Advertisement

ಮೂರು ಕಣ್ಣುಗಳ ಕರು ಸಾವು

09:48 PM Jan 20, 2022 | Team Udayavani |

ರಾಜನಂದಗಾಂವ್‌: ಛತ್ತೀಸ್‌ಗಡದ ರಾಜನಂದಗಾಂವ್‌ನ ಲೋಧಿ ಗ್ರಾಮದಲ್ಲಿ ಜ.13ರಂದು ಜನಿಸಿದ್ದ ಮೂರು ಕಣ್ಣುಗಳ ಕರು ಅಸುನೀಗಿದೆ.

Advertisement

ಗ್ರಾಮದ ರೈತ ಹೇಮಂತ ಚಾಂಡೇಲ್‌ ಅವರ ಮನೆಯಲ್ಲಿ ಜರ್ಸಿ ದನ ಈ ವಿಚಿತ್ರ ಕರುವಿಗೆ ಜನ್ಮನೀಡಿತ್ತು. ಅಸುನೀಗಿದ ಕರುವಿನ ಅಂತ್ಯಕ್ರಿಯೆ ನಡೆಸಲಾಗಿದೆ. ದೇವರೇ ನಮ್ಮ ಮನೆಗೆ ಗೋವಿನ ರೂಪದಲ್ಲಿ ಅಲ್ಪ ಕಾಲಕ್ಕೆ ಬಂದಿದ್ದಿರಬಹುದು ಎಂದು ತಿಳಿದುಕೊಳ್ಳಬೇಕಷ್ಟೇ’ ಎಂದು  ಅವರು ಹೇಳಿದ್ದಾರೆ.

ಕರು ಅಸುನೀಗಿದ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆಯೇ ಸ್ಥಳೀಯರು ಹೇಮಂತ ಅವರ ಮನೆಗೆ ಆಗಮಿಸಿ, ಕರುವಿಗೆ ಅಂತಿಮ ನಮನ ಸಲ್ಲಿಸಿದರು.

ಜ.13ರಂದು ಕರು ಜನಿಸಿದ ಸುದ್ದಿ ತಿಳಿದ ಬಳಿಕ ಸ್ಥಳೀಯರು ಅದೊಂದು ದೇವರ ಅವತಾರ ಎಂದು ಭಾವಿಸಿ, ಅದಕ್ಕೆ ಪೂಜೆಯನ್ನೂ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next