ಮಾಲೆ/ನವದೆಹಲಿ: ಸುಪ್ರೀಂಕೋರ್ಟ್‌ಗೆ ವಿರುದ್ಧವಾಗಿ 15 ದಿನಗಳ ಕಾಲ ತುರ್ತುಪರಿಸ್ಥಿತಿ ಹೇರಿ ಜಾಗತಿಕ ಮಟ್ಟದಲ್ಲಿ ಟೀಕೆಗೆ ಗುರಿಯಾಗಿರುವ ಮಾಲ್ಡೀವ್ಸ್ ಅಧ್ಯಕ್ಷ ಅಬ್ದುಲ್ಲ ಯಮೀನ್ ಅಂತಾರಾಷ್ಟ್ರೀಯ ನಿರೀಕ್ಷಕರನ್ನು ಆಹ್ವಾನಿಸಿದ್ದಾರೆ. ಸರ್ಕಾರದಲ್ಲಿ ಎದ್ದಿರುವ ಆಂತರಿಕ ವಿಚಾರಗಳನ್ನು ಬಗೆಹರಿ ಸುವ ನಿಟ್ಟಿನಲ್ಲಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಬ್ದುಲ್ಲ ಯಮೀನ್ ನೇತೃತ್ವದ ಸರ್ಕಾರ ಬುಧವಾರ ಸ್ಪಷ್ಟನೆ ನೀಡಿದೆ. ತುರ್ತು ಪರಿಸ್ಥಿತಿ ಜಾರಿ ಮಾಡಿ ದರೂ ದೇಶಾದ್ಯಂತ ಕರ್ಫ್ಯೂ ಜಾರಿಗೊಳಿಸ ಲಾಗಿಲ್ಲ. ಜನರ ದೈನಂದಿನ ಜೀವನಕ್ಕೆ ಅನುವು ಮಾಡಿಕೊಡಲಾಗಿದೆ. ಇತರ ಯಾವುದೇ ಸಾಮಾನ್ಯ ಸೇವೆಗಳಿಗೆ ತೊಂದರೆ ಯಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಈ ಅಂಶವನ್ನು ಖಚಿತಪಡಿಸಿಕೊಳ್ಳಲು ಅಂತಾರಾಷ್ಟ್ರೀಯ ನಿರೀಕ್ಷಕರು ಮತ್ತು ಸಂಘಟನೆಗಳ ಪ್ರತಿನಿಧಿಗಳು ಮಾಲ್ಡೀವ್ಸ್‌ಗೆ ಬಂದು ಪರಿಶೀಲನೆ ನಡೆಸಬಹುದು. ಜತೆಗೆ ಇಲ್ಲಿನ ನಾಗರಿಕರಿಂದಲೇ ಮಾಹಿತಿ ಪಡೆಯಬಹುದು ಎಂದು ಪ್ರತಿಪಾದಿಸಿದೆ. ಸರ್ಕಾರಿ ಕಚೇರಿಗಳು, ಶಾಲೆಗಳು ಮತ್ತು ಇತರ ಸಂಸ್ಥೆಗಳು ಎಂದಿನಂತೆಯೇ ಕಾರ್ಯವೆಸಗುತ್ತಿವೆ ಎಂದು ಮಾಲ್ಡೀವ್ಸ್ ಹೇಳಿಕೊಂಡಿದೆ.
ಮಿಲಿಟರಿ ಕಾರ್ಯಾಚರಣೆ ಬೇಡ: ಈ ನಡುವೆ ದಕ್ಷಿಣ ಭಾರತದ ಪ್ರಮುಖ ವಾಯುನೆಲೆಯೊಂದರಿಂದ ಅಗತ್ಯ ಬಿದ್ದರೆ ಸೇನೆಯನ್ನು ಕಳುಹಿಸುವ ಕೇಂದ್ರದ ನಿಲುವಿಗೆ ಚೀನಾ ಆಕ್ಷೇಪ ಮಾಡಿದೆ. ಇದರಿಂದಾಗಿ ಪರಿಸ್ಥಿತಿ ಮತ್ತಷ್ಟು ಕೈಮೀರಿ ಹೋಗಲಿದೆ ಎಂದು ಅದು ಎಚ್ಚರಿಕೆ ನೀಡಿದೆ. ಸದ್ಯದ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಚೀನಾದ ವಿದೇಶಾಂಗ ಇಲಾಖೆ ವಕ್ತಾರೆ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ಭಾರತ ಅಲ್ಲಿಗೆ ಸೇನೆಯನ್ನು ಕಳುಹಿಸಬೇಕು ಎಂಬ ಮನವಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಸಮುದಾಯ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ ಎಂದಿದ್ದಾರೆ. ಚೀನಾ ಆ ದೇಶದ ಜತೆಗೆ ಸೌಹಾರ್ದಯುತ ಸಂಬಂಧ ಹೊಂದಲು ಬಯಸುತ್ತಿದೆ ಎಂದು ಹೇಳಿದ್ದಾರೆ. ಗಮನಾರ್ಹ ಅಂಶವೆಂದರೆ ಮಾಲ್ಡೀವ್ಸ್‌ನ ಪ್ರತಿಪಕ್ಷ ನಾಯಕರು ಅಧ್ಯಕ್ಷ ಅಬ್ದುಲ್ಲಾ ಯಮೀನ್‌ಗೆ ಚೀನಾದ ಬೆಂಬಲ ಇದೆ ಎಂದು ಈಗಾಗಲೇ ಆರೋಪಿಸಿದ್ದಾರೆ.
ಭಾರತ ಮಧ್ಯಪ್ರವೇಶಿಸಲಿ: ಭಾರತ ಸೇನಾ ಕಾರ್ಯಾಚರಣೆ ನಡೆಸಿದರೆ ಪ್ರತಿಕೂಲ ಪರಿಣಾಮ ಉಂಟಾದೀತು ಎಂದು ಚೀನಾ ನೀಡಿರುವ ಎಚ್ಚರಿಕೆಯನ್ನು ಮಾಲ್ಡೀವ್ಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ ತಿರಸ್ಕರಿಸಿದ್ದಾರೆ. ಜತಗೆ ಬುಧವಾರ ಕೂಡ ಭಾರತ ಸೇನೆಯನ್ನು ಕಳುಹಿಸಬೇಕು ಎಂದಿದ್ದಾರೆ. ಜತೆಗೆ ದೇಶವನ್ನು ಸಂಕಟದಿಂದ ಪಾರು ಮಾಡುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.