Advertisement

ದಾಸೋಹ ಸೂತ್ರ ಅಳವಡಿಕೆಗೆ ಕರೆ

11:33 AM Feb 12, 2018 | Team Udayavani |

ಕಲಬುರಗಿ: ಬದುಕಿಗೆ ಹತ್ತಿರವಾಗಿರುವ ಹಾಗೂ ನೆಮ್ಮದಿ ಕಂಡುಕೊಳ್ಳುವ ದಾಸೋಹ ಸೂತ್ರ ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿ ಕೊಳ್ಳಲು ಮುಂದಾಗುವಂತೆ ವಿಜಯಪುರ ಜ್ಞಾನಯೋಗಾಶ್ರಮದ, ಆಧ್ಯಾತ್ಮಿಕ ಚಿಂತಕ ಸಿದ್ದೇಶ್ವರ ಸ್ವಾಮೀಜಿ ಕರೆ ನೀಡಿದರು.

Advertisement

ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ರವಿವಾರ ಆಯೋಜಿಸಿದ್ದ ಎಸ್‌ಬಿಆರ್‌ ಸುವರ್ಣ ಮಹೋತ್ಸವ ಹಾಗೂ ಎಸ್‌ಬಿಆರ್‌ ಶಾಲೆ ಹಳೆ ವಿದ್ಯಾರ್ಥಿಗಳ ಸದಸ್ಯರ ಕೂಟ ಉದ್ಘಾಟಿಸಿ ಸ್ವಾಮೀಜಿ ಮಾತನಾಡಿದರು. ಇರುವುದನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಸುಂದರ ತತ್ವ ದಾಸೋಹದಲ್ಲಿ ಪ್ರಮುಖವಾಗಿ ಕಾಣುತ್ತೇವೆ. ಭಾವನಾತ್ಮಕ, ಜ್ಞಾನದ ಫ‌ಲವೇ ದಾಸೋಹ. ಶಿಕ್ಷಕರು ಮೊದಲು ಜ್ಞಾನವಾಗಿದ್ದಾರೆ. ಜ್ಞಾನ ಮೂಲಕ ಸಂಪಾದಿಸಿಕೊಂಡಿದ್ದನ್ನು ವಿದ್ಯಾರ್ಥಿಗಳಿಗೆ ಸ್ವಲ್ಪ ಸ್ವಲ್ಪ ಹಂಚುವುದೇ ದಾಸೋಹವಾಗಿದೆ ಎಂದು ಹೇಳಿದರು.

ಬದುಕು ರೂಪಿಸುವ ನಿರಂತರ ಜ್ಞಾನ ದಾಸೋಹ ಮಾಡುತ್ತಿರುವ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿಗಳಾದ ಡಾ| ಶರಣಬಸವಪ್ಪ ಅಪ್ಪ ಅವರ ಶೈಕ್ಷಣಿಕ ಕ್ರಾಂತಿ ಅದ್ಭುತ ಹಾಗೂ ಮಾದರಿಯಾಗಿದೆ. ಅವರು ಕೇವಲ ತಮಗಾಗಿ ಇಂತಹ ಶಿಕ್ಷಣ ಸಂಸ್ಥೆ ಕಟ್ಟಿಲ್ಲ ಹಾಗೂ ಸಾಧನೆ ಮಾಡಿಲ್ಲ. ಅವರು ಕಟ್ಟಿರುವ ಈ ಶಿಕ್ಷಣ ಕ್ರಾಂತಿ ಬೆಳಕು ಹೈದರಾಬಾದ್‌ ಕರ್ನಾಟಕ ಪ್ರದೇಶವನ್ನೇ ಬೆಳಗುತ್ತಿದೆ. ಅಲ್ಲದೇ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದೆ ಎಂದು ಸಿದ್ದೇಶ್ವರ ಸ್ವಾಮೀಜಿ ಶ್ಲಾಘಿಸಿದರು. 

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಎಸ್‌ಬಿಆರ್‌ ಕಾಲೇಜಿ ಪ್ರಾಚಾರ್ಯ ಎನ್‌.ಎಸ್‌. ದೇವರಕಲ್‌, ವಿಜ್ಞಾನ ಶಿಕ್ಷಕ ಜೆ.ಕೆ. ಪ್ರಸಾದ ಇದ್ದರು. ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ| ನಿರಂಜನ್‌ ನಿಷ್ಠಿ ಪ್ರಾಸ್ತಾವಿಕವಾಗಿ ಮಾತನಾಡಾದರು. ಡಾ| ಭರತ್‌ ಕೋಣಿನ್‌ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next