ಕೊರಟಗೆರೆ: ಕೋವಿಡ್-19 ಹಿನ್ನಲೆಯಲ್ಲಿ ತಾಲ್ಲೂಕಿನ ದನಗಳ ಜಾತ್ರೆ ರದ್ದಾಗಿದ್ದರೂ ಜಾತ್ರೆಗೆ ರಾಸುಗಳು ಆಗಮಿಸಿದ್ದು ವಿಷಯ ತಿಳಿದ ಕಂದಾಯ ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಯಾದ ಎಎಸ್ಐ ಯೋಗೀಶ್ ಅವರ ತಂಡ ಆಗಮಿಸಿ, ಮನವೊಲಿಸಿ,ಪರಿಸ್ಥಿತಿ ವಿವರಿಸಿ ತೆರವು ಗೊಳಿಸಿದ ಪ್ರಸಂಗ ನಡೆದಿದೆ.
ಇತಿಹಾಸ ಪ್ರಸಿದ್ದ ಧಾರ್ಮಿಕ ಕ್ಷೇತ್ರಗಳಲ್ಲೊಂದಾದ ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ದನಗಳ ಜಾತ್ರೆ ಹಾಗೂ ರಥ ಸಪ್ತಮಿ ದಿನದೊಂದು ನಡೆಯುವ ಬ್ರಹ್ಮರಥೋತ್ಸವವು ಕೋವಿಡ್-19 ತೀವ್ರತೆಯಿಂದ ಸರ್ಕಾರದ ಆದೇಶದನ್ವಯ ಧಾರ್ಮಿಕ ಇತಿಹಾಸ ಪ್ರಸಿದ್ದ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಶ್ರ ಆಂಜನೇಯ ಸ್ವಾಮಿ ಸನ್ನಿಧಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತಾಧಿಗಳನ್ನು ಹೊಂದಿದ್ದು ದನಗಳ ಜಾತ್ರೆಗೆ ರಾಜ್ಯದ ಮೂಲೆ ಮೂಲೆಗಳಿಂದ ಸೇರಿದಂತೆ ಹೊರ ರಾಜ್ಯ ಗಳಿಂದಲೂ ಸಾವಿರಾರು ಜನ ಆಗಮಿಸಿ ಕೋಟ್ಯಂತರ ವ್ಯವಹಾರ ನಡೆಯುತ್ತಿದ್ದಂತ ಧಾರ್ಮಿಕ ಹಾಗೂ ದನಗಳ ಜಾತ್ರಾ ಮಹೋತ್ಸವ ರಾಜ್ಯ ಸರ್ಕಾರ ಹೊರಡಿಸಿರುವ ಕೊರೊನಾ ನಿಯಮದಡಿ ರದ್ದು ಗೊಳಿಸಲಾಗಿದೆ ತಾಲ್ಲೂಕು ದಂಡಾಧಿಕಾರಗಳಾದ ನಾಹೀದಾ ಜಮ್ ಜಮ್ ರವರು ಜಾತ್ರೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಪತ್ರಿಕಾ ಹೇಳಿಕೆಯನ್ನು ನೀಡಿ ಕ್ರಮ ಕೈಗೊಂಡಿದ್ದರೂ ಇದರ ಬಗ್ಗೆ ಮಾಹಿತಿ ಇಲ್ಲದೆ ದೊರದ ಊರುಗಳಿಂದ ರೈತರು ತಮ್ಮ ರಾಸುಗಳನ್ನು ಮಾರಲು ಜಾತ್ರೆಗೆ ಆಗಮಿಸಿದ್ದ ಪ್ರಸಂಗ ನಡೆದು ವಿಷಯ ತಿಳಿದ ಪೋಲಿಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ರೈತರ ಮನವೊಲಿಸಿ, ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ವಿವರಿಸಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ರಾಜ್ಯ ಸರ್ಕಾರ ಡಿಸೆಂಬರ್30 ರಿಂದ ಜನವರಿ26 ವರೆಗೆ ಕೋವಿಡ್19 ರ ಮಾರ್ಗಸೂಚಿಯನ್ನು ಹೊರಡಿಸಿದ್ದು, ಸದರಿ ಮಾರ್ಗ ಸೂಚಿಯನ್ವಯ ಸಭೆ ಸಮಾರಂಭಗಳಲ್ಲಿ 200 ಜನರಿಗೆ ಸೀಮಿತಗೊಳಿಸಿದ್ದು ,ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯ ಭಕ್ತಾಧಿಗಳು ಭಾಗವಹಿಸುವ ನಿರೀಕ್ಷೆ ಇರುವ ಕಾರಣ ,ಕೋವಿಡ್19 ಮಾರ್ಗಸೂಚಿ ಅನ್ವಯ, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು, ಭಕ್ತರನ್ನು ನಿಯಂತ್ರಿಸುವ ದೃಷ್ಟಿಯಿಂದ ಜಾತ್ರಾ ಮಹೋತ್ಸವವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವವೂ ಪೆಭ್ರವರಿ6ತಿಂದ17 ರವರೆಗೂ ಜರುಗಲಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದರೆ ಪೆಬ್ರವರಿ 8 ರಂದು ಬ್ರಹ್ಮ ರಥೋತ್ಸವ ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿದ್ದು , ದನಗಳ ಜಾತ್ರೆಯಲ್ಲಿ ಸಾವಿರಾರು ಜನ ಭಾಗವಹಿಸುವ ಕಾರಣ ಹಾಗೂ ಬ್ರಹ್ಮ ರಥೋತ್ಸವಕ್ಕೆ ಹೆಚ್ಚು ಜನರು ಸೇರುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ ಕೊರೊನಾ ನಿಯಮ ಹಾಗೂ ಅಂತರ ಕಾಯ್ದುಕೊಳ್ಳಲು ತೊಂದರೆಯಾಗುವ ಕಾರಣ ಜಾತ್ರಾ ಮಹೋತ್ಸವನ್ನು ರದ್ದುಗೊಳಿಸಿ, ಕೇವಲ ಸಾಂಪ್ರದಾಯಿಕ ಪೂಜೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕ್ಯಾಮೇನಹಳ್ಳಿ ಶ್ರೀ ಆಂಜನೇಯ ಸನ್ನಿಧಿಯಲ್ಲಿ ಸಾಂಪ್ರದಾಯಿಕ ಪೂಜೆಯನ್ನು ಹೊರತುಪಡಿಸಿ, ಯಾವುದೇ ವಿಶೇಷ ಫೂಜೆ, ಅನ್ನಸಂತರ್ಪಣೆ ಕಾರ್ಯವನ್ನು ನಡೆಸುವಂತಿಲ್ಲ.ಯಾವುದೇ ಅಂಗಡಿ-ಮುಗ್ಗಟ್ಟುಗಳು ಹಾಗೂ ಮಾರಾಟ ಮಳಿಗೆಗಳನ್ನು ಇಟ್ಟು ವ್ಯಾಪಾರ ಮಾಡಲು ಅವಕಾಶವಿರುವುದಿಲ್ಲ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.