Advertisement

ಸಕ್ಕರೆ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

10:07 AM Jun 20, 2019 | Team Udayavani |

ಅಥಣಿ: ಜಿಲ್ಲಾಕಾರಿಗಳ ಆದೇಶದ ಮೇರೆಗೆ ರೈತರ ಕಬ್ಬಿನ ಬಿಲ್ಲನ್ನು ಪಾವತಿಸದ ಅಥಣಿ ಹಾಗೂ ಕಾಗವಾಡ ತಾಲೂಕಾಗಳ ಐದು ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಪ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ಈ ವೇಳೆ ಕರವೇ ಅಧ್ಯಕ್ಷ ಬಸನಗೌಡಾ ಪಾಟೀಲ ಮಾತನಾಡಿ, ಕಾಗವಾಡ ಹಾಗೂ ಅಥಣಿ ತಾಲೂಕಿನ ಐದು ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ದರವನ್ನು ಎಪ್‌.ಆರ್‌.ಪಿ ಪ್ರಕಾರ ನೀಡದೆ ಬಾಕಿ ಹಣವನ್ನು ಉಳಿಸಿಕೊಂಡಿವೆ. ಅಲ್ಲದೇ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ, ಉಗಾರ ಶುಗರ್ ವರ್ಕ್ಸ್, ರೇಣುಕಾ ಶುಗರ್, ಅಥಣಿ ಶುಗರ್ ಹಾಗೂ ಶಿರಗುಪ್ಪಿ ಶುಗರ್ ನೂರಾರು ಕೋಟಿ ಹಣವನ್ನು ಬಾಕಿ ಉಳಿಸಿಕೊಂಡು ರೈತರನ್ನು ಸತಾಯಿಸುತ್ತಿವೆ. ಶೀಘ್ರವೇ ಇಂಥ ಕಾರ್ಖಾನೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿಗಳ ಆದೇಶಿಸಿರುವ ಹಿನ್ನೆಲೆಯಲ್ಲಿ ತಕ್ಷಣ ತಾಲೂಕು ಆಡಳಿತ ಕಾರ್ಯಪ್ರವರ್ತರಾಗಿ ತಪ್ಪಿತಸ್ಥ ಕಾರ್ಖಾನೆಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ರೈತರ ಬಾಕಿ ಹಣವನ್ನು ಪಾವತಿಸುವಂತೆ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಸುಂದರ ಸೌಧಾಗರ, ಮಂಜು ಹೋಳಿಕಟ್ಟಿ, ಹನುಮಂತ ಕಂಟಿಕರ, ಅಪ್ಪು ಪಾಟೀಲ, ವೆಂಕಟೇಶ ಮಾನೆ, ಸಚ್ಚಿನ ಪಾಟೀಲ, ಅನಿಲ ನಾಯಿಕ, ಅಭಿಜೀತ ಕೊಡಗ, ಉಮೇಶ ಬಾನ್ನೇನವರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next