ಹೊಸದಿಲ್ಲಿ : ಭಾರತೀಯ ನೌಕಾಪಡೆ ನಡೆಸಿದ ಮೊದಲ ಸ್ವದೇಶಿ ನಿರ್ಮಿತ ಕ್ಯಾಲ್ವರಿ ಜಲಾಂತರ್ಗಾಮಿ ನೌಕೆಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ. ಇದರಿಂದಾಗಿ ನೌಕಾಪಡೆ ಯುದ್ಧಾಸ್ತ್ರ ಸಂಗ್ರಹದಲ್ಲಿ ಹೊಸ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಅರೇಬಿಯನ್ ಸಮುದ್ರ ತೀರದಲ್ಲಿ ಕ್ಯಾಲ್ವರಿ ಜಲಾಂತರ್ಗಾಮಿಯ ನೌಕೆಯ ಪರೀಕ್ಷೆ ಗುರುವಾರ ನಡೆಯಿತು. ಈ ವೇಳೆ ಕ್ಯಾಲ್ವರಿ 6 ಸುಸಜ್ಜಿತ ಎದುರಾಳಿ ಡೀಸೆಲ್ ಮತ್ತು ಎಲೆಕ್ಟ್ರಿಕ್ ನೌಕೆಗಳ ಮೇಲೆ ದಾಳಿ ಮಾಡಿ ಅವುಗಳನ್ನು ಹೊಡೆದುರುಳಿಸಿತು. ದಾಳಿ ವೇಳೆ ಎದುರಾಗುವ ಅಪಾಯಗಳನ್ನು ಸಮರ್ಥವಾಗಿ ನಿಭಾಯಿಸಲು ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಕ್ಯಾಲ್ವರಿಗಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೋದಿ ಮೆಚ್ಚುಗೆ: ರಕ್ಷಣಾ ವಿಜ್ಞಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಜಲಾಂತರ್ಗಾಮಿ ನೌಕೆ ಪರೀಕ್ಷೆ ಯಶಸ್ವಿಯಾಗಿರುವುದು ದೇಶಕ್ಕೆ ಹೆಮ್ಮೆಯ ತರುವ ವಿಷಯ. ಗೆಲುವಿಗೆ ಶ್ರಮಿಸಿದ ರಕ್ಷಣಾ ಇಲಾಖೆ ಸಿಬ್ಬಂದಿಗೆ ಅಭಿನಂದನೆ ತಿಳಿಸಿದ್ದಾರೆ.