Advertisement
ಕ್ಷೇತ್ರದ ವೈಟ್‌ಫೀಲ್ಡ್‌ನಲ್ಲಿ ಪ್ರಸ್ಟೀಜ್ ಸಂಸ್ಥೆ ವತಿಯಿಂದ 2.75 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ನೂತನ ವೈಟ್‌ಫೀಲ್ಡ್ ಪೊಲೀಸ್ ಠಾಣೆ ಹಾಗೂ ಉಪ ಪೊಲೀಸ್ ಆಯುಕ್ತರ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಬೆಂಗಳೂರು ಹೊರವಲಯದಲ್ಲಿ ಭೂ ವ್ಯವಹಾರಗಳು ಹೆಚ್ಚುತ್ತಿವೆ. ಪೊಲೀಸರ ಸಹಕಾರವಿಲ್ಲದೆ ಇವೆಲ್ಲ ಸಾಧ್ಯವಿಲ್ಲ. ಪೊಲೀಸರು ಪ್ರಾಮಾಣಿಕವಾಗಿ ಕಾನೂನು ಪ್ರಕಾರ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ 1,500 ಪೊಲೀಸ್ ಠಾಣೆಗಳಿವೆ. ತಂತ್ರಧಿಜಾnನವನ್ನು ಜನರ ಉಪಯೋಗಕ್ಕೆ ಬಳಸಿಕೊಳ್ಳಬೇಕು. ಆಧುನಿಕತೆಯನ್ನು ಪೊಲೀಸ್ ವ್ಯವಸ್ಥೆಯಲ್ಲಿ ಜಾರಿಗೆ ತರಬೇಕು. ಕ್ರೆ„ಮ್ ಕ್ರಿಮಿನಲ್ ಟ್ರಾಕಿಂಗ್ ಸಿಸ್ಟಮ್ (ಸಿಸಿಟಿಎಸ್)ಅನ್ನು ಎಲ್ಲ ಠಾಣೆಗಳಲ್ಲಿ ಅವಳಡಿಸಲಾಧಿಗುವುದು ಎಂದರು.
ಬೆಂಗಳೂರಿಗೆ ವಿಶ್ವದ ಅತ್ಯಂತ ಕ್ರಿಯಾಶೀಲ ನಗರ ಎಂಬ ಹೆಗ್ಗಳಿಕೆ ಸಿಕ್ಕಿದೆ. ಅದೇ ರೀತಿ ಜನಸಾಮಾನ್ಯರ ಪಾಲಿಗೆ ಇದು ಅತ್ಯಂತ ಸುರಕ್ಷಿತ ನಗರವಾಗಬೇಕು. ಸಂಚಾರದಟ್ಟಣೆ ಹೆಚ್ಚಿದೆ. ದಿಲ್ಲಿ ಹೊರತುಪಡಿಸಿದರೆ ಅತೀ ಹೆಚ್ಚು ವಾಹನಗಳನ್ನು ಹೊಂದಿರುವ ನಗರ ಬೆಂಗಳೂರು. ರಾಜ್ಯ ಸರ್ಕಾರವು ಬೆಂಗಳೂರು ಸರ್ವಾಂಗೀಣ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ 7 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿದೆ ಎಂದರು.
ಕಳೆದ ಮೂರು ವರ್ಷಗಳಲ್ಲಿ ಪೊಲೀಸರಿಗೆ 11 ಸಾವಿರ ಮನೆಗಳನ್ನು ನಿರ್ಮಿಸಲಾಗಿದೆ. ಪೊಲೀಸ್ ಸಹಾಯವಾಣಿ 100 ಅನ್ನು ಅಭಿವೃದ್ಧಿಪಡಿಸಲಾಧಿಗುತ್ತಿದ್ದು, 15 ಸೆಕೆಂಡುಗಳಲ್ಲಿ ಕರೆ ಮಾಡುವವರಿಗೆ ಸ್ಪಂದನೆ ಸಿಗಲಿದೆ. ಇನ್ನು 15 ದಿನಗಳಲ್ಲಿ ಸುಧಾರಿತ ವ್ಯವಸ್ಥೆಯನ್ನು ಲೋರ್ಕಾಪಣೆಗೊಳಿಸಲಾಗುವುದು ಎಂದರು.
