Advertisement

ಜೀವನ ಮೌಲ್ಯಗಳ ಆಸಕ್ತಿ ಹೊಂದಲು ಕರೆ 

04:53 PM May 04, 2018 | Team Udayavani |

ಹುಬ್ಬಳ್ಳಿ: ಯುವ ಜನಾಂಗ ಆಧುನಿಕ ಶೈಲಿ, ಸಂಸ್ಕೃತಿಗೆ ಮಾರುಹೋಗದೆ ಜೀವನದ ಮೌಲ್ಯಗಳ ಬಗೆಗೆ ಆಸಕ್ತಿ ವಹಿಸಬೇಕೆಂದು ಕನ್ನಡ ವಿಷಯದ ಪ್ರಾಧ್ಯಾಪಕಿ ಡಾ| ವಿಜಯಶ್ರೀ ಹಿರೇಮಠ ಕಿವಿಮಾತು ಹೇಳಿದರು.

Advertisement

ಇಲ್ಲಿನ ವಿದ್ಯಾನಗರದ ಕೆಎಲ್‌ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಪುಸ್ತಕ ದಿನಾಚರಣೆ ನಿಮಿತ್ತ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ವಿ ವ್ಯಕ್ತಿ ಆಗಬೇಕಾದರೆ ನಿರಂತರ ಪರಿಶ್ರಮ ಅವಶ್ಯ. ಅದೇ ರೀತಿ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ ಆರೇಳು ಗಂಟೆ ನಿರಂತರ ಅಧ್ಯಯನ ಮಾಡುವ ಮೂಲಕ ತಮ್ಮ ಬದುಕನ್ನು
ರೂಪಿಸಿಕೊಳ್ಳಬೇಕು ಎಂದರು. ಪ್ರಾಚಾರ್ಯ ಡಾ| ಎಂ.ಜಿ. ಸಜ್ಜನ ಅಧ್ಯಕ್ಷತೆ ವಹಿಸಿದ್ದರು.

ಡಾ| ಎಲ್‌.ಸಿ. ಮುಳ್ಳೊಳ್ಳಿ, ಡಾ| ಬಿ.ವಿ. ಹಳೇಮನಿ, ಡಾ| ಜಯಶ್ರೀ ಕುಂದಗೋಳಮಠ, ಪ್ರೊ| ಎ.ಸಿ. ಪ್ರತಿಭಾ, ಡಾ| ಲಕ್ಷ್ಮೀ  ಜಾಧವ, ಡಾ| ರತ್ನಾ ಬೆಂಡಿಗೇರಿ ಇದ್ದರು. ಗೋದಾವರಿ ಪ್ರಾರ್ಥಿಸಿದರು. ಗ್ರಂಥಪಾಲಕಿ ಕವಿತಾ ಕಲಕಬಂಡಿ ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ಅಕ್ಕಿ ನಿರೂಪಿಸಿದರು. ಜ್ಯೋತಿ ಪರಣ್ಣವರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next