Advertisement

ಕಡ್ದಾಯ ಮತ ಚಲಾಯಿಸಲು ಯುವಕರಿಗೆ ಕರೆ

04:37 PM Apr 14, 2018 | |

ಬೆಳಗಾವಿ: ಉತ್ತಮ ಆಡಳಿತ ಹಾಗೂ ದೇಶದ ಅಭಿವೃದ್ಧಿಗಾಗಿ ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವ ಅಗತ್ಯವಿದ್ದು, ಇದಕ್ಕಾಗಿ ಮೇ 12ರಂದು ಪ್ರತಿಯೊಬ್ಬ ನಾಗರಿಕರು ವಿಶೇಷವಾಗಿ ಯುವಕರು ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್‌ ಆರ್‌. ಕರೆ ನೀಡಿದರು.

Advertisement

ಶಿವಬಸವ ನಗರದ ಆರ್‌.ಎನ್‌. ಶೆಟ್ಟಿ ಪಾಲಿಟೆಕ್ನಿಕ್‌ ಕಾಲೇಜಿನ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಮತದಾರ ಜಾಗೃತಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಯುವಕರು ದೇಶದ ಅಭಿವೃದ್ಧಿ ದೃಷ್ಟಿಯಿಂದ ಸರದಿಯಲ್ಲಿ ನಿಂತು ಮತ ಚಲಾವಣೆಗೆ ಮುಂದಾಗಬೇಕು. ತಾವು ಮತ ಚಲಾಯಿಸುವುದರ ಜೊತೆಗೆ ಸ್ನೇಹಿತರು, ಪಾಲಕರು ಹಾಗೂ ನೆರೆಹೊರೆಯವರನ್ನೂ ಮತಗಟ್ಟೆಗೆ ಹೋಗುವಂತೆ ಪ್ರೇರೇಪಿಸಬೇಕು ಎಂದು ಸಲಹೆ ನೀಡಿದರು.

ಮೊದಲಿನಂತೆ ಮತಗಟ್ಟೆ ಹುಡುಕಿಕೊಂಡು ಅಲೆಯುವ ಅಗತ್ಯವಿಲ್ಲ. ಮೊಬೈಲ್‌ನಲ್ಲೇ ನಮ್ಮ ಮತಗಟ್ಟೆ ಮಾಹಿತಿ ಪಡೆಯಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ಬಾರಿ ಎಲ್ಲ ಕಡೆಗಳಲ್ಲೂ ಮತದಾರ ಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ವಿದ್ಯುತ್ಛಕ್ತಿ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಹೇಳಿದರು. 

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ| ವಿ.ಜೆ. ಪಾಟೀಲ ಮಾತನಾಡಿ, ಯುವಕರು ಮತದಾನದಲ್ಲಿ ಭಾಗವಹಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು. ಆರ್‌. ಎನ್‌. ಶೆಟ್ಟಿ ಪಾಲಿಟೆಕ್ನಿಕ್‌ ಪ್ರಾಂಶುಪಾಲ ಎಸ್‌.ಪಿ. ಹಿರೇಮಠ, ಗಿರೀಶ್‌ ಪರ್ವತಮಠ, ಮಂಜುಳಾ ಎಮ್ಮಿ, ನಿತೀಶ್‌ ಹುಬ್ಬಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next