Advertisement

100 ರ ಬದಲು 112ಕ್ಕೆ ಕರೆ ಮಾಡಿ

04:50 PM Jan 30, 2021 | Team Udayavani |

ಹೊಳಲ್ಕೆರೆ: ಅಪರಾಧ ಮುಕ್ತ ಹಾಗೂ ಆರೋಗ್ಯ ಪೂರಕ ಸಮಾಜಕ್ಕಾಗಿ ಡಯಲ್‌ 112 ಸಂಖ್ಯೆಯನ್ನು ಜಿಲ್ಲೆಯಲ್ಲಿ ಲಾಂಚ್‌ ಮಾಡಿದೆ. ದೇಶದ ಎಲ್ಲಾ ಸೇವೆಗಳು ಇನ್ನು ಮುಂದೆ 112 ರ ಸಂಖ್ಯೆ ಮೂಲಕ ಪಡೆದುಕೊಳ್ಳಲು ಸಾರ್ವಜನಿಕರಿಗೆ ಸಹಕಾರಿಯಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

Advertisement

ಪಟ್ಟಣದ ಬಸ್‌ ನಿಲ್ದಾಣದಲ್ಲಿ ಪೊಲೀಸ್‌ ಇಲಾಖೆ ಹಮ್ಮಿಕೊಂಡಿದ್ದ 112 ಡಯಲ್‌ ತುರ್ತು ಸ್ವಂದನಾ ಸಹಾಯ ವಾಹನಗಳಿಗೆ ಚಾಲನೆ ನೀಡಿ, ಜನರಲ್ಲಿ ಡಯಲ್‌ 112 ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕ ಚಾಲನೆ ನೀಡಿ ಮಾತನಾಡಿದರು.

ದೇಶದಲ್ಲಿರುವ ಪೊಲೀಸ್‌ ಸೇವೆ ಸೇರಿದಂತೆ ವೈದ್ಯಕೀಯ, ಅಗ್ನಿಶಾಮಕ, ಅಪಘಾತ, ತುರ್ತು ಸೇವೆಗೆ ಈ ಮೊದಲು ಉಪಯೋಗಿಸುತ್ತಿದ್ದ 108, 100 ಸಂಖ್ಯೆ ಬದಲಿಗೆ ಎಲ್ಲಾ ಸೌಲಭ್ಯಗಳು ಡಯಲ್‌ 112 ರಲ್ಲಿ ಸಿಕ್ಕಲಿವೆ. ಜನರು ಪೊಲೀಸ್‌ ಸೇವೆಗೆ 100, ವೈದ್ಯಕೀಯ ಸೇವೆಗೆ 108 ಇದ್ದ ಸಂಖ್ಯೆ ರದ್ದುಪಡಿಸಿದ್ದು, ಬದಲಿಗೆ 112 ಡಯಲ್‌ ಸಂಖ್ಯೆ ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ಸಂಕಷ್ಟದಲ್ಲಿರುವ ಜನರಿಗೆ ಗೋಲ್ಡನ್‌ ಸಮಯದಲ್ಲಿ ಸೇವೆ ಸಿಕ್ಕುವುದರಿಂದ ಅಪರಾಧ, ಅಪಘಾತ, ಅನೈತಿಕ, ಅಕ್ರಮ ಮುಕ್ತ, ಆರೋಗ್ಯ ಪೂರಕ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಿದೆ ಎಂದರುತಿಳಿಸಿದರು.

ಇದೊಂದು ನೂತನ ತಂತ್ರಜ್ಞಾನವಾಗಿರುವ ತ್ವರಿತಗತಿಯ ಸೇವೆಯಾಗಿದೆ. ನಾಗರಿಕರ ಸಮಸ್ಯೆಗಳಿಗೆ ಪೊಲೀಸರಿಂದ ಶೀಘ್ರ ಪರಿಹಾರ ಹಾಗೂ ರಕ್ಷಣೆ ಮತ್ತು ಸೇವೆ ಸಿಕ್ಕುವಂತಾಗಲು ದೇಶದಲ್ಲಿ ಇನ್ನು ಮುಂದೆ 112 ಡಯಲ್‌ ಸೇವೆ ಆರಂಭಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಿನ ವ್ಯಾಪ್ತಿಯಲ್ಲಿರುವ ಜನರ ಸಮಸ್ಯೆಗಳಿಗೆ ತಕ್ಷಣವೇ ಪೊಲೀಸ್‌ ಸೌಲಭ್ಯ ಕಲ್ಪಿಸುವ ಮೂಲಕ ಅಪರಾಧ, ಅಪಘಾತ, ಕಳ್ಳತನ, ಸಾಮಾಜಿಕ ಅವಮಾನ, ಕಾಲೇಜುಗಳ ಹತ್ತಿರ ವಿದ್ಯಾರ್ಥಿಗಳಿಗೆ ರ್ಯಾಗಿಂಗ್‌, ಅಗ್ನಿ ದುರಂತ ಮತ್ತಿತರೆ ಸಂದರ್ಭದಲ್ಲಿ ತಕ್ಷಣವೇ 112 ಸಂಖ್ಯೆಗೆ ಕರೆ ಮಾಡಿದಲ್ಲಿ ತಕ್ಷಣವೇ ನಿಮ್ಮ ಹತ್ತಿರಕ್ಕೆ ಪೊಲೀಸ್‌ ವಾಹನ ಜತೆ ಸಿಬ್ಬಂದಿ ಆಗಮಿಸಿ ಸೌಲಭ್ಯ ಕಲ್ಪಿಸಿಕೊಡಲಿದ್ದಾರೆ ಎಂದರು.

ಇದನ್ನೂ ಓದಿ:ಗ್ರಾಮ ವಾಸ್ತವ್ಯದಿಂದ ಹೊಸ ಅನುಭವ: ಅಜಯಸಿಂಗ್‌

Advertisement

ಯಾವುದೇ ವ್ಯಕ್ತಿ ಸಂಕಷ್ಟದಲ್ಲಿದ್ದಾಗ ಅಗ್ನಿ ದುರಂತ, ಪೊಲೀಸ್‌, ವೈದ್ಯಕೀಯ ಸೇವೆ ಬೇಕಿದ್ದಾಗ ಡಯಲ್‌ 112 ಕರೆ ಮಾಡಿದ 15 ನಿಮಿಷಗಳಲ್ಲಿ ಪಟ್ಟಣದ ಪ್ರದೇಶದಲ್ಲಿ ಹಾಗೂ 30 ನಿಮಿಷದೊಳಗೆ ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಮೂಲಕ ಜನರಿಗೆ ತುರ್ತು ಸೇವೆ ಕಲ್ಪಿಸಲಾಗುತ್ತಿದೆ ಎಂದರು. ಹೆಚ್ಚುವರಿ ಪೊಲೀಸ್‌ ಅ ಧೀಕ್ಷಕರಾದ ಮಹಾಲಿಂಗ ಬಿ.ನಂದಗಾಂವಿ, ಡಿ.ವೈ.ಎಸ್ಪಿ ಪಾಂಡುರಂಗ, ವೃತ್ತ ನಿರೀಕ್ಷ ರವೀಶ್‌, ಪಿಎಸ್‌ಐಗಳಾದ ವಿಶ್ವನಾಥ, ರಾಮಚಂದ್ರಪ್ಪ,ಬಾಹುಬಲಿ, ಆಶ್ವಿ‌ನಿ ಸೇರಿದಂತೆ ಹಲವಾರು ಜನರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next