Advertisement

ಗ್ರಾಮೀಣರಲ್ಲಿ ಸ್ವತ್ಛತಾ ಜಾಗೃತಿ ಮೂಡಿಸಲು ಪ್ರಮುಖರ ಕರೆ

01:00 AM Feb 24, 2019 | Team Udayavani |

ಮಡಿಕೇರಿ : ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ, ಚಿಕ್ಕಅಳುವಾರ ಕಾಲೇಜ್‌ ವತಿಯಿಂದ ರಾಣಿಗೇಟ್‌ ಸರಕಾರಿ ಗಿರಿಜನ ಆಶ್ರಮ ಶಾಲೆ ಆವರಣದಲ್ಲಿ ಆಯೋಜಿಸಿರುವ ಗ್ರಾಮೀಣ ಅಧ್ಯಯನ ಶಿಬಿರಕ್ಕೆ ಚಾಲನೆ ದೊರೆತ್ತಿದೆ.

Advertisement

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಕೊಪ್ಪ ಕ್ಷೇತ್ರದ ಜಿ.ಪಂ. ಸದಸ್ಯ ವಿ. ರಾಜೇಂದ್ರ, ಗಿರಿಜನ ಹಾಡಿಯ ನಿವಾಸಿಗಳಿಗೆ ಸ್ಪತ್ಛತೆಯ ಬಗ್ಗೆ ಅರಿವು ಮತ್ತು ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಅಗತ್ಯವಿದೆ ಎಂದರು. ತಮ್ಮ ಆರೋಗ್ಯವನ್ನು ತಾವೇ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.ಮೂಲಸೌಲಭ್ಯಗಳನ್ನು ಪಡೆದುಕೊಳ್ಳುವುದು ಮತ್ತು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವುದು ಹೇಗೆ ಎನ್ನುವ ಬಗ್ಗೆ ತಿಳಿದಿರಬೇಕು. ಜಾತಿ, ಮತ, ಭೇದವಿಲ್ಲದೆ ಎಲ್ಲರೂ ಸಮಾನರು ಎನ್ನುವ ಭಾವನೆ ಮೂಡಿಸಬೇಕು ಎಂದು ರಾಜೇಂದ್ರ ಕರೆ ನೀಡಿದರು.

ಕೊಪ್ಪ ಗ್ರಾ.ಪಂ ಉಪಾಧ್ಯಕ್ಷ ಯಶ್‌ವಂತ್‌ ಕುಮಾರ್‌ ಮಾತನಾಡಿ ವಿದ್ಯಾರ್ಥಿಗಳು ಗ್ರಾಮೀಣ ಅಧ್ಯಯನ ಶಿಬಿರದ ಮೂಲಕ ಗ್ರಾಮಸ್ಥರಿಗೆ ದೈನಂದಿನ ಸ್ವತ್ಛತೆಯ ಬಗ್ಗೆ ಮಾಹಿತಿ ನೀಡಿ ಜಾಗೃತಿಗೊಳಿಸಬೇಕೆಂದರು. ಶುಚಿತ್ವ ಕಾಪಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವುದನ್ನು ಮನದಟ್ಟು ಮಾಡಿಕೊಡುವಂತೆ ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ ಚಿಕ್ಕಅಳುವಾರ ಕಾಲೇಜ್‌ನ ಪ್ರಭಾರ ನಿರ್ದೇಶಕರಾದ ಪೊ›.ಮಂಜುಳಾ ಶಾಂತರಾಮ್‌ ಗ್ರಾಮೀಣ ಅಧ್ಯಯನವು ಯಾವ ವಿಷಯಗಳನ್ನೊಳಗೊಂಡಿದೆ ಎಂದು ಮಾಹಿತಿ ನೀಡಿದರು.  ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಹರಿಣಾಕ್ಷಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಕೊಪ್ಪ ಗ್ರಾ.ಪಂ. ಅ«ಕ್ಷೆ ಶಾಹಿನಾ  ಭಾನು, ಸದಸ್ಯರಾದ ಜಲೀಲ್‌, ಚಂದ್ರಶೇಖರ್‌, ಗಿರಿಜನ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ಕೀರ್ತಿ ಕುಮಾರ್‌, ರಾಣಿ ಗೇಟ್‌, ಆದಿವಾಸಿ ಸಮೂಹದ ಹಿರಿಯ ಹೋರಾಟ ಗಾರ್ತಿ ಅಕ್ಕಮ್ಮ ಉಪಸ್ಥಿತರಿದ್ದರು. 

Advertisement

ಶೈಕ್ಷಣಿಕ ಸಾಧನೆಗೆ ಕರೆ
ಶಿಕ್ಷಕ ಚಂದ್ರಶೇಖರ್‌ ಮಾತನಾಡಿ, ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ನಾಡಿಗೆ ಕೀರ್ತಿ ತರಬೇಕೆಂದು ಕರೆ ನೀಡಿದರು.

ಸಮಾಜ ಕಾರ್ಯ ವಿಭಾಗದ ಶಿಬಿರಾಧಿಕಾರಿ ನಟರಾಜ್‌ ಮಾತನಾಡಿ, ಸಮಾಜ ಕಾರ್ಯ ಕೋರ್ಸ್‌ ಹಾಗೂ ಅದರ ಕಾರ್ಯ ವೈಖರಿಯ ಬಗ್ಗೆ ತಿಳಿಸಿದರು. ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗ‌ಳು ತಮ್ಮ ಶೈಕ್ಷಣಿಕ ಪಠ್ಯಕ್ಕೆ ಸಂಬಂಧಿಸಿದಂತೆ ಯಾವ ರೀತಿ ಕಾರ್ಯನಿರ್ವಹಿಸಬಹುದು ಎಂದರು. ಗ್ರಾಮೀಣ ಅಧ್ಯಯನ ಶಿಬಿರ ಎನ್‌ಎಸ್‌ಎಸ್‌ ಶಿಬಿರಕ್ಕಿಂತ ಹೇಗೆ ಭಿನ್ನ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next