Advertisement

ಸರಕಾರ ರೂಪಿಸಿರುವ‌ ಯೋಜನೆಯ ಸದುಪಯೋಗಕ್ಕೆ ಕರೆ

03:57 PM Oct 14, 2019 | sudhir |

ಶನಿವಾರಸಂತೆ: ಸರಕಾರ ರೂಪಿಸಿರುವ ಕೃಷಿ ಅಭಿಯಾನ ಕಾರ್ಯಕ್ರಮದಿಂದ ರೈತರಿಗೆ ಕೃಷಿ ಬಗ್ಗೆ ಹೆಚ್ಚಿಗೆ ಆಸಕ್ತಿ ಮೂಡಲು ಸಾಧ್ಯವಾಗುತ್ತದೆ ಎಂದು ಜಿ.ಪಂ.ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಅವರು ಹೇಳಿದರು.

Advertisement

ಅವರು ಹಂಡ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ, ಕೊಡಗು ಜಿಲ್ಲಾ ಪಂಚಾಯಿತಿ, ಸೋಮವಾರಪೇಟೆ ತಾಲೂಕು ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೊಡ್ಲಿಪೇಟೆ ಹೋಬಳಿಯ 2019-20ನೇ ಸಾಲಿನ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸರಕಾರವು ರೈತರ ಮನೆ ಬಾಗಿಲಿಗೆ ಹೋಗಿ ರೈತರಿಗೆ ಪ್ರಯೋಜವಾಗುವ ರೀತಿಯಲ್ಲಿ ಕೃಷಿ, ತೋಟಗಾರಿಕೆ ಮುಂತಾದ ವಿಜ್ಞಾನಿಗಳು,ಅಧಿಕಾರಿಗಳು ಸಂವಾದ ಮೂಲಕ ಮಾಹಿತಿ ನೀಡುತ್ತಾರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕೃಷಿ ಮಾಡುವಂತೆ ಸಲಹೆ ನೀಡಿದರು.

ಕೊಡ್ಲಿಪೇಟೆ ಕ್ಷೇತ್ರ ಜಿ.ಪಂ.ಸದಸ್ಯ ಸಿ.ಪಿ.ಪುಟ್ಟರಾಜು ಮಾತನಾಡಿ-ಇಂದಿನ ರೈತರು ಕೃಷಿ ಬಗ್ಗೆ ಆಸಕ್ತಿ ಕಳೆದು ಕೊಳ್ಳುತ್ತಿರುವ ನಿಟ್ಟಿನಲ್ಲಿ ಸರಕಾರ ಮತ್ತು ಕೃಷಿ ಇಲಾಖೆ ಕೃಷಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡು ರೈತಾಪಿ ಜನರನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರಿಸುತ್ತಿರುವುದು ಶ್ಲಾಘನಿಯ ಎಂದರು. ಸೋವಾರಪೇಟೆ ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ| ಎಸ್‌.ಆರ್‌.ರಾಜಶೇಖರ್‌ ಮಾತನಾಡಿಹಿಂದೆ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ನಡೆಸುತ್ತಿದ್ದ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಕಳೆದ 3 ವರ್ಷದಿಂದ ಪ್ರತಿಯೊಂದು ಹೋಬಳಿ ಮಟ್ಟದಲ್ಲೂ ನಡೆಸಲಾಗುತ್ತಿದೆ ಎಂದರು. ಸರಕಾರ ಮತ್ತು ಕೃಷಿ ಇಲಾಖೆ ರೈತರು ವಿವಿಧ ಕೃಷಿಯಲ್ಲಿ ಲಾಭದಾಯಕರಾಗುವ ಉದ್ದೇಶದಿಂದ ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದೆ ಎಂದರು.

ತಾ.ಪಂ.ಸದಸ್ಯ ಕುಶಾಲಪ್ಪ, ತಾಲೂಕು ಕೃಷಿ ತಾಂತ್ರಕಾ ಅಧಿಕಾರಿ ಡಾ.ಎಸ್‌.ಮುಕುಂದ್‌, ಕೊಡ್ಲಿಪೇಟೆ ಕೃಷಿ ಅಧಿಕಾರಿ ಆಯೇಷ ತಲಸ್ಸುಮ್‌, ಹಂಡ್ಲಿ ಗ್ರಾ.ಪಂ.ಅಧ್ಯಕ್ಷ ಸಂದೀಪ್‌, ಕೊಡ್ಲಿಪೇಟೆ ಗ್ರಾ.ಪಂ.ಅಧ್ಯಕ್ಷೆ ರೋಹಿಣಿ, ಹಂಡ್ಲಿ ಕೃಷಿ ಸಹಕಾರ ಸಂಘದ ಅಧ್ಯಕ್ಷ ಎಸ್‌.ಎಸ್‌.ಗಣೇಶ್‌ ಗ್ರಾ.ಪಂ.ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಕೃಷಿ ಪ್ರಾತ್ಯಕ್ಷಿಕೆ ಏರ್ಪಡಸಲಾಗಿತು.

Advertisement

ರೈತ ಸಂವಾದ
ವಿಜ್ಞಾನಿಗಳೊಂದಿಗೆ ರೈತ ಸಂವಾದ ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ವೆಂಕಟರಮಣಪ್ಪ ತೋಟಗಾರಿಕೆ ಬೆಳೆಗಳ ಬಗ್ಗೆ, ಬತ್ತ ಬೆಳೆ ಕುರಿತು ಮಡಿಕೇರಿ ಕೃಷಿ ವಿಸ್ತರ್ಣ ಶಿಕ್ಷಣ ಘಟಕದ ಡಾ.ಬಸವಲಿಂಗಯ್ಯ, ತರಕಾರಿ ಬೆಳೆಗಳ ಕುರಿತು ಮಡಿಕೇರಿ ಕೃಷಿ ವಿಸ್ತರ್ಣ ಶಿಕ್ಷಣ ಘಟಕದ ತೋಟಗಾರಿಕಾ ತಜ್ಞೆ ಡಾ.ವಿದ್ಯಾಶ್ರೀ ಹಾಗೂ ಕೊಡ್ಲಿಪೇಟೆ ಧರ್ಮಸ್ಥಳ ಯೋಜನೆಯ ಕೃಷಿ ಯಂತ್ರಧಾರೆ ಕೇಂದ್ರದ ವ್ಯವಸ್ಥಾಪಕ ಸದಾಶಿವ ಧರ್ಮಸ್ಥಳ ಸಂಸ್ಥೆ ಹಾಗೂ ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಬಾಡಿಗೆ ಕೃಷಿ ಯಂತ್ರದ ಕುರಿತು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next