Advertisement

Camlin ಪೆನ್‌ ಕಂಪೆನಿ ಸ್ಥಾಪಕ ಸುಭಾಷ್‌ ನಿಧನ

11:34 PM Jul 16, 2024 | Team Udayavani |

ಮುಂಬೈ: ಶಾಲೆಗೆ ಹೋಗುವ ಮಕ್ಕಳಿಗೆ ಪೆನ್‌ ಎಂದರೆ ಕ್ಯಾಮ್ಲಿನ್‌ ಎಂಬ ಭಾವನೆ ಮೂಡಿಸಿದ್ದ ಬೃಹತ್‌ ಸಂಸ್ಥೆಯ ಸಂಸ್ಥಾಪಕ ಸುಭಾಷ್‌ ದಾಂಡೇಕರ್‌ (86) ನಿಧನ ಹೊಂದಿದ್ದಾರೆ.

Advertisement

ಪೆನ್‌ ಮತ್ತು ವಿದ್ಯಾರ್ಥಿಗಳಿಗೆ ಬೇಕಾಗುವ ಸ್ಟೇಷನರಿ ವಸ್ತುಗಳ ಮಾರುಕಟ್ಟೆಯಲ್ಲಿ  ಹೆಚ್ಚು ಜನಪ್ರಿಯತೆ ಸ್ಥಾಪಿಸಿದ್ದರು.  1931ರಲ್ಲಿ ದಿಗಂಬರ್‌ ಪರಶುರಾಂ ದಾಂಡೇಕರ್‌ ಅವರಿಂದ ಸ್ಥಾಪನೆಯಾ ಗಿದ್ದ ದಾಂಡೇಕರ್‌ ಆ್ಯಂಡ್‌ ಕೋ ಸಂಸ್ಥೆ ಯನ್ನು ಅವರು ಸುಭಾಷ್‌ ದಾಂಡೇಕರ್‌ ಮುನ್ನಡೆಸಿದ್ದಾರೆ. 1960ರಲ್ಲಿ ಮೂಲ ಕಂಪೆನಿ ಯಿಂದ ಪ್ರತ್ಯೇಕೊಂಡ ದಾಂಡೇ ಕರ್‌ ಕಚೇರಿಗಳಿಗೆ ಬೇಕಾಗುವ ವಸ್ತುಗಳು, ವಿದ್ಯಾರ್ಥಿಗಳಿಗೆ ಬೇಕಾಗುವ ಪೆನ್‌, ಪುಸ್ತಕ ಸೇರಿದಂತೆ ಮತ್ತಿತರ ಸ್ಟೇಶನರಿ ವಸ್ತುಗಳ ಮಾರಾಟಕ್ಕೆ ಮುಂದಾದರು.

2011ರಲ್ಲಿ ಜಪಾನ್‌ನ ಕೋಕ್ಯು ಕಂಪೆನಿಯನ್ನು ಖರೀದಿಸುವ ಮೂಲಕ ದೇಶದ ಸ್ಟೇಶನರಿ ಮಾರುಕಟ್ಟೆಯಲ್ಲಿ ಬದಲಾವಣೆಗೆ ಕಾರಣರಾದರು. ಹೀಗಾಗಿ ಭಾರತದಲ್ಲಿ ಉತ್ಪಾದಿಸಲಾದ ಸ್ಟೇಶನರಿ ಉತ್ಪನ್ನಗಳಿಗೆ ಅಂತಾ ರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಬರುವಂತಾಯಿತು. ಹಳದಿ ಬಣ್ಣದ ಜಿಯೋಮೆಟ್ರಿ ಬಾಕ್ಸ್‌ ವಿದ್ಯಾರ್ಥಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next