Advertisement

ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತಕ್ಕೆ ಶ್ರಮಿಸಲು ಕರೆ

06:35 PM Dec 28, 2022 | Team Udayavani |

ಲೋಕಾಪುರ: ದೇಶದಲ್ಲಿ ಕಾಂಗ್ರೆಸ್‌ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ಯಾತ್ರೆಯಿಂದ ಪ್ರತಿಯೊಂದು ರಾಜ್ಯದಲ್ಲೂ ಪುನಶ್ಚೇತನಗೊಳ್ಳುತ್ತಿದ್ದು, ಪಕ್ಷದ ಕಾರ್ಯಕರ್ತರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಸ್ಪಷ್ಟ ಬಹುಮತ ಪಡೆಯುವಂತೆ ಶ್ರಮಿಸಬೇಕು ಎಂದು ಲೋಕಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಕಿವಡಿ ಹೇಳಿದರು.

Advertisement

ಪಟ್ಟಣದ ಉದಪುಡಿಯವರ ಕಚೇರಿಯಲ್ಲಿ ಮುಧೋಳ ವಿಧಾನಸಭಾ ಮತಕ್ಷೇತ್ರದ ಲೋಕಾಪುರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಪದಾ ಧಿಕಾರಿಗಳ ಆದೇಶ ಪ್ರತಿ ನೀಡಿ ಮಾತನಾಡಿದ ಅವರು, ಕಾಂಗ್ರೆಸ್‌ ಬಲವರ್ಧನೆಗಾಗಿ ಎಸ್‌ಸಿ ಘಟಕಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಎಲ್ಲ ಸದಸ್ಯರು ಪಕ್ಷ ನೀಡಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿ ಸಂಘಟನೆ ಮಾಡಬೇಕೆಂದು ತಿಳಿಸಿದರು.

ಕಾಂಗ್ರೆಸ್‌ ಯುವ ಮುಖಂಡ ಗುರುರಾಜ ಉದಪುಡಿ ಮಾತನಾಡಿ, ಎಸ್‌ಸಿ ಘಟಕದ ಪದಾಧಿಕಾರಿಗಳು ಕೇವಲ ಹೆಸರಿಗೆ ಮಾತ್ರ ಆಗದೆ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿಕೊಟ್ಟು ಪಕ್ಷದತ್ತ ಸೆಳೆಯಲು ಶ್ರಮ ಪಡಬೇಕು, ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಉತ್ತಮ ಭವಿಷ್ಯವಿದ್ದು, ಆಡಳಿತ ನಡೆಸುತ್ತಿರುವ ಬಿಜೆಪಿ ತನ್ನ ವೈಫಲ್ಯ ಮುಚ್ಚಿಕೊಳ್ಳುವ ದಿನಕ್ಕೊಂದು ನಾಟಕ ಮಾಡುತ್ತಿದ್ದು ಇದನ್ನು ಜನತೆ ಗಮನಿಸುತ್ತಿದ್ದಾರೆ. ಈ ಬಾರಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.

ಕಾಂಗ್ರೆಸ್‌ ಎಸ್‌ಸಿ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದುರಗಪ್ಪ ಕಾಳಮ್ಮನವರ ಪದಾಧಿಕಾರಿಗಳ ಆದೇಶ ಪ್ರತಿಯನ್ನು ಪದಾಧಿಕಾರಿಗಳಿಗೆ ನೀಡಿದರು. ಉಪಾಧ್ಯಕ್ಷರಾಗಿ ಸುರೇಶ ಪೂಜಾರ, ಹಣಮಂತ ಪೂಜಾರ, ವಿಠಲ ಮಾದರ, ಪ್ರಧಾನ ಕಾರ್ಯದರ್ಶಿಯಾಗಿ ಲಂಕೇಶ ಮಾದರ, ಸಂಘಟನಾ ಕಾರ್ಯದರ್ಶಿಯಾಗಿ ಲೋಕಣ್ಣ ಮಾದರ, ಸೈದು ಮಾದರ, ಬಸು ಭಜಂತ್ರಿ, ಸುರೇಶ ಪರಸನ್ನವರ, ರಾಜು ಹರಿಜನ, ಅಶೋಕ ಹರಿಜನ ರಂಗನಾಥ ಗುಡಿಹಿಂದಿನ, ಆನಂದ ಹುಗ್ಗಿ, ಮಂಜುನಾಥ ಮಾದರ, ಕಾರ್ಯದರ್ಶಿಯಾಗಿ ಸಂಜು ಮಾದರ, ಯಲ್ಲಪ್ಪ ಉತ್ತೂರ, ಸದಾಶಿವ ದೊಡಮನಿ, ದುರಗಪ್ಪ ಭಜಂತ್ರಿ, ಕಾರ್ಯಕಾರಿಣಿ ಸದಸ್ಯರಾಗಿ ಅಜ್ಜಪ್ಪ ಶಿವಕ್ಕನವರ, ಲಕ್ಕಪ್ಪ ಪೂಜೇರಿ, ಶಂಕರ ದೊಡಮನಿ, ಲಕ್ಷ್ಮಣ ಕಾಂಬಳೆ, ಮಹಾದೇವ ಮಾದರ, ಕೃಷ್ಣಾ ತಳಗೇರಿ ಹಾಗೂ ಇತರರನ್ನು ಎಸ್‌ಸಿ ಘಟಕದ ಪದಾ ಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶಿಸಲಾಗಿದೆ.

ಕಾಂಗ್ರೆಸ್‌ ಮುಖಂಡರಾದ ಭೀಮನಗೌಡ ಪಾಟೀಲ, ಮಾನಿಂಗಪ್ಪ ಹುಂಡೇಕಾರ, ಲೋಕಣ್ಣ ಉಳ್ಳಾಗಡ್ಡಿ, ಮುಧೋಳ ತಾಲೂಕು ಅಹಿಂದ ಸಂಘಟನೆ ಅಧ್ಯಕ್ಷ ಗೋವಿಂದ ಕೌಲಗಿ, ಬಾಗಲಕೋಟ ಜಿಲ್ಲಾ ಎಸ್‌ ಸಿ ಘಟಕದ ಪ್ರಧಾನ ಕಾರ್ಯದರ್ಶಿ ದುರಗಪ್ಪ ಕಾಳಮ್ಮನವರ, ಲೋಕಾಪುರ ಬ್ಲಾಕ್‌ ಕಾಂಗ್ರೆಸ್‌ ಎಸ್‌ಸಿ ಘಟಕದ ಅಧ್ಯಕ್ಷ ಗೋವಿಂದಪ್ಪ ದಾಸರ, ತಾಪಂ ಮಾಜಿ ಸದಸ್ಯ ಹಣಮಂತ ದುರಗನ್ನವರ, ಅಬ್ದುಲ್‌ ರೆಹಮಾನ್‌ ತೊರಗಲ್‌, ಗೋಪಾಲಗೌಡ ಪಾಟೀಲ, ಕುಮಾರ ಕಾಳಮ್ಮನವರ, ನಾಗರಾಜ ಜೀರಗಾಳ, ಗೋವಿಂದಗೌಡ ಪಾಟೀಲ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next