Advertisement

ಅಲ್ಲಲ್ಲಿ ತ್ಯಾಜ್ಯ ಎಸೆಯುವವರ ಮೇಲೆ ಇನ್ನು ಕೆಮರಾ ಕಣ್ಗಾವಲು!

10:03 PM Nov 19, 2020 | mahesh |

ಮಹಾನಗರ: ತ್ಯಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ನಿಯಮಾವಳಿ ಜಾರಿಗೊಳಿಸಿರುವ ಮಂಗಳೂರು ಪಾಲಿಕೆಯು ಇದೀಗ, ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯವವರ ಮೇಲೆ ಕಣ್ಗಾವಲು ಇರಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿದೆ.

Advertisement

ನಗರದಲ್ಲಿ ತೆರೆದ ಪ್ರದೇಶದಲ್ಲಿ ತ್ಯಾಜ್ಯ ಎಸೆ ಯುವವರು ಹಾಗೂ ಕಟ್ಟಡ ಅವಶೇಷಗಳನ್ನು ಬಿಸಾ ಡುವವರನ್ನು ಪತ್ತೆ ಹಚ್ಚಲು ಅನುಕೂಲವಾಗಲು ಸಿಸಿ ಕೆಮ ರಾ ಅಳವಡಿಕೆಗೆ ನಿರ್ಧರಿಸಲಾಗಿದೆ. ಒಣಕಸ, ಹಸಿ ಕಸವನ್ನು ಪ್ರತ್ಯೇಕಿಸಿ ನೀಡುವ ನಿಯಮ ಜಾರಿಗೆ ಬಂದ ಬಳಿಕ ನಗರದ ವಿವಿಧ ಕಡೆಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುವವರ ಸಂಖ್ಯೆ ಅಧಿಕವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಅಲ್ಲಲ್ಲಿ ತ್ಯಾಜ್ಯ ಎಸೆಯುವ ಸ್ಥಳಗಳನ್ನು (ಬ್ಲ್ಯಾಕ್‌ ಸ್ಪಾಟ್‌) ಪತ್ತೆಹಚ್ಚಿ ವರದಿ ನೀಡುವಂತೆ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು ಆರೋಗ್ಯ ನಿರೀಕ್ಷಕರಿಗೆ ಸೂಚಿಸಿದ್ದರು. ಅದರಂತೆ ಮಂಗಳೂರಿನ 60 ವಾರ್ಡ್‌ಗಳ 169 ಕಡೆಗಳಲ್ಲಿ ತ್ಯಾಜ್ಯ ಎಸೆಯುವ ಸ್ಥಳವಿದೆ ಎಂದು ವರದಿ ನೀಡಲಾಗಿದೆ. ಇದರಂತೆ ಆ ಭಾಗದಲ್ಲಿ ಹೆಚ್ಚು ತ್ಯಾಜ್ಯ ಎಸೆಯುವ ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ ಸಿಸಿಟಿವಿ ಅಳವಡಿಸಲು ನಿರ್ಧರಿಸಲಾಗಿದೆ. ಹೊಸ ತಂತ್ರಜ್ಞಾನ ಆಧಾರಿತ ಸಿಸಿ ಕೆಮ ರಾವನ್ನು ಇದಕ್ಕಾಗಿ ಅಳವಡಿಸಿಕೊಳ್ಳಲು ಚಿಂತನೆ ನಡೆದಿದೆ.

ಘನತ್ಯಾಜ್ಯ ನಿರ್ವಹಣೆಯ ನಿಯಮಾವಳಿಗಳನ್ನು ನಿಗದಿತ ಕಾಲಮಿತಿಯಲ್ಲಿ ಸಂಪೂರ್ಣ ಅನುಷ್ಠಾನ ಗೊಳಿಸುವಲ್ಲಿ ವಿಫಲವಾಗಿರುವ ಬಗ್ಗೆ ಮಂಗಳೂರು ಪಾಲಿಕೆಗೆ ಹೈಕೋರ್ಟ್‌ ಇತ್ತೀಚೆಗೆ ಬಿಸಿ ಮುಟ್ಟಿಸಿದ ಬೆನ್ನಿಗೆ, ಪಾಲಿಕೆಯು ಈ ರೀತಿಯ ಉಪಕ್ರಮಗಳನ್ನು ಜಾರಿಗೊಳಿಸುವ ಹೆಜ್ಜೆ ಇಟ್ಟಿದೆ.

ನದಿ ದಂಡೆಗಳ ಮೇಲೂ ಕಣ್ಣು!
ಪಾಲಿಕೆ ವ್ಯಾಪ್ತಿಯ ಕಟ್ಟಡ ನಿರ್ಮಾಣ ಸ್ಥಳದ ಭೂ ಅಗೆತದಿಂದ ತೆಗೆದ ಮಣ್ಣು ಮತ್ತು ಹಳೆ ಕಟ್ಟಡ ಕೆಡವುದರಿಂದ ಉಂಟಾದ ಅವಶೇಷಗಳನ್ನು ನದಿಯ ದಂಡೆಗಳಲ್ಲಿ ವಿಲೇವಾರಿ ಮಾಡುವ ಮೂಲಕ ಪರಿಸರದ ಮೇಲೆ ಪ್ರಹಾರ ನಡೆಸಲಾಗುತ್ತಿದೆ. ಅವಶೇಷವನ್ನು ನದಿದಂಡೆಯಲ್ಲಿ ವಿಲೇವಾರಿ ಮಾಡುತ್ತಿರುವುದು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿದೆ. ನದಿ ದಂಡೆ ಯಲ್ಲೇ ತ್ಯಾಜ್ಯ ಸುರಿಯುವುದರಿಂದ ನದಿಮೂಲಕ್ಕೆ ಭಾರೀ ಪೆಟ್ಟು ನೀಡುವುದಲ್ಲದೆ, ಜಲಚರಗಳ ಜೀವಕ್ಕೂ ಕುತ್ತು ತಂದಿದೆ. ಇಲ್ಲಿ ಪರಿಸರದ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದೆ. ಹೀಗಾಗಿ ಇಂತಹ ಪ್ರಮುಖ ಜಾಗದಲ್ಲಿ ಯೂ ಸಿಸಿ ಕೆಮ ರಾ ಅಳವಡಿಸಲು ನಿರ್ಧರಿಸಲಾಗಿದೆ.

