Advertisement
ಮೀನುಗಾರಿಕೆ-ಬಂದರು ಇಲಾಖೆಯ ನೇತೃತ್ವದಲ್ಲಿ ಸಿಸಿ ಕೆಮರಾ ಅಳವಡಿಕೆ ನಡೆಯ ಲಿದ್ದು, ಕಿಯೋನಿಕ್ಸ್‌ನಿಂದ ಈ ಕುರಿತಾದ ಪೂರಕ ಮಾಹಿತಿಗಳನ್ನು ಪಡೆಯಲಾಗಿದೆ. ದರ ಪಟ್ಟಿಯನ್ನು ಪಡೆದು ಕೆಲವೇ ದಿನಗಳಲ್ಲಿ ಸಿಸಿ ಕೆಮರಾ ಅಳವಡಿಕೆ ನಡೆಯಲಿದೆ.
ಮೀನುಗಾರಿಕೆ ಬಂದರಿನಲ್ಲಿ ಸದ್ಯ ಸಿಸಿಟಿವಿ ಇದ್ದರೂ ಅದು ಪೂರ್ಣ ಮಟ್ಟದಲ್ಲಿ ಬಳಕೆಯಲ್ಲಿಲ್ಲ. ಹೀಗಾಗಿ ಹೈ ಕ್ವಾಲಿಟಿ ಕೆಮರಾ ಅಳವಡಿಕೆಗೆ ನಿರ್ಧರಿಸಲಾಗಿದೆ. ಒಟ್ಟು 28 ಸಿಸಿ ಕೆಮರಾಗಳನ್ನು ಮಂಗಳೂರು ಮೀನುಗಾರಿಕೆ ಬಂದರಿನಲ್ಲಿ ಅಳವಡಿಸಲು ತೀರ್ಮಾನಿಸಲಾಗಿದೆ. ಒಂದೊಂದು ಕೆಮರಾವು ಸುಮಾರು 2 ಕಿ.ಮೀ. ದೂರದವರೆಗಿನ ದೃಶ್ಯವನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿರಲಿದೆ. ಮೀನುಗಾರಿಕೆ ದಕ್ಕೆಯಿಂದ ಅಳಿವೆಬಾಗಿಲಿನಲ್ಲಿ ಬೋಟ್‌ಗಳ ಆಗಮನ ಹಾಗೂ ನಿರ್ಗಮನದ ಬಗ್ಗೆಯೂ ಕಣ್ಣಿಡುವಷ್ಟು ಸಾಮರ್ಥ್ಯದ ಹೈ ಕ್ವಾಲಿಟಿ ಕೆಮರಾ ಇದಾಗಿರಲಿದೆ. ಮಳೆಗಾಲ, ರಾತ್ರಿ ಸಮಯ ಸಹಿತ ಎಲ್ಲ ಸಂದರ್ಭಕ್ಕೂ ತಕ್ಕುದಾದ ದೃಶ್ಯಗಳನ್ನು ಸೆರೆಹಿಡಿಯಬಹುದಾದ ಸಿಸಿಟಿವಿಗಳನ್ನು ಇಲ್ಲಿಗೆ ಅಳವಡಿಸಲಾಗುತ್ತದೆ.
Related Articles
ಮಂಗಳೂರು ಸಹಿತ ರಾಜ್ಯದ ಮೂರು ಜಿಲ್ಲೆಗಳ 9 ಮೀನುಗಾರಿಕೆ ಬಂದರುಗಳ ಕಾರ್ಯಚಟುವಟಿಕೆಯ ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ಹೈ ಕ್ವಾಲಿಟಿ ಸಿಸಿ ಕೆಮರಾ ಅಳವಡಿಕೆಗೆ ನಿರ್ಧರಿಸಲಾಗಿದೆ. ಕೆಲವೇ ದಿನದಲ್ಲಿ ಎಲ್ಲ ಬಂದರುಗಳಲ್ಲಿ ಇದನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.
-ತಿಪ್ಪೇಸ್ವಾಮಿ, ಅಪರ ನಿರ್ದೇಶಕರು, ಮೀನುಗಾರಿಕೆ-ಬಂದರು
Advertisement