ನಮ್ಮ ಸಮಿಪದ ಪೊಲೀಸ್‌ಠಾಣೆಗಳನ್ನು ಪತ್ತೆ ಹಚ್ಚಲು ನೆರವಾಗುವಂತೆ ನೋ ಮೈ ಪೊಲೀಸ್ ಸ್ಟೇಷನ್ ಮೊಬೈಲ್ ಅಪ್ಲಿಕೇಷನ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋರ್ಕಾಪಣೆಗೊಳಿಸಿದರು. ಈ ಆ್ಯಪ್‌ನಿಂದ ಪೊಲೀಸ್ ಠಾಣೆಯ ಸರಹದ್ದು ತಿಳಿಯಬಹುದು, ಅಲ್ಲದೆ ಆದಷ್ಟು ಬೇಗನೆ ಸಮಸ್ಯೆಗೆ ಪರಿಹಾರ ಹುಡುಕಬಹುದೆಂದು ನಗರ ಪೊಲೀಸ್ ಆಯುಕ್ತ ಪ್ರವೀಣ್‌ಸೂದ್ ಹೇಳಿದರು.
ಪ್ರಸ್ಟೀಜ್ ಸಂಸ್ಥೆಯ ಮುಖ್ಯಸ್ಥ ಇರ್ಪಾನ್ ರಝಾಕ್, ಸಿಐಡಿ ಡಿವೈಎಸ್ಪಿಎಂ.ಡಿ.ಸಕ್ರಿ, ಚೇತನ್ಯ ಫೌಂಡೇಷನ್‌ನ ಗುರುಪ್ರಸಾದ್, ನೆಟ್ ಆಪ್‌ನ ಮುರುಳಿನಾಯ್ಡು, ವೈದೇಹಿ ವೈದ್ಯಕೀಯ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಕಲ್ಪಜಾರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ನಗರಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಶಾಸಕರಾದ ಅರವಿಂದ ಲಿಂಬಾವಳಿ, ಬೈರತಿ ಬಸವರಾಜ, ರಾಜ್ಯ ಪೊಲೀಸ್ ಮಹಾನಿರ್ದೇಶಕ ರೂಪಕ್‌ಕುಮಾರ್ ದತ್ತಾ, ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್, ವಿಧಾನಪರಿಷತ್ ಸದಸ್ಯರಾದ ಬಿ.ಎಸ್.ಸುರೇಶ್, ರಿಝಾನ್‌ಅರ್ಶದ್, ಎಂ.ನಾರಾಯಣಸ್ವಾಮಿ, ಕೆಪಿಸಿಸಿ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ಪಾಲಿಕೆ ಸದಸ್ಯರಾದ ಉದಯ್‌ಕುಮಾರ್, ಹರಿಪ್ರಸಾದ್, ಮುನಿಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು.
ನಿರುದ್ಯೋಗ ಸಮಸ್ಯೆ ಹೆಚ್ಚಳಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ಮಹದೇವಪುರ ಕ್ಷೇತ್ರದಿಂದ 1381ಕೋಟಿ ರೂ. ತೆರಿಗೆ ಪಾಲಿಕೆಗೆ ಸಂದಾಯವಾಗಿದೆ. ಆದರೆ ರಾಜಕೀಯ ದುರುದ್ದೇಶದಿಂದ ಅನುದಾನ ಕಡಿಮೆ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಕ್ಷೇತ್ರದ ಮೂಲ ಸೌಲಭ್ಯಗಳ ಕೊರತೆ ತಲೆದೋರುತ್ತಿದ್ದು, ಈ ಭಾಗದಲ್ಲಿನ ಸಂಸ್ಥೆಗಳು ಸ್ಥಳಾಂತರಗೊಳ್ಳುತ್ತಿವೆ. ಇದರಿಂದ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದ್ದು, ತೆರಿಗೆ ಹಣದಲ್ಲಿ ಕನಿಷ್ಠ ಶೇ. 20ರಷ್ಟಾದರೂ ಅನುದಾನ ನೀಡಬೇಕೆಂದು ಆಗ್ರಹಿಸಿದರು.