Advertisement

ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯದಿರಿ
ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾ ರಿ ಯಾಗಿ ಜಾರಿಗೊಳಿಸಲು ಪಾಲಿಕೆ ಕ್ರಮ ಕೈಗೊಂಡಿದೆ. ರಸ್ತೆ ಬದಿ ಸಹಿತ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಕುವವರ ವಿರುದ್ಧ ಕ್ರಮ ಕೈಗೊಳ್ಳುವ ಉದ್ದೇಶದಿಂದ ಈಗಾಗಲೇ ಗೊತ್ತುಪಡಿಸಲಾದ ಸ್ಥಳಗಳಲ್ಲಿ ಸಿಸಿ ಕೆಮ ರಾ ಅಳವಡಿಕೆಗೆ ನಿರ್ಧರಿಸಲಾಗಿದೆ. ಈ ಮೂಲಕ ತ್ಯಾಜ್ಯ ಎಸೆಯು ವವರನ್ನು ಪತ್ತೆಹಚ್ಚಿ ಅವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು.
-ಅಕ್ಷಯ್‌ ಶ್ರೀಧರ್‌, ಆಯುಕ್ತರು, ಮನಪಾ

ಪ್ರತಿನಿತ್ಯ ಕಸ ಕೊಂಡೊಯ್ಯಲಿ
ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ಪ್ರತಿ ದಿನವೂ ಸಂಗ್ರಹ ಮಾಡಿದರೆ ನಗರದಲ್ಲಿ ತ್ಯಾಜ್ಯ ಎಸೆಯುವ ಪ್ರಮೇಯ ಎದುರಾಗುವುದಿಲ್ಲ. ಶುಕ್ರವಾರವೂ ಹಸಿ ಕಸ ಕೊಂಡೊಯ್ದರೆ ಸಮಸ್ಯೆ ನಿವಾರಣೆ ಯಾಗಬಹುದು. ಜನರಿಗೆ ತ್ಯಾಜ್ಯ ನಿರ್ವಹಣೆಗೆ ಪರ್ಯಾಯ ಮಾರ್ಗಗಳನ್ನು ಪಾಲಿಕೆಯೇ ಮಾಡಿಕೊಡಬೇಕು. ಜತೆಗೆ, ತ್ಯಾಜ್ಯ ನಿರ್ವಹಣೆ ಮಾಡುವ ಜನರನ್ನು ಹಾಗೂ ಸಂಘ ಸಂಸ್ಥೆಗಳಿಗೆ ಪಾಲಿಕೆ ಪ್ರೋತ್ಸಾಹ
ನೀಡಿದರೆ ಉತ್ತಮ. -ಸ್ವಾಮಿ ಏಕಗಮ್ಯಾನಂದಜಿ, ಶ್ರೀ ರಾಮಕೃಷ್ಣ ಮಠ

ಕಾದಿದೆ ದಂಡದ ಬಿಸಿ!
 ಮನೆ, ಬೀದಿ ಬದಿ ವ್ಯಾಪಾರಸ್ಥರು ತ್ಯಾಜ್ಯ ವಿಂಗಡಿಸದಿದ್ದಲ್ಲಿ 1,500ರೂ. ಗಳಿಂದ 5,000 ರೂ.ವರೆಗೆ ದಂಡ
 ಭಾರೀ ತ್ಯಾಜ್ಯ ಉತ್ಪಾದಕರು ತ್ಯಾಜ್ಯ ವಿಂಗಡಣೆ ಮಾಡದಿದ್ದಲ್ಲಿ 15,000ರೂ. ಗಳಿಂದ 25,000 ರೂ. ವರೆಗೆ ದಂಡ
 ತೆರೆದ ಪ್ರದೇಶದಲ್ಲಿ ತ್ಯಾಜ್ಯ ಬಿಸಾಕಿದರೆ 1500ರೂ. ಗಳಿಂದ 25,000ರೂ. ವರೆಗೆ ದಂಡ
 ಬಯೋ ಮೆಡಿಕಲ್‌ ತ್ಯಾಜ್ಯ ಘನತ್ಯಾಜ್ಯದೊಂದಿಗೆ ಮಿಶ್ರಣಗೊಳಿಸಿದರೆ 10,000 ರೂ. ಗಳಿಂದ 25,000 ರೂ.ವರೆಗೆ ದಂಡ
 ಕಟ್ಟಡ ಭಗ್ನಾವಶೇಷಗಳನ್ನು ತೆರೆದ ಪ್ರದೇಶದಲ್ಲಿ ಬಿಸಾಕಿದರೆ 25,000 ರೂ. ದಂಡ

Advertisement

Udayavani is now on Telegram. Click here to join our channel and stay updated with the latest news.

Next