Advertisement

California case: ಕುಟುಂಬವನ್ನು ಹತ್ಯೆ ಗೈದು, ಆತ್ಯಹತ್ಯೆ ಮಾಡಿಕೊಂಡಿದ್ದ ಟೆಕಿ?

09:21 PM Feb 16, 2024 | Pranav MS |

ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದ ಐಷಾರಾಮಿ ಮನೆಯೊಂದರಲ್ಲಿ ಇತ್ತೀಚೆಗೆ ಕೇರಳ ಮೂಲದ ಕುಟುಂಬದ ಸದಸ್ಯರ ಮೃತದೇಹಗಳ ಪತ್ತೆ ಪ್ರಕರಣದಲ್ಲಿ, ಆ ಕುಟುಂಬದ ಯಜಮಾನನೇ ಶಂಕಿತ ಆರೋಪಿ ಎಂದು ಪೊಲೀಸರು ಅಂದಾಜಿಸಿದ್ದಾರೆ. ಘಟನೆಯಲ್ಲಿ ಟೆಕಿ ದಂಪತಿಯಾದ ಆನಂದ್‌ ಸುಜಿತ್‌ ಹೆನ್ರಿ(42), ಪತ್ನಿ ಅಲೈಸ್‌ ಪ್ರಿಯಾಂಕ(40) ಮತ್ತು ಅವಳಿ ಮಕ್ಕಳಾದ 4 ವರ್ಷದ ನೋಹ್‌ ಮತ್ತು ನೈಥಾನ್‌ ಮೃತಪಟ್ಟಿದ್ದರು.

Advertisement

ಪ್ರಕರಣದ ತನಿಖೆ ನಡೆಸಿರುವ ಕ್ಯಾಲಿಫೋರ್ನಿಯಾ ಪೊಲೀಸರು, ಆನಂದ್‌ ತಮ್ಮ ಪರವಾನಗಿ ಹೊಂದಿರುವ 9ಎಂಎಂ ಹ್ಯಾಂಡ್‌ಗನ್‌ನಿಂದ ಪತ್ನಿ ಅಲೈಸ್‌ರನ್ನು ಕೊಲೆ ಮಾಡಿದ್ದಾರೆ. ನಂತರ ತಮ್ಮ ಇಬ್ಬರು ಸಣ್ಣ ಮಕ್ಕಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ಬಳಿಕ ತಾವೂ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಆನಂದ್‌ ಅವರು ಮೆಟಾ ಕಂಪನಿಯ ಮಾಜಿ ಉದ್ಯೋಗಿಯಾಗಿದ್ದು, ಅಲೈಸ್‌ ಅವರು ಸೀನಿಯರ್‌ ಅನಾಲಿಸ್ಟ್‌ ಆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next