Advertisement
ಹರಳು ಮತ್ತು ಚಿನ್ನಾಭರಣ ಮಂಡಳಿಗೆ (ಜಿಜೆಸಿ) ಮಾಡಲು ಹೊರಟಿರುವ ಪ್ರತಿಭಟನೆಯ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಕೇಂದ್ರ ಮನವಿ ಮಾಡಿಕೊಂಡಿದೆ.
Related Articles
Advertisement
ಇನ್ನು, ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಭಾರತದ ಮಾನದಂಡ ಮಂಡಳಿಯ (ಬಿಐಎಸ್) ಪ್ರಧಾನ ನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ, ಕೇಂದ್ರ ಸರ್ಕಾರದ ಹಾಲ್ ಮಾರ್ಕ್ ನೀತಿಯನ್ನು ವಿರೋಧಿಸಿ,‘ಕೆಲವು ಸಂಘಗಳು ಮುಷ್ಕರಕ್ಕೆ ಕರೆ ನೀಡಿವೆ ಎಂದು ಕೇಳಿದ್ದೇನೆ. ಉದ್ಯಮದ ಪ್ರತಿಯೊಂದು ಸಮಸ್ಯೆಗಳನ್ನೂ ಸರ್ಕಾರವು ಆಲಿಸುತ್ತಿದೆ. ಹೀಗಿರುವಾಗ ಯಾವುದಕ್ಕಾಗಿ ಮುಷ್ಕರ ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ದೇಶ ಮತ್ತು ಗ್ರಾಹಕರ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ಅತಿದೊಡ್ಡ ಹೆಜ್ಜೆಯಾಗಿದೆ. ಚಿನ್ನಾಭರಣ ವರ್ತಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಯಾವಾಗಲೂ ಸಿದ್ಧವಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ : ವೋಕ್ಸ್‌ವ್ಯಾಗನ್ ನ ಎಸ್‌ವಿಯುಡಬ್ಲ್ಯೂ ಟೈಗನ್ ಕಾರು ಪೂರ್ವವೀಕ್ಷಣೆಗೆ ಚಾಲನೆ