Advertisement

ಅಮೆರಿಕನ್‌ ಪ್ರಜೆಗಳಿಗೆ ವಂಚನೆ: ಕಾಲ್‌ ಸೆಂಟರ್‌ ದಾಳಿ; 8 ಮಂದಿ ಸರೆ

07:14 PM Nov 02, 2018 | Team Udayavani |

ಮುಂಬಯಿ : ವಯಾಗ್ರಾ ಸಹಿತ ನಿಷೇಧಿತ ದ್ರವ್ಯಗಳನ್ನು ಪೂರೈಸುವ ಭರವಸೆ ನೀಡಿ ಅಮೆರಿಕದ ಪ್ರಜೆಗಳನ್ನು ವಂಚಿಸುತ್ತಿದ್ದ ಕಾಲ್‌ ಸೆಂಟರ್‌ ಜಾಲದಲ್ಲಿ ಶಾಮೀಲಾದ ಆರೋಪದ ಮೇಲೆ ಮುಂಬಯಿ ಪೊಲೀಸರು ಇಂದು ಶುಕ್ರವಾರ 8 ಮಂದಿಯನ್ನು ಬಂಧಿಸಿದ್ದಾರೆ.

Advertisement

ನಗರ ಹೊರವಲಯದ ಕುರ್ಲಾದಲ್ಲಿನ  ಕಾಲ್‌ ಸೆಂಟರ್‌ ಮೂಲಕ ಈ ಜಾಲ ಕಳೆದ ಎರಡು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಈ ಅವಧಿಯಲ್ಲಿ  ಈ ಜಾಲ ಸಾವಿರಾರು ಮಂದಿಯನ್ನು ವಂಚಿಸಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಮುಂಬಯಿ ಪೊಲೀಸ್‌ ಕ್ರೈಂ ಬ್ರಾಂಚ್‌ ನ ಐದನೇ ಘಟಕದ ಸಿಬಂದಿಗಳು ಕಾಲ್‌ ಸೆಂಟರ್‌ಗೆ ದಾಳಿ ನಡೆಸಿ ಮ್ಯಾನೇಜರ್‌ ಇ ಮುಕದಂ (26), ಸೇಲ್ಸ್‌ ಎಕ್ಸಿಕ್ಯುಟಿವ್‌ ಅರ್ಬಾಜ್‌ ಗಫ‌ರ್‌ ಶೇಖ್‌ (20) ಮತ್ತು ಟೆಲಿ ಕಾಲರ್‌ ಶಾರುಖ್‌ ಅನ್ಸಾರಿ (20), ಜುನೇದ್‌ ಶೇಖ್‌ (22), ಕಾದಿರ್‌ ಸಯ್ಯದ್‌ (20), ಆತಿಫ್ ಶೇಖ್‌ (20), ಅಹಾದ್‌ ಖಾನ್‌ (21) ಮತ್ತು ಸಲ್ಮಾನ್‌ ಖಾನ್‌ (23) ಅವರನ್ನು ಬಂಧಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next