Advertisement

ಜೀವ ವೈವಿಧ್ಯತೆ ಕಾಪಾಡಲು ಶ್ರೀಗಳ ಕರೆ

12:41 PM Aug 20, 2018 | |

ಬೆಂಗಳೂರು: ಜೀವ ವೈವಿದ್ಯತೆಗೆ ಧಕ್ಕೆ ಉಂಟಾಗಿರುವುದೇ ಕೇರಳದಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪಕ್ಕೆ ಕಾರಣ. ಹೀಗಾಗಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯತೆಯಾಗಬೇಕು ಎಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದ್ದಾರೆ.

Advertisement

ಜ್ಞಾನಭಾರತಿ ಆವರಣದ ಎಚ್‌.ಎನ್‌.ಸಭಾಂಗಣದಲ್ಲಿ ವಿಶ್ವ ಒಕ್ಕಲಿಗರ ಮಹಾ ವೇದಿಕೆಯಿಂದ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮಾತೃ ಸ್ವರೂಪಿ ಪ್ರಕೃತಿಯು ಮನುಷ್ಯ ಸಹಿತವಾಗಿ ಸಕಲ ಚರಾಚರ ಜೀವಿಗಳನ್ನು ಸಾಕಿ ಸಲಹುತ್ತಿದೆ. ಸ್ವಾರ್ಥ ಮನೋಭಾವದ ಮನುಷ್ಯ ಪ್ರಕೃತಿಯ ಒಡಲಿಗೆ ನಿರಂತರ ಘಾಸಿ ಮಾಡುತ್ತಿ¨ªಾನೆ. ಹೀಗೆಯೇ ಮುಂದುವರಿದರೆ ಭವಿಷ್ಯದಲ್ಲಿ ಮತ್ತಷ್ಟು ಆತಂಕ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರಕೃತಿ ಮತ್ತು ಮನುಷ್ಯನ ದೈಹಿಕ ರಚನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಪಂಚಭೂತಗಳು ಪರಸ್ಪರ ನಿರ್ದಿಷ್ಟ ಪ್ರಮಾಣದಲ್ಲಿ ಅರಿತು ಬೆರೆತು ಒಂದು ಸುಂದರ ಲೋಕ ರೂಪುಗೊಂಡಿದೆ. ಪಂಚಭೂತಗಳ ಈ ಪ್ರಮಾಣದಲ್ಲಿ ಏರು ಪೇರಾದರೆ ದೇಹಕ್ಕೆ ಕಾಯಿಲೆ ಬರುವಂತೆ ಪ್ರಕೃತಿಯಲ್ಲೂ ಬದಲಾವಣೆಯಾಗುತ್ತದೆ. ಈ ಬದಲಾವಣೆ ಮನುಷ್ಯ ಸಂಕುಲವನ್ನೇ ನಡುಗಿಸಿಬಿಡುತ್ತದೆ ಎಂದು ಹೇಳಿದರು.

ನಿರ್ದಿಷ್ಟ ಸಮಾಜದ ಹೆಸರಿನಲ್ಲಿ ಒಗ್ಗಟ್ಟಾದರೂ ಇಡೀ ಸಮುದಾಯದ ಒಳಿತು ಸಂಘಟನೆಯ ಮೂಲಭೂತ ಗುರಿಯಾಗಬೇಕು. ಇದೇ ಸತ್ಸಂಗದ ಉದ್ದೇಶ ಎಂದು ವಿವರಿಸಿದರು. ಇದೇ ವೇಳೆ ಹಲವು ಶ್ಲೋಕ ಹಾಗೂ ಮಂತ್ರಗಳನ್ನು ಪಠಿಸಿದ ಶ್ರೀಗಳು ನೆರೆದಿದ್ದ ಸಭಿಕರಿಗೆ ಸಂಸ್ಕೃತ ಶ್ಲೋಕಗಳನ್ನು ಅರ್ಥ ಸಹಿತವಾಗಿ ಹೇಳಿಕೊಟ್ಟರು. ಶಾಸಕ ಎಸ್‌.ಟಿ.ಸೋಮಶೇಖರ್‌, ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌, ಕರ್ನಾಟಕ ರಕ್ಷಣಾವೇದಿಕೆಯ ಟಿ.ಎ.ನಾರಾಯನಗೌಡ, ಹನುಮಂತೇಗೌಡ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next