Advertisement

ಮಾನಸ ಗಂಗೋತ್ರಿಗೆ ಕ್ಯಾಮೆರಾ ಕಣ್ಗಾವಲು

10:04 AM Aug 14, 2020 | Suhan S |

ಮೈಸೂರು: ನಗರದ ಮಾನಸ ಗಂಗೋತ್ರಿ ಆವರಣದಲ್ಲಿ ವಿದ್ಯಾರ್ಥಿಗಳು, ಕ್ಯಾಂಪಸ್‌ಗೆ ಆಗಮಿಸುವ ಹೊರಗಿನ ವ್ಯಕ್ತಿಗಳ ಚಲನ ವಲನಗಳ ಬಗ್ಗೆ ಕಣ್ಣಿಡಲು 700ಕ್ಕೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಮೈಸೂರು ವಿವಿ ಆಡಳಿತ ಮಂಡಳಿಯಿಂದ ಕ್ಯಾಂಪಸ್‌ನಲ್ಲಿ ಹೆಜ್ಜೆ ಹೆಜ್ಜೆಗೂ ಸಿಸಿಟಿವಿ ಅಳವಡಿಸುವ ಮೂಲಕ ಮತ್ತಷ್ಟು ಭದ್ರತೆಗೆ ಮುಂದಾಗಿದೆ.

Advertisement

ದೇಶದ ಪ್ರಮುಖ ವಿವಿಗಳಲ್ಲಿ ಒಂದಾಗಿರುವ ಮೈಸೂರು ವಿವಿ ತನ್ನದೇ ಆದ ಹೆಗ್ಗಳಿಕೆ, ಗೌರವ ಹೊಂದಿದೆ. ಹೀಗಾಗಿ ದೇಶ ಹಾಗೂ ವಿದೇಶದ ಸಾವಿರಾರು ವಿದ್ಯಾರ್ಥಿಗಳು ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಮಾನಸ ಗಂಗೋತ್ರಿಯಲ್ಲಿ ನಡೆದ ಕೆಲವು ಘಟನೆಗಳಿಂದಾಗಿ ವಿವಿಗೆ ಕಪ್ಪುಚುಕ್ಕೆ ಆವರಿಸಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶಿಸ್ತು, ಸಂಯಮ, ಚಲನವಲನಗಳ ಮೇಲೆ ನಿಗಾವಹಿಸಲು ತೀರ್ಮಾನಿಸಿದೆ. ಇದರೊಂದಿಗೆ ಮಾನಸ ಗಂಗೋತ್ರಿಗೆ ಬಂದರೆ ಶಿಸ್ತು ಸಂಯಮ ಕಾಪಾಡಿ ಎಂಬ ಎಚ್ಚರಿಕೆ ನೀಡಿದೆ. ಮಾನಸ ಗಂಗೋತ್ರಿ ಆವರಣದ ಪ್ರತಿ ರಸ್ತೆಯಲ್ಲೂ ಸರ್ವೆಲೆನ್ಸ್‌ ಕ್ಯಾಮರಾ ಅಳವಡಿಸಲಾಗಿದ್ದು, ಇದಕ್ಕಾಗಿ ಒಟ್ಟು 760 ಕ್ಯಾಮರಾ ಬಳಸಲಾಗಿದೆ. ಈ ಎಲ್ಲಾ ಕ್ಯಾಮರಾಗಳು ತಿಂಗಳೊಳಗೆ ಚಾಲನೆಯಾಗಲಿವೆ.

ವಿವಿ ಕುಲಪತಿ ಪ್ರೊ.ಜಿ.ಹೇಮಂತ್‌ ಕುಮಾರ್‌ ಮಾತನಾಡಿ, ಈಗಾಗಲೇ ವೈ-ಫೈ ಮೂಲಕ ಗಮನ ಸೆಳೆದಿದ್ದ ಮೈಸೂರು ವಿವಿಯಲ್ಲಿ ಮೂರೂವರೆ ಕೋಟಿ.ರೂ ವೆಚ್ಚದಲ್ಲಿ ಹೈಫೊಫ್ರೆಷನ್‌ ಕ್ಯಾಂಪಸ್‌ ಸಿದ್ಧವಾಗಿದೆ. ವಿವಿಯಾದ್ಯಂತ 700ಕ್ಕೂ ಹೆಚ್ಚು ಸರ್ವೆಲೆನ್ಸ್‌ ಕ್ಯಾಮೆರಾ ಅಳವಡಿಕೆ ಮಾಡಲಾಗಿದ್ದು, 15 ದಿನಗಳಲ್ಲಿ ಚಾಲನೆಗೊಳ್ಳಲಿವೆ. ಈ ಮೂಲಕ ಅನವಶ್ಯಕ ಗಲಾಟೆ, ಪ್ರತಿಭಟನೆಗಳ ಮೇಲೆ ನಿಗಾ ಇಡಲು ಸಹಾಯವಾಗುತ್ತದೆ ಎಂದರು.

ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳ ಚಲನ ವಲನದ ಮೇಲೆ ನಿಗಾ ಇಡಲು ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಸಿಸಿ ಟಿವಿ ಅಳವಡಿಕೆ ತಡವಾಗಿದ್ದು, ಇನ್ನು 15 ದಿನಗಳಲ್ಲಿ ಎಲ್ಲಾ ಕ್ಯಾಮೆರಾ ಚಾಲನೆಗೊಳ್ಳಲಿವೆ. ಹೀಗಾಗಿ ವಿದ್ಯಾರ್ಥಿಗಳು ಇನ್ನು ಮುಂದೆ ಕ್ಯಾಂಪಸ್‌ಗೆ ಬಂದರೆ ಚೇಷ್ಟೆ ಬಿಟ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳಿ. ಪ್ರೊ.ಜಿ.ಹೇಮಂತ ಕುಮಾರ್‌, ಮೈಸೂರು ವಿವಿ ಕುಲಪತಿ

Advertisement

Udayavani is now on Telegram. Click here to join our channel and stay updated with the latest news.

Next