ್ರ ನಿರ್ಮಾಣದ ಪಣ
ಜಾತ್ಯತೀತ ಭಾರತದಲ್ಲಿ ಹಿಂದೂಗಳು ಅನೇಕ ಸಮಸ್ಯೆಗಳಿಗೆ ಎಷ್ಟೇ ಪ್ರತಿಭಟನೆ ಮಾಡಿದರೂ ಸಮಸ್ಯೆ ಪರಿಹಾರವಾಗಿಲ್ಲ, ಅದಕ್ಕಾಗಿ ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಭಾರತವನ್ನು ಹಿಂದೂ ರಾಷ್ಟ್ರ ಮಾಡಬೇಕಾಗಿದೆ ಎಂದು ಹಿಂದುತ್ವವಾದಿ ಮಂಗಳೂರಿನ ಮಧುಸೂದನ್ ಅಯ್ಯರ್ ಅಭಿಪ್ರಾಯಪಟ್ಟರು.