Advertisement

ಕಾಂಬೋಡಿಯ: ಕೆಲಸ ಕಳೆದುಕೊಂಡ ಕಾರ್ಮಿಕರು

12:54 PM Jun 19, 2020 | sudhir |

ಕಾಂಬೋಡಿಯ: ಜವಳಿ ಉದ್ಯಮಕ್ಕೆ ಪ್ರಸಿದ್ಧಿ ಪಡೆದ ಕಾಂಬೋಡಿಯಾದಲ್ಲಿ ಕೋವಿಡ್ ವೈರಸ್‌ನಿಂದಾಗಿ ಹಲವಾರು ಉಡುಪು ತಯಾರಿಸುವ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.

Advertisement

ಕಾಂಬೋಡಿಯದ ನೊಮ್‌ ಪೆನ್‌ನ ಹೊರವಲಯದಲ್ಲಿರುವ ಜವಳಿ ಉದ್ಯಮಗಳಲ್ಲಿ ನೂರಾರು ಕಾರ್ಮಿಕರನ್ನು ಶಿಪ್ಟ್ಗಳಲ್ಲಿ ದುಡಿಸಲಾಗುತ್ತಿದೆ. ಇನ್ನು ಹಲವಾರು ಮಂದಿಯನ್ನು ಉದ್ಯೋಗದಿಂದ ಕೈಬಿಡಲಾಗಿದೆ.

ಕೋವಿಡ್ ವೈರಸ್‌ ತಡೆಯುವ ಕ್ರಮವಾಗಿ ಹೇರಲಾದ ನಿರ್ಬಂಧಗಳ ಹಿನ್ನೆಲೆಯಲ್ಲಿ ವ್ಯಾಪಾರ – ವ್ಯವಹಾರ ನಡೆಯದೆ ಹಲವು ಉದ್ಯಮಗಳು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಕೆಲವು ಕಾರ್ಖಾನೆಗಳು ಮುಚ್ಚಲ್ಪಟಿವೆ. ಇದರಿಂದ ಅನೇಕ ಕಾರ್ಮಿಕರು ಉದ್ಯೋಗ ನಷ್ಟ ಹೊಂದುವಂತಾಗಿದೆ.

ಕಾಂಬೋಡಿಯಾದ ಜವಳಿ ಉದ್ಯಮವು ಸುಮಾರು 8,50,000 ಉದ್ಯೋಗಗಿಗಳನ್ನು ಹೊಂದಿದ್ದು, ದೇಶದ ಆರ್ಥಿಕತೆಗೆ 7 ದಶಲಕ್ಷ ಆದಾಯ ಒದಗಿಸುತ್ತಿತ್ತು. ಕೋವಿಡ್‌ -19ನಿಂದಾಗಿ ಪ್ರಮುಖ ಪಾಶ್ಚಿಮಾತ್ಯ ಚಿಲ್ಲರೆ ವ್ಯಾಪಾರಿಗಳು ತಮ್ಮ ಆದೇಶಗಳನ್ನು ರದ್ದುಗೊಳಿಸಿದ್ದಾರೆ. ಇನ್ನು ಕೆಲವರು ರಿಯಾಯಿತಿ ದರದಲ್ಲಿ ಪೂರೈಕೆ ಮಾಡುವಂತೆ ಕೋರಿದ್ದಾರೆ. ಇದರಿಂದ ಇಲ್ಲಿನ 600 ಉಡುಪು ಕಾರ್ಖಾನೆಗಳಲ್ಲಿ ಆರ್ಥಿಕ ನಷ್ಟ ಸಂಭವಿಸಿದ ಮೂರನೇ ಒಂದು ಭಾಗದಷ್ಟು ಮುಚ್ಚಲ್ಪಟ್ಟಿವೆ. ಉದ್ಯೋಗ ಕಳೆದುಕೊಂಡವರಲ್ಲಿ ಮಹಿಳೆಯರು, 20 ವರ್ಷ ವಯಸ್ಸಿನೊಳಗಿನವರು ಅನೇಕರಿದ್ದು, ಅವರೆಲ್ಲ ದಿನ ನಿತ್ಯದ ಆಹಾರಕ್ಕಾಗಿ ಪರದಾಡುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next