Advertisement

ಲಿಪ್‌ಸ್ಟಿಕ್‌, ಕನ್ನಡಕದಲ್ಲಿ ಕೆಮರಾ!

11:32 AM Oct 01, 2019 | sudhir |

ಭೋಪಾಲ್‌: ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಸ್ಫೋಟಗೊಂಡಿರುವ ಹನಿಟ್ರ್ಯಾಪ್‌ ಹಗರಣದ ರೂವಾರಿಗಳು, ದುರ್ದೈವಿಗಳನ್ನು ಹಳ್ಳಕ್ಕೆ ಕೆಡವಲು ತಮ್ಮ ಲಿಪ್‌ಸ್ಟಿಕ್‌ಗಳಲ್ಲಿ , ತಮ್ಮ ಕನ್ನಡಕಗಳಲ್ಲಿ ಗುಪ್ತ ಕೆಮರಾ ಗಳನ್ನು ಅಳವಡಿಸಿಕೊಂಡಿದ್ದರೆಂಬ ವಿಚಾರ ಬೆಳಕಿಗೆ ಬಂದಿದೆ. ಇದರ ಜತೆಗೆ, ತಮ್ಮ ಮೊಬೈಲ್‌ಗ‌ಳ ಮೂಲಕವೂ ರಾಸಲೀಸೆಗಳನ್ನು ಸೆರೆ ಹಿಡಿದಿ ದ್ದಾರೆ ಎಂದು ಪ್ರಕರಣದ ತನಿಖೆಯನ್ನು ನಡೆ ಸು ತ್ತಿರುವ ಮಧ್ಯಪ್ರದೇಶ ಪೊಲೀಸರು ತಿಳಿಸಿದ್ದಾರೆ.

Advertisement

ಮಧ್ಯಪ್ರದೇಶದ ಮಾಜಿ ರಾಜ್ಯಪಾಲರು, ಸರಕಾರಿ ಅಧಿಕಾರಿಗಳು, ಉದ್ಯಮಿಗಳು, ಶಾಸಕರು, ರಾಜಕೀಯ ನೇತಾರರೇ ಇದರಲ್ಲಿ ಸಿಕ್ಕಿಹಾಕಿ ಕೊಂಡಿರುವುದರಿಂದ ಈ ಪ್ರಕರಣವು ಭಾರೀ ಮಹತ್ವ ಪಡೆದಿದೆ. ಸೆ. 18-19ರಂದು ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ಪೊಲೀಸರು ಬಂಧಿಸಿದ್ದರು. ತಮ್ಮ ಮೋಸಜಾಲಕ್ಕೆ ಬಿದ್ದಿದ್ದ ವ್ಯಕ್ತಿಯೊಬ್ಬನಿಂದ 3 ಲಕ್ಷ ರೂ. ಪಡೆಯುವಾಗ ಇವರನ್ನು ಬಂಧಿಸಲಾಗಿತ್ತು. ಇವರು ಬಾಯಿಬಿಟ್ಟ ವಿಷಯಗಳಲ್ಲಿ ಗುಪ್ತ ಕ್ಯಾಮೆರಾಗಳ ವಿಚಾರವೂ ಒಂದು. ಇಂಥ ಕ್ಯಾಮೆರಾಗಳಲ್ಲಿ ಸೆರೆ ಹಿಡಿದ ವೀಡಿಯೋಗಳು, ಫೋಟೋಗಳನ್ನು ಉಪಯೋಗಿಸಿ ಈ ತಂಡ, ಬ್ಲ್ಯಾಕ್‌ವೆುàಲ್‌ ಮಾಡುತ್ತಿತ್ತು ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next