Advertisement

108ಕ್ಕೆ ಕರೆಮಾಡಿ: ತುರ್ತುಸ್ಥಿತಿಗೆ ಸಿದ್ಧ

12:43 AM Nov 08, 2019 | Sriram |

ಕಾಸರಗೋಡು: ಅಪಘಾತ, ರೋಗಿಗಳ ಅನಿವಾರ್ಯ ಸಹಿತ ಸಾರ್ವತ್ರಿಕ ವಾಗಿ ತಲೆದೋರುವ ತುರ್ತು ಪರಿಸ್ಥಿತಿಗಳಲ್ಲಿ ತತ್‌ಕ್ಷಣ ಆಸ್ಪತ್ರೆಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕ್ಷಿಪ್ರಗತಿಯ ಆ್ಯಂಬುಲೆನ್ಸ್‌ ಸೇವೆ ಸಿದ್ಧವಾಗಿದೆ.

Advertisement

ಆರೋಗ್ಯ ಇಲಾಖೆ ವತಿಯಿಂದ ಜಾರಿ ಗೊಳಿಸಲಾದ “ಕನಿವ್‌(ಅನುಕಂಪ)’ ಪ್ರಕಾರ ಜಿಲ್ಲೆಗೆ 10 ಆ್ಯಂಬುಲೆನ್ಸ್‌ ಮಂಜೂರು ಮಾಡಲಾಗಿದ್ದು, ವಿವಿಧ ವಲಯಗಳಲ್ಲಿ ನೇಮಿಸಲಾಗಿದೆ. ತುರ್ತು ಸ್ಥಿತಿಯಲ್ಲಿ “108′ ನಂಬ್ರಕ್ಕೆ ಕರೆಮಾಡಿದರೆ ತತ್‌ಕ್ಷಣ ಆ ಪ್ರದೇಶಕ್ಕೆ ಸಮೀಪದಲ್ಲಿರುವ ಆ್ಯಂಬು ಲೆನ್ಸ್‌ ಧಾವಿಸಿ ರೋಗಿಯನ್ನು ಆಸ್ಪತ್ರೆಗೆ ರವಾನಿಸಲಿದೆ.

ಕಾಸರಗೋಡು ಜನರಲ್‌ ಆಸ್ಪತ್ರೆ, ಕಾಂಞಂಗಾಡಿನ ಜಿಲ್ಲಾ ಆಸ್ಪತ್ರೆ, ಪೆರಿಯ, ಮಂಗಲ್ಪಾಡಿ, ಮಂಜೇ ಶ್ವರ, ಉದುಮ, ಮುಳ್ಳೇರಿಯ, ಬೇಡಡ್ಕ, ಕುಂಬಳೆ, ಚೆರು ವತ್ತೂರು ಸಹಿತ ಪ್ರದೇಶ ಗಳಲ್ಲಿ ಆ್ಯಂಬು ಲೆನ್ಸ್‌ಗಳು ಚಟುವಟಿಕೆ ನಡೆಸಲಿವೆ. ಚಾಲಕ ಮತ್ತು ತರಬೇತಿ ಲಭಿಸಿದ ಸಿಬಂದಿ ವಾಹನ ದಲ್ಲಿರುವರು. ಇವುಗಳಲ್ಲಿ 5 ವಾಹನಗಳು ದಿನದ 24 ತಾಸು, ಉಳಿದವು 12 ತಾಸು ಚಟುವಟಿಕೆ ನಡೆಸಲಿದ್ದು, ಸಾರ್ವಜನಿಕರು ಸೇವೆ ಪಡೆದುಕೊಳ್ಳಬಹುದು. ಈ ಆ್ಯಂಬು ಲೆನ್ಸ್‌ಗೆ ಸಂಬಂಧಪಟ್ಟ ಆನ್‌ಲೈನ್‌ ಚಟುವಟಿಕೆಗಳು ತಿರುವನಂತಪುರಂನಲ್ಲಿ ನಿಯಂತ್ರಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next