Advertisement

ಕಾಲ್‌ ರೆಕಾರ್ಡಿಂಗ್‌ಗಿಲ್ಲ ಅವಕಾಶ! ; ಗೂಗಲ್‌ ಸಂಸ್ಥೆಯಿಂದ ಹೊಸ ಕ್ರಮ

08:21 PM Apr 21, 2022 | Team Udayavani |

ನವದೆಹಲಿ: ನೀವು ಆ್ಯಂಡ್ರಾಯ್ಡ ಫೋನ್‌ ಬಳಕೆದಾರರಾಗಿದ್ದು, ಕಾಲ್‌ ರೆಕಾರ್ಡಿಂಗ್‌ ಮಾಡಿಕೊಳ್ಳಲೆಂದು ಗೂಗಲ್‌ ಪ್ಲೇ ಸ್ಟೋರ್‌ನಿಂದ ಯಾವುದಾದರೂ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರೆ, ಇನ್ನು ಮುಂದೆ ಅದಕ್ಕೆ ಅವಕಾಶವಿರುವುದಿಲ್ಲ.

Advertisement

ಗೂಗಲ್‌ ಸಂಸ್ಥೆಯು ಪ್ಲೇ ಸ್ಟೋರ್‌ನಲ್ಲಿ ಅನೇಕ ಬದಲಾವಣೆಗಳನ್ನು ತರುತ್ತಿದ್ದು, ಅದರಲ್ಲಿ ಕಾಲ್‌ ರೆಕಾರ್ಡಿಂಗ್‌ ಆ್ಯಪ್‌ಗಳನ್ನು ತೆಗೆದುಹಾಕುವುದೂ ಒಂದಾಗಿದೆ.

ಕ್ಸಿಯೋಮಿ, ಸ್ಯಾಮ್‌ಸಂಗ್‌ನಂತಹ ಕೆಲವು ಸಂಸ್ಥೆಗಳು ಮೊಬೈಲ್‌ನಲ್ಲೇ ರೆಕಾರ್ಡಿಂಗ್‌ ಆಯ್ಕೆಯನ್ನು ಕೊಟ್ಟಿವೆ. ಆದರೆ ಕೆಲವು ಸಂಸ್ಥೆಯ ಆ್ಯಂಡ್ರಾಯ್ಡ ಫೋನ್‌ಗಳಲ್ಲಿ ರೆಕಾರ್ಡಿಂಗ್‌ ಆಯ್ಕೆಯಿಲ್ಲ. ಅಂತವರು ಪ್ಲೇ ಸ್ಟೋರ್‌ನಿಂದ ಕಾಲ್‌ ರೆಕಾರ್ಡಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಬಳಸುತ್ತಿದ್ದಾರೆ.

ಇದೀಗ ಅಂತಹ ಎಲ್ಲ ಥರ್ಡ್‌ ಪಾರ್ಟಿ ಆ್ಯಪ್‌ಗ್ಳನ್ನು ತೆಗೆದುಹಾಕಲು ಗೂಗಲ್‌ ಮುಂದಾಗಿದೆ. ಮೇ 11ರಿಂದ ಈ ರೀತಿಯ ಯಾವುದೇ ರೆಕಾರ್ಡಿಂಗ್‌ ಆ್ಯಪ್‌ಗ್ಳು ಕೆಲಸ ಮಾಡುವುದಿಲ್ಲ ಎಂದು ಗೂಗಲ್‌ ಸಂಸ್ಥೆಯು “ಗೂಗಲ್‌ ಪ್ಲೇ ಪಾಲಿಸಿ ಅಪ್‌ಡೇಟ್ಸ್‌’ ವೆಬಿನಾರ್‌ನಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next