ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಗಳಲ್ಲಿ ಮಾಲಿನ್ಯಕ್ಕೆ ಕಾರಣವಾಗುವ ಕಾರ್ಖಾನೆಗಳು ನಡೆಯುತ್ತಿದ್ದರು, ಪರಿಸರ ಮಾಲಿನ್ಯ ಇಲಾಖೆಯ ಜಿಲ್ಲಾ ನಿಯಂತ್ರಣಾಧಿಕಾರಿಗಳು ಯಾವ ಕ್ರಮವನ್ನು ಅನುಸರಿಸುತ್ತಿಲ್ಲ, ತಕ್ಷಣ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಸಮತಾ ಸೈನಿಕ ದಳದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ
ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಕನಕಪುರ ತಾಲೂಕಿನಲ್ಲಿ ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಡೈಯಿಂಗ್ ಕಾರ್ಖಾನೆ ವಿರುದ್ಧ ಮಾಲಿನ್ಯ ನಿಯಂತ್ರಣ ಮಂಡಳಿಯ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅನಧಿಕೃತವಾಗಿ ನಡೆಯುತ್ತಿರುವ ಕಾರ್ಖಾನೆಗಳು, ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಕಾರ್ಖಾನೆಗಳು ಮತ್ತು ಡೈಯಿಂಗ್ ಕಾರ್ಖಾನೆ ಮುಚ್ಚಿಸಿ ಕ್ರಮ
ಕೈಗೊಳ್ಳಬೇಕಾದ ಅಧಿಕಾರಿಗಳೇ ಕಾರ್ಖಾನೆಗಳೊಂದಿಗೆ ಶಾಮಿಲಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಮರಳವಾಡಿ ಹೋಬಳಿ ತೇರು ಬೀದಿ ಗ್ರಾಮದ ಹತ್ತಿರ ಅನಧಿಕೃತವಾಗಿ ಡೈಯಿಂಗ್ ಕಾರ್ಖಾನೆ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದೆ. ಅರಣ್ಯ ಇಲಾಖೆ ಹಾಗೂ ವಿದ್ಯುತ್ ಇಲಾಖೆಯಿಂದಲು ಅನುಮತಿ ಪಡೆದಿಲ್ಲ. ಈ ಕಾರ್ಖಾನೆಯಿಂದ ಹೊರ ಸೂಸುವ ವಿಷಾನಿಲ ನೇರ ವಾಗಿ ಅರಣ್ಯ ಪ್ರದೇ ಶ ವನ್ನು ಸೇರುತ್ತಿದೆ. ಇದರಿಂದ ಕಾಡಿನಲ್ಲಿರುವ ಪ್ರಾಣಿ, ಪಕ್ಷಿಗಳ ಮೇಲೆ ದುಷ್ಪರಿಣಾಮ ಬೀರು ತ್ತಿದೆ. ಇದನ್ನು ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈ ಗೊಂಡಿಲ್ಲ. ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಕಾರ್ಖಾನೆ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಆ ಅಧಿಕಾರಿಯನ್ನು ಸೇವೆಯಿಂದ ಅಮಾ ನತ್ತು ಮಾಡ ಬೇಕು. ಜತೆಗೆ ವನ್ಯಜೀವಿಗಳ ಸಾವಿಗೆ ಕಾರಣನಾಗುತ್ತಿರುವ ಕಾರ್ಖಾನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸ ಬೇಕು ಎಂದು ಪ್ರತಿಭಟ ನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಮತಾ ಸೈನಿಕ ದಳ ವಿದ್ಯಾರ್ಥಿ ಘಟಕ ರಾಜ್ಯಾ ಧ್ಯಕ್ಷ ಡಾ.ಜಿ. ಗೋವಿಂದಯ್ಯ, ಕಾಂಗ್ರೆಸ್ ಮುಖಂಡ ಶಿವ ಕು ಮಾ ರ ಸ್ವಾಮಿ, ಶಿವಶಂಕರ್ , ಗುರುಮಲ್ಲಯ್ಯ, ಗುಡ್ಡೆ ವೆಂಕ ಟೇಶ್ , ಬಿ.ಎಸ್ .ರು ದ್ರೇಶ್ , ಕೋಟೆ ಪ್ರಕಾಶ್ , ಅಂಜನ್ ಮೂರ್ತಿ, ಶಂಭು ಲಿಂಗಯ್ಯ, ಬಾಬು, ಹೇಮಂತ್ ಬೈರಮಂಗಲ, ಬನವಾಸಿ ಗೋಪಾಲ್ ಇತರರು ಇದ್ದರು.