Advertisement

Dandeli: ಆಂಗ್ಲ‌ಭಾಷೆಯ ನಾಮಫಲಕಗಳ‌ ತೆರವಿಗೆ ಕರವೇ ಆಗ್ರಹ

02:56 PM Dec 21, 2023 | Team Udayavani |

ದಾಂಡೇಲಿ: ನಗರದ ಅಂಗಡಿ-ಮುಂಗ್ಗಟ್ಟುಗಳ‌, ವಾಣಿಜ್ಯ ಕಟ್ಟಡಗಳ ಮೇಲೆ ಮತ್ತು ಮುಂಭಾಗದಲ್ಲಿ ಅಳವಡಿಸಲಾದ ಆಂಗ್ಲ ಭಾಷೆಯ ನಾಮಫಲಕಗಳನ್ನು ಹಾಗೂ ತಾಲೂಕಿನ ವಿವಿದೆಡೆಗಳಲ್ಲಿ ಆಂಗ್ಲ‌ ಭಾಷೆಯಲ್ಲಿ ಹಾಕಲಾದ ರೆಸಾರ್ಟ್, ಹೋಂ ಸ್ಟೇ, ವಸತಿ ಗೃಹಗಳ ಪ್ರಚಾರದ ಬ್ಯಾನರ್ ತೆರವುಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ (ನಾ) ಬಣದ ತಾಲೂಕು ಘಟಕದ ಅಧ್ಯಕ್ಷ ಸಾಧಿಕ್ ಮುಲ್ಲಾ ಆಗ್ರಹಿಸಿದ್ದಾರೆ.

Advertisement

ಅವರು ಗುರುವಾರ ನಗರದಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ ಆಂಗ್ಲ ಭಾಷೆಯಲ್ಲಿ ಬರೆದ ನಾಮಫಲಕಗಳನ್ನು ತೆರವುಗೊಳಿಸಿ, ಡಿ. 27ರೊಳಗೆ ಶೇ.65 ರಷ್ಟು ಕನ್ನಡ ಭಾಷೆಯಲ್ಲಿ ಬರೆದಿರುವ ನಾಮಫಲಕಗಳನ್ನು ಅಳವಡಿಸಬೇಕು. ಇಲ್ಲದಿದ್ದಲ್ಲಿ ಆಂಗ್ಲ ಭಾಷೆಯಲ್ಲಿ ರಾರಾಜಿಸುತ್ತಿರುವ ನಾಮಫಲಕಗಳನ್ನು ಸಂಘಟನೆಯ ವತಿಯಿಂದ ತೆರವುಗೊಳಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂದರ್ಭದಲ್ಲಿ  ಸಂಘಟನೆಯ ಪದಾಧಿಕಾರಿಗಳಾದ ಅಶೋಕ ಮಾನೆ,  ರಬ್ಬಾನಿ ದುಕಾನದಾರ, ಸಮೀರ್ ಅಂಕೋಲೆಕರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next