Advertisement

ಮೇವು ಸಂಗ್ರಹಿಸಲು ಕೆಂಗನಾಳ ಕರೆ

04:06 PM Dec 22, 2018 | |

ಯಾದಗಿರಿ: ಜಿಲ್ಲಾದ್ಯಂತ ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಶೇ. 70ಕ್ಕಿಂತಲೂ ಕಡಿಮೆಯಾಗಿದ್ದು, ಕೃಷಿ ಚಟುವಟಿಕೆಗಳು ಕುಂಠಿತಗೊಂಡಿವೆ. ಈಗಾಗಲೇ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಈ
ನಿಟ್ಟಿನಲ್ಲಿ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ರೈತರ ಗ್ರಾಮಗಳಿಗೆ ಭೇಟಿ ನೀಡಿ, ಭತ್ತದ ಹುಲ್ಲನ್ನು ಸುಡದಂತೆ ಮನವರಿಕೆ ಮಾಡಲಾಗುತ್ತಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಮಲ್ಲಿಕಾರ್ಜುನ ಕೆಂಗನಾಳ ತಿಳಿಸಿದ್ದಾರೆ.

Advertisement

ಕಳೆದ ಒಂದು ವಾರದಿಂದ ಕೃಷಿ ವಿಜ್ಞಾನ ಕೇಂದ್ರದ ಪಶು ವಿಜ್ಞಾನಿ ಡಾ| ಮಹೇಶ ಹಾಗೂ ಗೃಹ ವಿಜ್ಞಾನ ಶಾಸ್ತ್ರಜ್ಞೆ ಡಾ| ಕೃತಿಕಾ ರೈತರಿಗೆ ವಿವಿಧ ತರಬೇತಿ ಮತ್ತು ಕ್ಷೇತ್ರ ಭೇಟಿಗಳಲ್ಲಿ ರೈತರಿಗೆ ಮೇವಿನ ಸಂಗ್ರಹಣೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ನೀರಾವರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ಹಿಂಗಾರು ಹಂಗಾಮಿಗೆ ನೀರು ಇಲ್ಲದಂತಾಗಿ ಎರಡನೇ ಬೆಳೆಯಾದ ಭತ್ತವನ್ನು ಬೆಳೆಯಲು ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರು ಕಡಿಮೆ ನೀರು ಬಳಸಿ ಅನ್ಯ ಬೆಳೆ ಬೆಳೆಯುವುದು ಸೂಕ್ತವಾಗಿದೆ.

ಇದಲ್ಲದೆ ಜಿಲ್ಲೆಯಲ್ಲಿರುವ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ರೈತರು ಮೇವಿನ ಸಂಗ್ರಹಣೆಗೆ ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ. ಭತ್ತದ ಹುಲ್ಲನ್ನು ಸುಡುವುದರಿಂದ ಪರಿಸರ ಮಾಲಿನ್ಯ ಆಗುತ್ತದೆ. ಅಲ್ಲದೆ, ಉತ್ತಮ ಮೇವು ನಾಶ ಆಗುತ್ತದೆ ಹಾಗೂ ಗದ್ದೆಯ ಮಣ್ಣಿನ ಮೇಲೆ ಪ್ರತಿಕೂಲಕರವಾದ ಪರಿಣಾಮ ಬೀರಬಲ್ಲದು.

ರೈತರು ಭತ್ತದ ಹುಲ್ಲನ್ನು ಕಟಾವು ಮಾಡಿದ 2-4 ದಿನಗಳಲ್ಲಿ ಸ್ವಲ್ಪ ಹಸಿ ಇರುವಾಗಲೆ ಸಂಗ್ರಹಿಸಿಕೊಂಡರೆ ಒಳ್ಳೆಯ ಮೇವು
ದೊರೆಯುತ್ತದೆ. ಇದಕ್ಕಾಗಿ ಭತ್ತದ ಹುಲ್ಲಿನ ಪೆಂಡಿ ಮತ್ತು ಬಂಡಲ್‌ ಮಾಡುವ ಬೇಲರಗಳನ್ನು ಬಳಸಿಕೊಳ್ಳಬೇಕು. ಕೃಷಿ ಇಲಾಖೆಯ ಕೃಷಿ ಯಂತ್ರಧಾರೆಯಡಿಯಲ್ಲಿ ಬೇಲರಗಳು ಕೆಲಸ ಮಾಡುತ್ತಿದ್ದು, ಅಗ್ಗ ದರದಲ್ಲಿ ಹುಲ್ಲಿನ ಬಂಡಲ್‌ಗ‌ಳನ್ನು ಮಾಡಿಕೊಳ್ಳಬಹುದಾಗಿದೆ.

ಹೆಚ್ಚು ಕೆಲಸದವರ ಅಗತ್ಯವಿಲ್ಲದೆ ಈ ಯಂತ್ರಗಳನ್ನು ಬಳಸಿಕೊಂಡು ರೈತರು ಮೇವಿನ ಸಂಗ್ರಹಣೆ ಮಾಡಬಹುದು. ರೈತರು ಪರ ರಾಜ್ಯಗಳಿಗೆ ಮೇವನ್ನು ಮಾರಾಟ ಮಾಡದೆ ಸ್ಥಳೀಯ ರೈತರಿಗೆ ಕೊಟ್ಟು ಜಿಲ್ಲೆಯ ಬರ ನಿರ್ವಹಣೆಯ

Advertisement
Advertisement

Udayavani is now on Telegram. Click here to join our channel and stay updated with the latest news.

Next