Advertisement

ಆಸೀಸ್‌ ಮಾಜಿ ನಾಯಕ ವೈಟ್‌ ವಿದಾಯ

11:50 PM Aug 21, 2020 | mahesh |

ಮೆಲ್ಬರ್ನ್: ಆಸ್ಟ್ರೇಲಿಯದ ಆಲ್‌ರೌಂಡರ್‌, ಮಾಜಿ ನಾಯಕ ಕ್ಯಾಮರೂನ್‌ ವೈಟ್‌ ಶುಕ್ರವಾರ ವೃತ್ತಿಪರ ಕ್ರಿಕೆಟ್‌ ಬದುಕಿಗೆ ವಿದಾಯ ಘೋಷಿಸಿದರು. 3 ದಿನಗಳ ಹಿಂದಷ್ಟೇ 37ನೇ ವರ್ಷಕ್ಕೆ ಕಾಲಿಟ್ಟಿದ್ದ ಕ್ಯಾಮರೂನ್‌ ವೈಟ್‌ ಆಸ್ಟ್ರೇಲಿಯ ಪರ 4 ಟೆಸ್ಟ್‌ ಪಂದ್ಯಗಳನ್ನಾಡಿದ್ದರು. ಈ ಎಲ್ಲ ಪಂದ್ಯಗಳನ್ನು ಅವರು 2008ರ ಭಾರತ ಪ್ರವಾಸದ ವೇಳೆ ಆಡಿದ್ದು ವಿಶೇಷ. ವೈಟ್‌ 91 ಏಕದಿನ, 47 ಟಿ20 ಪಂದ್ಯಗಳಲ್ಲೂ ಆಸ್ಟ್ರೇಲಿಯವನ್ನು ಪ್ರತಿನಿಧಿಸಿದ್ದಾರೆ. 7 ಸೀಮಿತ ಓವರ್‌ ಪಂದ್ಯಗಳಲ್ಲಿ ಆಸೀಸ್‌ ತಂಡವನ್ನು ಮುನ್ನಡೆಸಿದ್ದರು. ಟೆಸ್ಟ್‌ನಲ್ಲಿ 146 ರನ್‌, ಏಕದಿನದಲ್ಲಿ 2,072 ರನ್‌, ಟಿ20ಯಲ್ಲಿ 984 ರನ್‌ ಬಾರಿಸಿದ್ದಾರೆ. ಉರುಳಿಸಿದ್ದು 18 ವಿಕೆಟ್‌ ಮಾತ್ರ.

Advertisement

ಕೋಚ್‌ ಆಗುವ ಗುರಿ
“ಖಂಡಿತವಾಗಿಯೂ ನಾನು ಕ್ರಿಕೆಟ್‌ ಆಡು ವುದನ್ನು ಕೊನೆಗೊಳಿಸಿದ್ದೇನೆ. ನನ್ನ ಕಾಲ ಮುಗಿದಿದೆ. ಸ್ಟ್ರೈಕರ್ ತಂಡ ದೊಂದಿಗಿನ ನನ್ನ ಒಂದು ವರ್ಷದ ಒಡಂಬಡಿಕೆ ಮುಕ್ತಾಯ ಗೊಂಡ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಮುಂದೆ ಕೋಚಿಂಗ್‌ನತ್ತ ಗಮನ ಹರಿಸಲು ನಿರ್ಧ ರಿಸಿದ್ದೇನೆ’ ಎಂದು ವೈಟ್‌ ಹೇಳಿದರು.

2007-2012ರ ಅವಧಿಯಲ್ಲಿ ಐಪಿಎಲ್‌ ಆಡಿದ್ದ ಕ್ಯಾಮರೂನ್‌ ವೈಟ್‌, ಆರ್‌ಸಿಬಿ ಮತ್ತು ಡೆಕ್ಕನ್‌ ಚಾರ್ಜರ್ ತಂಡಗಳನ್ನು ಪ್ರತಿನಿಧಿಸಿದ್ದರು.
ವೈಟ್‌ ಕೊನೆಯ ಸಲ ಆಸ್ಟ್ರೇಲಿಯ ತಂಡವನ್ನು ಪ್ರತಿನಿಧಿಸಿದ್ದು 2018ರಲ್ಲಿ. ಅದು ಇಂಗ್ಲೆಂಡ್‌ ಎದುರಿನ ಏಕದಿನ ಪಂದ್ಯವಾಗಿತ್ತು.

ದೇಶಿ ಕ್ರಿಕೆಟ್‌ ಹೀರೋ
ಆಸ್ಟ್ರೇಲಿಯದ ದೇಶಿ ಕ್ರಿಕೆಟ್‌ನಲ್ಲಿ ಕ್ಯಾಮರೂನ್‌ ವೈಟ್‌ ಅವರದು ಅಮೋಘ ಸಾಧನೆಯಾಗಿದೆ. 10 ಸಾವಿರಕ್ಕೂ ಹೆಚ್ಚು ರನ್‌ ಜತೆಗೆ 195 ವಿಕೆಟ್‌ ಕೂಡ ಸಂಪಾದಿಸಿದ್ದಾರೆ. ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 7,700 ರನ್‌ ಹಾಗೂ ನೂರಕ್ಕೂ ಹೆಚ್ಚು ವಿಕೆಟ್‌ ಗಳಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
10 ಚಾಂಪಿಯನ್‌ ತಂಡಗಳನ್ನು ಪ್ರತಿನಿಧಿಸಿದ್ದು ಕ್ಯಾಮರೂನ್‌ ವೈಟ್‌ ಪಾಲಿನ ಹೆಗ್ಗಳಿಕೆ. ಇದರಲ್ಲಿ 6 “ಶೆಫೀಲ್ಡ್‌ ಶೀಲ್ಡ್‌’ ಟ್ರೋಫಿಗಳು ಸೇರಿವೆ. ಒಂದು ಬಿಗ್‌ ಬಾಶ್‌ ಟ್ರೋಫಿಯೂ ಇದೆ. ದೇಶಿ ಕ್ರಿಕೆಟ್‌ನಲ್ಲಿ 240 ಟ20 ಪಂದ್ಯಗಳನ್ನು ಆಡಿರುವ ವೈಟ್‌ 5,469 ರನ್‌ ಪೇರಿಸಿದ್ದಾರೆ. ಜತೆಗೆ 708 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next