Advertisement

ಜನವರಿ 8 ಕ್ಕೆ ಗ್ರಾಮೀಣ ಕರ್ನಾಟಕ ಬಂದ್‌ಗೆ ಕರೆ

10:46 PM Dec 13, 2019 | Team Udayavani |

ಬೆಂಗಳೂರು: ಎಲ್ಲ ರೈತರು, ಕೃಷಿ ಕೂಲಿಕಾರರನ್ನು ಸಾಲದಿಂದ ಮುಕ್ತಿಗೊಳಿಸುವ ಋಣ ಮುಕ್ತ ಕಾಯ್ದೆ ಜಾರಿ, ಡಾ.ಸ್ವಾಮಿನಾಥನ್‌ ವರದಿ ಜಾರಿ, ಪ್ರವಾಹ ಪೀಡಿತರಿಗೆ ಸೂಕ್ತ ಪರಿಹಾರ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜ.8ರಂದು ಅಖೀಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ “ಗ್ರಾಮೀಣ ಕರ್ನಾಟಕ ಬಂದ್‌’ಗೆ ಕರೆ ನೀಡಿದೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಕಾರ್ಯದರ್ಶಿ ಜಿ.ಸಿ.ಬಯ್ನಾರೆಡ್ಡಿ, ನಿರಂತರ ರೈತ ವಿರೋಧಿ ನೀತಿಗಳಿಂದ ಉಂಟಾಗಿರುವ ಕೃಷಿ ಬಿಕ್ಕಟ್ಟಿನ ಪರಿಣಾಮ ದೇಶದಲ್ಲಿ ಆತ್ಮಹತ್ಯೆಗಳ ಪ್ರಮಾಣ ಅಧಿಕವಾಗಿದೆ. ಹೀಗಾಗಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಡಾ.ಸ್ವಾಮಿನಾಥನ್‌ ವರದಿ ಜಾರಿ ಮಾಡಬೇಕು ಎಂದರು. ರಾಜ್ಯದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಸೇರಿ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರಕ್ಕೆ ಕರೆ ನೀಡಲಾಗಿದೆ.

ಅದಕ್ಕೂ ಮೊದಲು ಎಐಕೆಎಸ್‌ಸಿಸಿಯ ಅಖೀಲ ಭಾರತ ನಾಯಕತ್ವಕ್ಕೆ ರಾಷ್ಟ್ರಪತಿ ನೀಡಿದ್ದ ಭರವಸೆಯನ್ನು ನೆನಪಿಸುವ ಉದ್ದೇಶದಿಂದ ಡಿ.23 ರಿಂದ ಜ.3 ರವರೆಗೆ ಜಿಲ್ಲಾ ಕೇಂದ್ರಗಳಲ್ಲಿ ರೈತರ ಬೃಹತ್‌ ಸಮಾವೇಶ, ಮೆರವಣಿಗೆ ಮೂಲಕ ರಾಷ್ಟ್ರಪತಿಗೆ ಮುಷ್ಕರದ ನೋಟಿ ಜಾರಿಯ ಹೋರಾಟ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಕೋಡಿಹಳ್ಳಿ ಚಂದ್ರಶೇಖರ್‌, ಜೆ.ಎಂ.ವೀರಸಂಗಯ್ಯ, ಎಐಕೆಎಸ್‌ನ ಪಿ.ಪ್ರಸನ್ನ ಕುಮಾರ್‌, ಬಿಕೆಎಂಯುನ ಡಾ.ಜನಾರ್ದನ್‌ ಸೇರಿ ಹಲವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next