ಪಾಂಡವಪುರ: ಗ್ರಾಮೀಣ ಪ್ರದೇಶದಲ್ಲಿಕೊರೊನಾ ಹೆಚ್ಚಾಗುತ್ತಿರುವುದರಿಂದಹಳ್ಳಿಗಳ ಜನರ ಜೀವನದ ಜತೆಚೆಲ್ಲಾಟವಾಡುತ್ತಿರುವ ಗ್ರಾಪಂಪಿಡಿಒಗಳ ವಿರುದ್ಧ ಕಾನೂನು ಕ್ರಮಜರುಗಿಸಬೇಕೆಂದು ಬಿಜೆಪಿ ನಿಯೋಗತಾಪಂ ಇಒ ಆರ್.ಪಿ.ಮಹೇಶ್‌ಅವರನ್ನು ಒತ್ತಾಯಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿಬಿಜೆಪಿ ಮುಖಂಡ ಕಿಯೋನಿಕ್ಸ್‌ನಿರ್ದೇಶಕ ಎಚ್.ಎನ್.ಮಂಜುನಾಥ್‌ನೇತೃತ್ವದಲ್ಲಿ ಬಿಜೆಪಿ ಮುಖಂಡರನಿಯೋಗ ತಾಪಂ ಇಒ ಆರ್.ಪಿ.ಮಹೇಶ್ ಅವರನ್ನು ಭೇಟಿ ಮಾಡಿತಾಲೂಕಿನಾದ್ಯಂತ ಕೊರೊನಾ ಸಮಸ್ಯೆಬಗ್ಗೆ ಚರ್ಚೆ ನಡೆಸಿದರಲ್ಲದೆ ಕೆಲವುಗ್ರಾಪಂಗಳಲ್ಲಿ ಪಿಡಿಒಗಳು ಕೊರೊನಾಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದು, ಅಂತವರವಿರುದ್ಧ ಕಾನೂನು ಕ್ರಮಕ್ಕಾಗಿಒತ್ತಾಯಿಸಿದರು.
ತಾಲೂಕಿನ ಹಿರೇಮರಳಿ ಗ್ರಾಮಪಂಚಾಯಿತಿ ಪಿಡಿಒ ಸಾವಿತ್ರಮ್ಮ ಅವರುಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿಯಾವುದೇ ಮುಂಜಾಗೃತ ಕ್ರಮವಹಿಸಿಲ್ಲ. ಹಿರೇಮರಳಿ ಗ್ರಾಪಂ ಕಚೇರಿಗೆವಾರಕ್ಕೊ ಅಥವಾ ಹದಿನೈದು ದಿನಕ್ಕೊಮ್ಮೆಬಂದು ಹಾಜರಾತಿಗೆ ಸಹಿ ಹಾಕಿವಾಪಸ್ಸು ತೆರಳುತ್ತಿದ್ದಾರೆ ಎಂದುಆರೋಪಿಸಿದರು.
ಲಕ್ಷ್ಮೀಸಾಗರ ಹಾಗೂ ಟಿ.ಎಸ್.ಛತ್ರಗ್ರಾಪಂ ಪಿಡಿಒಗೆ ಗ್ರಾಮಸ್ಥರು ಹಳ್ಳಿಯಬೀದಿಗಳಿಗೆ ಸ್ಯಾನಿಟೈಸರ್ ಮಾಡುವಂತೆಮನವಿ ಮಾಡಿಕೊಂಡರೂಇದುವರೆಗೂ ಮಾಡಿಸಿರುವುದಿಲ್ಲ.ಇಂತಹ ಬೇಜವಾಬ್ದಾರಿ ಪಿಡಿಒಗಳವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.ತಾಪಂ ಇಒ ಆರ್.ಪಿ.ಮಹೇಶ್‌ಮಾತನಾಡಿ, ಹಿರೇಮರಳಿ ಗ್ರಾಪಂಪಿಡಿಒ ಸಾವಿತ್ರಮ್ಮ ಅವರನ್ನು ರಜೆಮೇಲೆ ಕಳುಹಿಸಲು ಮೇಲಧಿಕಾರಿಗಳಿಗೆಶಿಫಾರಸ್ಸು ಮಾಡಲಾಗಿದ್ದು,
ಆ ಸ್ಥಾನಕ್ಕೆಮತ್ತೋರ್ವ ಪಿಡಿಒ ನೇಮಕ ಮಾಡಲಾಗಿದೆ ಎಂದರು. ಬಿಜೆಪಿ ಮುಖಂಡರಾದ ಗೃಹ ನಿರ್ಮಾಣ ಮಂಡಳಿನಿರ್ದೇಶಕ ಭಾಸ್ಕರ್, ನೀಲನಹಳ್ಳಿಧನಂಜಯ, ಶ್ರೀನಿ ವಾಸನಾಯ್ಕ,ಟಿ.ಎಸ್.ಛತ್ರ ಮಹೇಶ್, ಬೀರಶೆಟ್ಟಹಳ್ಳಿಬಾಲಗಂಗಾಧರ ಇದ್ದರು.